ಸಿಎಂ ಬದಲಾವಣೆ ಗೊಂದಲಗಳಿಗೆ ಶೀಘ್ರ ತೆರೆ: ಕೃಷಿ ಸಚಿವ ಸಿಆರ್‌ಎಸ್

KannadaprabhaNewsNetwork |  
Published : Nov 24, 2025, 01:30 AM ISTUpdated : Nov 24, 2025, 10:50 AM IST
Chaluvarayaswamy

ಸಾರಾಂಶ

ಎರಡೂವರೆ ವರ್ಷ ಆಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂಬ ಕೂಗೆದ್ದಿದೆ. ಈ ಸಂಬಂಧ ಹೈಕಮಾಂಡ್ ಸೂಕ್ತ ಸಂದೇಶ ಕೊಡಬೇಕಾಗುತ್ತದೆ. ಕೆಲವೊಂದು ಸಂದರ್ಭ ಹೀಗೆ ಆಗುವುದು ಸಾಮಾನ್ಯ. ಕರ್ನಾಟಕ ದೊಡ್ಡ ರಾಜ್ಯವಾಗಿರುವುದರಿಂದ ಸೂಕ್ತ ಸಮಯದಲ್ಲಿ ಸರಿಯಾದ ತೀರ್ಮಾನ ಕೈಗೊಳ್ಳುವರು.

 ಮಂಡ್ಯ :  ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಎದ್ದಿರುವ ಗೊಂದಲಗಳಿಗೆಲ್ಲಾ ಹೈಕಮಾಂಡ್ ಶೀಘ್ರದಲ್ಲೇ ತೆರೆ ಎಳೆಯಲಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಎರಡೂವರೆ ವರ್ಷ ಆಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂಬ ಕೂಗೆದ್ದಿದೆ. ಈ ಸಂಬಂಧ ಹೈಕಮಾಂಡ್ ಸೂಕ್ತ ಸಂದೇಶ ಕೊಡಬೇಕಾಗುತ್ತದೆ. ಕೆಲವೊಂದು ಸಂದರ್ಭ ಹೀಗೆ ಆಗುವುದು ಸಾಮಾನ್ಯ. ಕರ್ನಾಟಕ ದೊಡ್ಡ ರಾಜ್ಯವಾಗಿರುವುದರಿಂದ ಸೂಕ್ತ ಸಮಯದಲ್ಲಿ ಸರಿಯಾದ ತೀರ್ಮಾನ ಕೈಗೊಳ್ಳುವರು ಎಂದು ಸುದ್ದಿಗಾರರಿಗೆ ತಿಳಿಸಿದರು.

ರಾಜಕೀಯ ವಿವೇಕ ಇಲ್ಲ

ಶಾಸಕರ ಖರೀದಿ ವಿಚಾರವಾಗಿ ಮಾತನಾಡಿರುವ ವಿಪಕ್ಷ ನಾಯಕ ಆರ್.ಅಶೋಕ್, ಛಲವಾದಿ ನಾರಾಯಣ ಸ್ವಾಮಿ ಅವರಿಗೆ ರಾಜಕೀಯ ವಿವೇಕ ಇಲ್ಲ. ಕಾಂಗ್ರೆಸ್ ೫೦ ವರ್ಷ ಆಡಳಿತ ಮಾಡಿದಾಗ ದೇಶದಲ್ಲಿ ಭ್ರಷ್ಟಾಚಾರ ಇರಲಿಲ್ಲ. ಭ್ರಷ್ಟಾಚಾರ ಶುರುವಾಗಿದ್ದರೆ ಅದು ಬಿಜೆಪಿಯಿಂದ ಮಾತ್ರ. ಅವರು ನನ್ನ ಎದುರು ಮಾತನಾಡಲಿ, ಇಲ್ಲವೇ ಬಹಿರಂಗ ಚರ್ಚೆಗೆ ಬರಲಿ. ಅಲ್ಲಿ ಮಾತನಾಡೋಣ. ಬಿಜೆಪಿಯವರ ಐದು ವರ್ಷದ ನಡವಳಿಕೆ ಎಲ್ಲರಿಗೂ ಗೊತ್ತಿದೆ ಎಂದು ಛೇಡಿಸಿದರು.

ಬಿಜೆಪಿಯವರು ಎಷ್ಟು ಸೀರಿಯಲ್ ಶುರು ಮಾಡಿದ್ದರು. ಎಲ್ಲವೂ ಅಂತ್ಯ ಕಂಡಿವೆ. ಗ್ಯಾರಂಟಿ ಕೊಡಕ್ಕಾಗಲ್ಲ ಎಂದರು ಸಕ್ಸಸ್ ಆಯ್ತು. ಅಭಿವೃದ್ಧಿಗೆ ಹಣವಿಲ್ಲ ಎಂದರು ಒಬ್ಬೊಬ್ಬ ಶಾಸಕರಿಗೂ 50 ಕೋಟಿ ರು. ಕೊಟ್ಟಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ 60 ಕೋಟಿ ರು. ವಿಶೇಷ ಅನುದಾನ ಕೊಟ್ಟಿದ್ದಾರೆ. ಆಡಳಿತದ ಬಗ್ಗೆ ಮಾಡಿದ ಆರೋಪ ಕೂಡ ದೂರವಾಯಿತು. ಲಘುವಾಗಿ ಮಾತನಾಡುವುದನ್ನು ಬಿಟ್ಟು ಪ್ರಾಮಾಣಿಕವಾಗಿ ನನ್ನ ಮುಂದೆ ಚರ್ಚೆ ಮಾಡಲಿ ಎಂದರು.

ಬಂಡವಾಳ ಗೊತ್ತಾಗಿಯೇ ಬಿಜೆಪಿ ಹಿಂದೆ ಹೋಗಿದ್ದಾರೆ

ರಾಜಕೀಯ ಕ್ರಾಂತಿ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ ಬಗ್ಗೆ ವ್ಯಂಗ್ಯವಾಡಿ, ಅವರನ್ನು ಕರೆದುಕೊಂಡು ಹೋಗಿ ಸಿಎಂ ಮಾಡುವುದಕ್ಕೆ ಅದು ಕಾಂಗ್ರೆಸ್‌ ಪಕ್ಷವಲ್ಲ. ಕುಮಾರಸ್ವಾಮಿಗೆ ತಮ್ಮ ಬಂಡವಾಳ ಗೊತ್ತಾಗಿಯೇ ಬಿಜೆಪಿ ಹಿಂದೆ ಹೋಗಿದ್ದಾರೆ.

ಬಿಜೆಪಿಯಲ್ಲಿ ಇವರ ಆಟ ನಡೆಯೋಲ್ಲ, ಇವರನ್ನು ಎಂದಿಗೂ ಸಿಎಂ ಮಾಡುವುದಿಲ್ಲ ಎಂದು ಖಡಕ್ಕಾಗಿ ಹೇಳಿದರು.

ಈ ವೇಳೆ ಶಾಸಕ ಪಿ.ರವಿಕುಮಾರ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಎನ್‌. ಅಪ್ಪಾಜಿಗೌಡ ಇತರರು ಇದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸರ್ಕಾರದ ಒಳ್ಳೆ ಯೋಜನೆ ಪರವಾಗಿ ಫಲಾನುಭವಿಗಳು ನಿಲ್ಲಬೇಕು: ಸಿಎಂ ಸಿದ್ದರಾಮಯ್ಯ
ಮುಂಬೈ ಮೇಯರ್‌ ಹುದ್ದೆ ಅವಧಿ ಹಂಚಿಕೆಗೆ ಸೇನೆ ಸದಸ್ಯರ ಪಟ್ಟು