ಕನ್ನಡಪ್ರಭ ವಾರ್ತೆ ಕೋಲಾರ
ತಾಲೂಕಿನ ಕಾಳಹಸ್ತಿಪುರ ಗೇಟ್ ಸಮೀಪದ ರತ್ನ ಕನ್ವೇಷನ್ ಹಾಲ್‌ನಲ್ಲಿ ಜಿಲ್ಲಾ ಬಿಜೆಪಿ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಬಡತನ ನಿರ್ಮೂಲನ ಮಾಡುವುದಾಗಿ ಹೇಳಿ ಏನೊಂದು ಅಭಿವೃದ್ದಿ ಕಾರ್ಯಗಳು ಇಲ್ಲವಾಗಿದ್ದು ಮುಂದಿನ ದಿನಗಳಲ್ಲಿ ಕೋಲಾರ ಜಿಲ್ಲೆ ಕಾಂಗ್ರೆಸ್ ಮುಕ್ತವಾಗಲಿದೆ ಎಂದು ಭವಿಷ್ಯ ನುಡಿದರು. ರಾಜ್ಯದ 28 ಸ್ಥಾನ ಬಿಜೆಪಿಗೆ
ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ೨೮ ಸ್ಥಾನಗಳಲ್ಲಿ ೨೮ ಸ್ಥಾನಗಳು ಬಿಜೆಪಿ ಪಾಲಾಗುವುದು ಖಚಿತವಾಗಿದೆ, ಬಿಜೆಪಿ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಸಚಿವರು ಟಿಕೆಟ್ ನನಗೆ ಬೇಡ, ನಿನಗೆ ಬೇಡ ಎಂಬಂತೆ ಕಿತ್ತಾಡುವಂತಾಗಿರುವುದು ಕಾಂಗ್ರೆಸ್ಸಿನವರಿಗೆ ಬಿಜೆಪಿ ವಿರುದ್ಧ ಸ್ಪರ್ಧಿಸಲು ಹಿಂದೇಟು ಹಾಕುತ್ತಿರುವುದು ಜನಜನಿತವಾಗಿದೆ ಎಂದರು.ಡೀಸಿ ರಾಜಕಾರಣಿಗಳ ಕೈಗೊಂಬೆ
ಅಲ್ಪಸಂಖ್ಯಾತ ಸಮುದಾಯದವರಿಗೆ ಸಿಎಂ ಸಿದ್ದರಾಮಯ್ಯ ೧೦ ಸಾವಿರ ಕೋಟಿ ರೂ ಹಂಚಿಕೆ ಮಾಡುವುದಾಗಿ ಹೇಳಿದ್ದಾರೆ, ಅದೇ ರೀತಿ ರಾಜ್ಯದ ಪರಿಶಿಷ್ಟ ಜಾತಿ/ಪಂಗಡ ಸೇರಿದಂತೆ ಎಲ್ಲಾ ಸಮುದಾಯಗಳಿಗೂ ಎಷ್ಟೆಷ್ಟು ಸಾವಿರ ಕೋಟಿ ಹಂಚಿಕೆ ಮಾಡುತ್ತಾರೆಂಬುದನ್ನೂ ಪ್ರಕಟಿಸಿದ ನಂತರ ತಾಕತ್ತು ಇದ್ದರೆ ಅವರು ಹಂಚಿಕೆ ಮಾಡಲಿ ಎಂದು ಸವಾಲ್ ಹಾಕಿದರು.
ರಾಹುಲ್ ಗಾಂಧಿ ಭಾರತ್ ಜೋಡೋ ಬದಲೂ ಭಾರತ್ ತೋಡೋ ಎಂಬಂತೆ ಕಾಂಗ್ರೆಸ್ ಪಕ್ಷದ ಡಿ.ಕೆ.ಸುರೇಶ್ ಕುಮಾರ್ ದಕ್ಷಿಣ ಭಾರತದ ಪ್ರತ್ಯೇಕ ರಾಷ್ಟ್ರವನ್ನಾಗಿ ಮಾಡಲು ಪ್ರಸ್ತಾಪಿಸಿರುವುದು ಖಂಡನೀಯ, ಭಾರತ್ ಜೋಡೋ ಯಾತ್ರೆಯಲ್ಲಿ ಜನರಿಗೆ ರಾಹುಲ್ ಮಾದರಿ ಮತ್ತೊಬ್ಬರನ್ನು ತೋರಿಸುವ ಮೂಲಕ ಜನರಿಗೆ ಯಾಮಾರಿಸಿ ದ್ವಿಪಾತ್ರ ಅಭಿನಯದ ಸಿನಿಮಾ ತೋರಿಸುತ್ತಿದ್ದಾರೆ ಎಂದು ವ್ಯಂಗವಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ಮಾಜಿ ಶಾಸಕರಾದ ವೈ.ಸಂಪಂಗಿ, ಮಂಜುನಾಥಗೌಡ, ಬಿ.ಪಿ.ವೆಂಕಟಮುನಿಯಪ್ಪ, ಜಿಲ್ಲಾ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ಎಂ.ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಮುಳಬಾಗಿಲು ಸಂಪತ್, ಜಿಲ್ಲಾಕಾರ್ಯದರ್ಶಿ ಕೃಷ್ಣ, ಬಂಗಾರಪೇಟೆ ಚಂದ್ರಾರೆಡ್ಡಿ, ವಕ್ತಾರ ನರೇಂದ್ರ ರಂಗಪ್ಪ, ರಘುನಾಥ್, ಜಯಚಂದ್ರ ಇದ್ದರು.