ಶಾಸಕ ಮುನಿರತ್ನ ಗಡಿಪಾರು ಮಾಡಲು ಆಗ್ರಹ

KannadaprabhaNewsNetwork | Published : Sep 18, 2024 1:45 AM

ಸಾರಾಂಶ

ದಲಿತರ ಹಾಗೂ ಒಕ್ಕಲಿಗರ ಬಗ್ಗೆ ಕೀಳಾಗಿ ಮಾತನಾಡುವ ಮುನಿರತ್ನ ರವರ ಬಗ್ಗೆ ಕ್ರಮವಹಿಸದೆ ಅವರ ಪರ ನಿಲ್ಲುವ ಬಿಜೆಪಿಗರಿಗೆ ನಾಚಿಕೆಯಾಗಬೇಕು. ನಾಗಮಂಗಲ ಘಟನೆ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ಶಾಸಕ ಮುನಿರತ್ನರ ವರ್ತನೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ದಲಿತರ ಹಾಗೂ ಒಕ್ಕಲಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಶಾಸಕ ಮುನಿರತ್ನ ರವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಹಿಂದೆ ಫುಟ್‌ಪಾತ್‌ನಲ್ಲಿ ಇಡ್ಲಿ ಮಾರುತ್ತಿದ್ದ ಮುನಿರತ್ನ ರವರು ಸಾವಿರಾರು ಕೋಟಿ ರೂಗಳ ಒಡೆಯನಾಗಿರುವುದು ಹೇಗೆ, ಬಿಬಿಎಂಪಿ ಸದಸ್ಯರಾಗಿದ್ದಾಗ ೧೨೦೦ ಕೋಟಿ ರು.ಗಳ ಅಕ್ರಮ ವ್ಯವಹಾರ ಮಾಡಿ ಅದರ ದಾಖಲೆಗಳನ್ನು ಸುಟ್ಟು ಹಾಕಿದ್ದರು ಎಂದು ಶಾಸಕ ನಾರಾಯಣಸ್ವಾಮಿ ಆರೋಪಿಸಿದರು.

ಬಿಜೆಪಿ ವಿರುದ್ಧ ಟೀಕೆ

ಸಚಿವರಾಗಿದ್ದಾಗ ಸಾವಿರಾರು ಕೋಟಿ ಹಗರಣ ಮಾಡಿದ್ದಾರೆ, ಇಂತಹ ವಂಚನೆಕೋರ ಬೆವರು ಸುರಿಸಿ ದುಡಿಯುವ ಶ್ರಮಿಕರ ಬಳಿ ಲಂಚ ಕೇಳುವುದುಸರಿಯೇ ಎಂದು ಪ್ರಶ್ನಿಸಿದ ಅವರು. ದಲಿತರ ಹಾಗೂ ಒಕ್ಕಲಿಗರ ಬಗ್ಗೆ ಕೀಳಾಗಿ ಮಾತನಾಡುವ ಮುನಿರತ್ನ ರವರ ಬಗ್ಗೆ ಕ್ರಮವಹಿಸದೆ ಅವರ ಪರ ನಿಲ್ಲುವ ಬಿಜೆಪಿಗರಿಗೆ ನಾಚಿಕೆಯಾಗಬೇಕು ಎಂದು ಬಿಜೆಪಿ ನಾಯಕರನ್ನು ಟೀಕಿಸಿದರು.ಬಿಜೆಪಿಗರಿಗೆ ಬರೀ ದಲಿತರ ಮತಗಳು ಬೇಕೆನ್ನುವರು ಅಷ್ಟೇ ಅವರ ಅಭಿವೃದ್ದಿ ಬೇಕಿಲ್ಲ, ಚುನಾವಣೆ ಬಂದಾಗ ಮಾತ್ರ ದಲಿತರ ಪರ ಧ್ವನಿ ಎತ್ತುವ ಸ್ಥಳಿಯ ಬಿಜೆಪಿ ಮುಖಮಡರು ಈಗ ಎಲ್ಲಿದ್ದೀರಿ ಸ್ವಾಮಿ ನೀವು ಯಾಕೆ ದಲಿತ ವಿರೋಧಿ ಮುನಿರತ್ನ ಬಗ್ಗೆ ಬಾಯಿ ತೆಗೆಯುತ್ತಿಲ್ಲ ಎಂದು ಹೆಸರು ಹೇಳದೆ ಮಾಜಿ ಶಾಸಕ ವೆಂಕಟಮುನಿಯಪ್ಪ,ಬಿ.ವಿ.ಮಹೇಶ್ ರನ್ನು ತರಾಟೆಗೆ ತೆಗೆದುಕೊಂಡರು. ನಾಗಮಂಗಲ ಘಟನೆ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ನಿಮ್ಮ ಪಕ್ಷದ ಶಾಸಕರು ದಲಿತರ ಬಗ್ಗೆ ಅವಹೇಳನವಾಗಿ ಮಾತನಾಡಿದ್ದಾರೆ ಅವರ ಬಗ್ಗೆ ಯಾಕೆ ಸ್ವಾಮಿ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.ಮುನಿರತ್ನ ವಿರುದ್ಧ ದೂರು

ಮುನಿರತ್ನ ಒಬ್ಬ ಶಾಸಕರಾಗಲು ವೋಟರ್ ಐಡಿಗಳ ಗೋಲ್ ಮಾಲ್ ಮಾಡಿದರು, ದಲಿತರ ಮತಗಳಿಂದ ಗೆದ್ದು ಈಗ ಅವರನ್ನೇ ಕೀಳಾಗಿ ಮಾತನಾಡುವ ಇಂತವರನ್ನು ಶಾಸಕರಾಗಿ ಮುಂದುವರೆಸಲು ನಾಲಾಯಕ್, ಆದ್ದರಿಂದ ಮುನಿರತ್ನ ಪ್ರಕರಣವನ್ನು ಎಸ್‌ಐಟಿ ತನಿಖೆ ಮಾಡಬೇಕು ಹಾಗೂ ಅವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟಿಸಿ ಬಳಿಕ ಸ್ಥಳಿಯ ಠಾಣೆಯಲ್ಲಿ ಮುನಿರತ್ನ ವಿರುದ್ಧ ದೂರು ದಾಖಲಿಸಿದರು.ಈ ವೇಳೆ ಡಿಸಿಸಿ ಬ್ಯಾಂಕಿನ ನಿರ್ದೇಶಕ ಗೋವಿಂದರಾಜು,ಪುರಸಭೆ ಅಧ್ಯಕ್ಷ ಗೋವಿಂದ ಉಪಾಧ್ಯಕ್ಷೆ ಚಂದ್ರವೇಣಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋಪಾಲಗೌಡ,ಕೆ.ವಿ.ನಾಗರಾಜ್,ಚಂದ್ರು,ಕುAಬಾರಪಾಳ್ಯ ಮಂಜುನಾಥ್,ಕೆಡಿಎ ಅಧ್ಯಕ್ಷ ಗೋಪಾಲರೆಡ್ಡಿ, ರಂಗರಾಮಯ್ಯ, ಸುಹೇಲ್, ಅಣ್ಣಾದೊರೆ, ಬಿ.ವಿ.ಕೃಷ್ಣ,ಅರುಣಾಚಲಂಮಣಿ ಇತರರು ಇದ್ದರು.

Share this article