ಚನ್ನಪಟ್ಟಣ ಉಪ ಸಮರ: ಒಬ್ಬರ ಕೈಯಲ್ಲಿ ಹಾರೆ, ಮತ್ತೊಬ್ಬರ ಕೈಯಲ್ಲಿ ಗುದ್ದಲಿ ಕೊಟ್ಟಿದ್ದೇವೆ-ತನ್ವೀರ್ ಸೇಠ್ ವ್ಯಂಗ್ಯ

KannadaprabhaNewsNetwork |  
Published : Oct 18, 2024, 12:17 AM ISTUpdated : Oct 18, 2024, 04:25 AM IST
Tanveer Sait

ಸಾರಾಂಶ

ರಾಷ್ಟ್ರ ರಾಜಕಾರಣವೇ ಬೇರೆ. ಚನ್ನಪಟ್ಟಣ ಪರಿಸ್ಥಿತಿಯೇ ಬೇರೆ. ಉಪ ಚುನಾವಣೆಯಲ್ಲಿ ಚನ್ನಪಟ್ಟಣ ಬಹಳ‌ ವಿಶೇಷವಾಗಿದೆ. ಶಿಗ್ಗಾವಿ, ಸಂಡೂರು ಒಂದಾದರೇ, ಚನ್ನಪಟ್ಟಣ ಅತ್ಯಂತ ಕುತೂಹಲ ಮೂಡಿಸಿದೆ. ಈಗಾಗಲೇ ಅಭ್ಯರ್ಥಿ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ.  

 ಮೈಸೂರು : ಒಬ್ಬರ ಕೈಯಲ್ಲಿ ಹಾರೆ, ಮತ್ತೊಬ್ಬರ ಕೈಯಲ್ಲಿ ಗುದ್ದಲಿ ಕೊಟ್ಟಿದ್ದೇವೆ. ಯಾರಿಗೆ ಟಿಕೆಟ್ ಸಿಕ್ಕರೂ ಒಬ್ಬರು ತೋಡುತ್ತಾರೆ, ಮತ್ತೊಬ್ಬರು ಎಳೆಯುತ್ತಾರೆ. ನಮ್ಮ ಗೆಲುವು ನಿಶ್ಚಿತ‌ ಎಂದು ಚನ್ನಪಟ್ಟಣ ಉಪ ಚುನಾವಣೆ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಯ್ಕೆ ಕಸರತ್ತಿನ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶಾಸಕ ತನ್ವೀರ್ ಸೇಠ್ ವ್ಯಂಗ್ಯವಾಡಿದರು.

ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೆ ಟಿಕೆಟ್ ಸಿಕ್ಕರೂ ಅವರ ಪಿಚ್ ಅನ್ನು ಅವರೇ ಅಗೆಯುತ್ತಾರೆ ಎಂದು ಕುಟುಕಿದರು.

ರಾಷ್ಟ್ರ ರಾಜಕಾರಣವೇ ಬೇರೆ. ಚನ್ನಪಟ್ಟಣ ಪರಿಸ್ಥಿತಿಯೇ ಬೇರೆ. ಉಪ ಚುನಾವಣೆಯಲ್ಲಿ ಚನ್ನಪಟ್ಟಣ ಬಹಳ‌ ವಿಶೇಷವಾಗಿದೆ. ಶಿಗ್ಗಾವಿ, ಸಂಡೂರು ಒಂದಾದರೇ, ಚನ್ನಪಟ್ಟಣ ಅತ್ಯಂತ ಕುತೂಹಲ ಮೂಡಿಸಿದೆ. ಈಗಾಗಲೇ ಅಭ್ಯರ್ಥಿ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಮೈತ್ರಿ ಅಭ್ಯರ್ಥಿ ಯಾರೂ, ಕಾಂಗ್ರೆಸ್‌ನಿಂದ ಯಾರು ಎಂಬುದು ಪ್ರಶ್ನೆ. ಡಿಸಿಎಂ ನಾನೇ ಅಭ್ಯರ್ಥಿ ಅಂತ ಹೇಳಿದ್ದಾರೆ. ಆದಾಗ್ಯೂ ಪರಿಸ್ಥಿತಿಗೆ ಅನುಗುಣವಾಗಿ ಕಾಂಗ್ರೆಸ್ ಅಭ್ಯರ್ಥಿ ಹಾಕುವ ಕೆಲಸ ಮಾಡುತ್ತೆ ಎಂದರು.

4-5 ದಿನದಲ್ಲಿ ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಆಗುತ್ತೆ. ಡಿ.ಕೆ.ಸುರೇಶ್ ರಾಜಕೀಯವಾಗಿ ಮುಂದುವರಿಯಬೇಕಾದ ಅನಿವಾರ್ಯತೆ ಪಕ್ಷಕ್ಕೆ ಇದೆ. ಸಾಮಾಜಿಕ ನ್ಯಾಯದ ವಿಚಾರದಲ್ಲಿ ಶಿಗ್ಗಾವಿಯಲ್ಲಿ ಮುಸ್ಲಿಂ ಅಭ್ಯರ್ಥಿ ನಿಲ್ಲಿಸಿ ಅಂತ ನಾನು ಕೂಡ ಮನವಿ ಮಾಡಿದ್ದೇನೆ ಎಂದರು.

ಬಿಜೆಪಿ ರಾಜಕಾರಣ ಏನು ಅಂತ ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ರಾಜಕಾರಣವನ್ನು ನೀಚ ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ. ಸರ್ಕಾರ ಕಾನೂನು ಬದ್ಧವಾಗಿ ನಡೆದುಕೊಂಡಿದೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಒಂದು ಸಮುದಾಯ ಗುರಿಯಾಗಿ ಇಟ್ಟುಕೊಂಡು ಅಮಾಯಕರ ಮೇಲೆ ಕೇಸ್ ಹಾಕಿತ್ತು. ಕೇವಲ ಒಂದು ಸಮುದಾಯದ ಹೆಸರು ಬಂದಾಗ ಬಿಜೆಪಿ ರಾಜಕೀಯ ಬೇಳೆ ಬೇಯಿಸಿಕೊಳ್ಳೋದು ತಪ್ಪು. ಹುಬ್ಬಳಿ ಪ್ರಕರಣ ಮಾತ್ರವಲ್ಲ‌ ಇತರ ಪ್ರಕರಣಗಳ ಬಗ್ಗೆ ಮಾತಾಡಬೇಕಲ್ಲ.

ಕಾನೂನಾತ್ಮಕವಾಗಿ ನಾವು ನಡೆದುಕೊಂಡಿದ್ದೇವೆ. ಆ ಕೇಸ್ ಈಗ ವಾಪಾಸ್ ಪಡೆದಿದ್ದೇವೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಮರೀಗೌಡ ರಾಜೀನಾಮೆ ತನಿಖೆಗೆ ಒಳ್ಳೆಯದೇ:

ಮರಿಗೌಡ ಆರೋಗ್ಯದ ಕಾರಣಕ್ಕೆ ಮುಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ ಎಂದಿದ್ದಾರೆ. ರಾಜೀನಾಮೆ ತನಿಖೆಗೆ ಒಳ್ಳೆಯದೇ. ಮರಿಗೌಡ ಸಿಎಂ ಆಪ್ತರು. ಪಾರದರ್ಶಕ ತನಿಖೆ ಸಹಕಾರಿ ಆಗ್ಲಿ ಅಂತ ರಾಜೀನಾಮೆ ಕೊಟ್ಟಿದ್ದಾರೆ. ಮುಡಾದಿಂದ ಸಿಎಂಗೆ ಆಂಟಿರುವ ಕಳಂಕ ದೂರು ಆಗುತ್ತೆ ಎಂದರು.

2021ರಲ್ಲಿ ಮುಡಾ ಸಭೆ ವಿರುದ್ಧವಾಗಿ 50:50 ತೀರ್ಮಾನ ಆಗಿದೆ‌. ಒಂದೇ ಸಭೆಯಲ್ಲಿ 175 50:50 ಸೈಟ್ ಕೊಟ್ಟಿದ್ದಾರೆ. ಅದರಲ್ಲಿ ‌ಸಿದ್ದರಾಮಯ್ಯ ಅವರ‌ ಸೈಟ್ ವಾಪಸ್ ಬಂದಿದೆ. ಉಳಿದ 161 ಸೈಟ್ ವಾಪಸ್ ಪಡೆಯಬೇಕು. ಎಲ್ಲಾ 175 ಸೈಟ್ ರದ್ದಾಗಬೇಕು ಎಂದು ಅವರು ಆಗ್ರಹಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಗೃಹಲಕ್ಷ್ಮಿ ಸ್ಕೀಂ ₹5000 ಕೋಟಿ ಹಗರಣ: ಬಿಜೆಪಿ
ಬೆಳಗಾವಿ ಸದನದಲ್ಲೂ ಸಿಎಂ ಕುರ್ಚಿಯ ಕದನ!