ಡಿಕೆಶಿ ಬಣದ 18 ಶಾಸಕರು, ಸಚಿವರಿಂದ ಡಿನ್ನರ್‌ ಪಾರ್ಟಿ

Published : Feb 27, 2026, 05:38 AM IST
DK Shivakumar

ಸಾರಾಂಶ

ಮಾಗಡಿ ಶಾಸಕ ಎಚ್‌.ಸಿ.ಬಾಲಕೃಷ್ಣ ಅವರ ಹುಟ್ಟುಹಬ್ಬದ ಆಚರಣೆ ಹೆಸರಲ್ಲಿ ಸುಮಾರು 18 ಶಾಸಕರು ಗುರುವಾರ ಒಂದೆಡೆ ಸೇರಿ ಕುತೂಹಲ ಮೂಡಿಸಿದ್ದಾರೆ. ಇದರಲ್ಲಿ ಕೆಲ ಸಚಿವರೂ ಇದ್ದಾರೆ. ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದ ಬಹುತೇಕ ಎಲ್ಲ ಶಾಸಕರೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಬಣದವರು ಎನ್ನಲಾಗಿದೆ

 ಬೆಂಗಳೂರು :  ಮಾಗಡಿ ಶಾಸಕ ಎಚ್‌.ಸಿ.ಬಾಲಕೃಷ್ಣ ಅವರ ಹುಟ್ಟುಹಬ್ಬದ ಆಚರಣೆ ಹೆಸರಲ್ಲಿ ಸುಮಾರು 18 ಶಾಸಕರು ಗುರುವಾರ ಒಂದೆಡೆ ಸೇರಿ ಕುತೂಹಲ ಮೂಡಿಸಿದ್ದಾರೆ. ಇದರಲ್ಲಿ ಕೆಲ ಸಚಿವರೂ ಇದ್ದಾರೆ. ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದ ಬಹುತೇಕ ಎಲ್ಲ ಶಾಸಕರೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಬಣದವರು ಎನ್ನಲಾಗಿದ್ದು, ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಹುಟ್ಟುಹಬ್ಬದ ಕಾರ್ಯಕ್ರಮ

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಶಾಸಕರಾದ ಶಿವಗಂಗಾ ಬಸವರಾಜು, ಕುಣಿಗಲ್‌ ಶಾಸಕ ಡಾ। ರಂಗನಾಥ್‌, ಸಚಿವ ಡಿ.ಸುಧಾಕರ್‌, ಸಿ.ಪಿ.ಯೋಗೇಶ್ವರ್‌, ನಯನಾ ಮೋಟಮ್ಮ, ಆನೇಕಲ್‌ ಶಿವಣ್ಣ ಸೇರಿದಂತೆ ಒಟ್ಟು 18 ಶಾಸಕರು ಭಾಗಿಯಾಗಿದ್ದು, ಈ ಸಂಬಂಧ ಫೋಟೋ ಕೂಡ ವೈರಲ್‌ ಆಗಿದೆ. ಇದು, ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಗೊಂದಲ ತೀವ್ರಗೊಳ್ಳುತ್ತಿರುವ ಸಮಯದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಬಣದ ಶಾಸಕರು ಒಟ್ಟಾಗಿ ಶಕ್ತಿ ಪ್ರದರ್ಶನದ ಪ್ರಯತ್ನ ನಡೆಸಿರಬಹುದು ಎಂಬ ಮಾತು ಕೇಳಿ ಬಂದಿದೆ.

ಈ ಮಧ್ಯೆ, ಶಾಸಕರು ಒಂದೆಡೆ ಸೇರಿದ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಸಿ.ಪಿ.ಯೋಗೇಶ್ವರ್‌, ಬಾಲಕೃಷ್ಣ ಅವರ ಹುಟ್ಟುಹಬ್ಬ ಇತ್ತು. ಖಾಸಗಿ ಹೋಟೆಲ್‌ನಲ್ಲಿ ಊಟಕ್ಕೆ ಕರೆದಿದ್ದರು. ಸುಮಾರು 40 ಶಾಸಕರು ಭಾಗಿದ್ದರು. ಬಾಲಕೃಷ್ಣ ಅವರಿಗೆ ಶುಭ ಕೋರಿ, ಊಟ ಮಾಡಿಕೊಂಡು ಬಂದಿದ್ದಾಗಿ ಹೇಳಿದರು.

- ನಾಯಕತ್ವ ಚರ್ಚೆ ಬೆನ್ನಲ್ಲೇ ಮೀಟಿಂಗ್‌

ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಬೆನ್ನಲ್ಲೇ ಡಿಕೆ ಬಣದ ಶಾಸಕರಿಂದ ಮೀಟಿಂಗ್‌

ಶಾಸಕ ಬಾಲಕೃಷ್ಣ ಹುಟ್ಟುಹಬ್ಬದ ನೆಪದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್‌ಲ್ಲಿ ಔತಣಕೂಟ

ಕಾರ್ಯಕ್ರಮದಲ್ಲಿ ಡಿಕೆಶಿ ಬಣದ 18 ಶಾಸಕರು, ಹಲವು ಸಚಿವರು ಭಾಗಿ. ಫೋಟೋ ವೈರಲ್‌

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ನಿರುದ್ಯೋಗಿಗಳಿಗೆ ಬಂಪರ್‌: 56,432 ಹುದ್ದೆ ಭರ್ತಿ ನಿರ್ಧಾರ
''ಮತ್ತೆ ಮೊಳಗಲಿದೆ ಜೆಡಿಎಸ್ ಕಹಳೆ: ಎಚ್ಡಿಕೆ 2028ಕ್ಕೆ ಸಿಎಂ''