ಇಂದು ಬೆಂಗ್ಳೂರಿಗೆ ಡಿಕೆಶಿಯಿಂದ 6ನೇ ಗ್ಯಾರಂಟಿ ಘೋಷಣೆ

Published : May 13, 2026, 06:35 AM IST
DK Shivakumar

ಸಾರಾಂಶ

ಇ-ಖಾತಾ, ನಂಬಿಕೆ ನಕ್ಷೆ ಸೇರಿ ಬೆಂಗಳೂರಿನ ಜನರಿಗಾಗಿ ಈಗಾಗಲೇ ಹಲವು ಯೋಜನೆಗಳನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದೆ. ಅದರ ಜತೆಗೆ ಇದೀಗ ಬೆಂಗಳೂರಿಗೆ ಸೀಮಿತವಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಬುಧವಾರ 6ನೇ ಗ್ಯಾರಂಟಿ ಪ್ರಕಟಿಸಲಿದ್ದಾರೆ.

 ಬೆಂಗಳೂರು :  ಇ-ಖಾತಾ, ನಂಬಿಕೆ ನಕ್ಷೆ ಸೇರಿ ಬೆಂಗಳೂರಿನ ಜನರಿಗಾಗಿ ಈಗಾಗಲೇ ಹಲವು ಯೋಜನೆಗಳನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದೆ. ಅದರ ಜತೆಗೆ ಇದೀಗ ಬೆಂಗಳೂರಿಗೆ ಸೀಮಿತವಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಬುಧವಾರ 6ನೇ ಗ್ಯಾರಂಟಿ ಪ್ರಕಟಿಸಲಿದ್ದಾರೆ.

6ನೇ ಗ್ಯಾರಂಟಿ ಘೋಷಿಸಲಾಗುತ್ತಿದೆ.

ಗ್ರೇಟರ್‌ ಬೆಂಗಳೂರು ವ್ಯಾಪ್ತಿಯ ಐದು ನಗರಪಾಲಿಕೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ರಾಜ್ಯ ಸರ್ಕಾರ, ಅದರ ಭಾಗವಾಗಿ 6ನೇ ಗ್ಯಾರಂಟಿ ಘೋಷಿಸಲಾಗುತ್ತಿದೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಕೌನ್ಸಿಲ್‌ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಲಿರುವ ಡಿ.ಕೆ. ಶಿವಕುಮಾರ್‌, ಬೆಂಗಳೂರಿನ ಅಭಿವೃದ್ಧಿಗೆ ಸರ್ಕಾರ ಅನುಷ್ಠಾನಗೊಳಿಸಲಿರುವ ಹೊಸ ಯೋಜನೆಗಳನ್ನು ಘೋಷಣೆ ಮಾಡಲಿದ್ದಾರೆ.

ಬೆಂಗಳೂರಿನ ಜನರಿಗೆ ನೆರವಾಗಲು ಘೋಷಣೆ

ಈ ಕುರಿತು ಮಂಗಳವಾರ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್‌, ಬೆಂಗಳೂರಿನ ಜನರಿಗೆ ನೆರವಾಗಲು ಬುಧವಾರ ಪ್ರಮುಖ ಘೋಷಣೆಗಳನ್ನು ಮಾಡಲಾಗುವುದು. ಈ ಕುರಿತು ಈಗಾಗಲೇ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಲಾಗಿದೆ. ಈ ಘೋಷಣೆಯಿಂದ ಬೆಂಗಳೂರಿನ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

2028ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ: ಬಿವೈವಿ
ವಿಜಯ್‌ಗೆ ಅಣ್ಣಾಡಿಎಂಕೆ 1 ಬಣದ ಬೆಂಬಲ : ಇಂದು ಬಹುಮತ ಸಲೀಸು