ಸಿಎಂ ಆಗುವ ಆಸೆ ಬಿಚ್ಚಿಟ್ಟ ಡಿ.ಕೆ.ಶಿವಕುಮಾರ್..!

Published : Apr 25, 2024, 09:58 AM IST
DK Shivakumar

ಸಾರಾಂಶ

. ನಾನು ಮುಖ್ಯಮಂತ್ರಿ ಆಗುತ್ತೇನೆಂಬ ನಂಬಿಕೆ ಇಟ್ಟುಕೊಂಡಿದ್ದೀರಿ, ಆದರೆ, ಪಕ್ಷ ಉಪಮುಖ್ಯಮಂತ್ರಿ ಮಾಡಿದ್ದು, ಯಾರೂ ಹತಾಶರಾಗಬೇಡಿ - ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಕನಕಪುರ  : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ಮುಖ್ಯಮಂತ್ರಿ ಹುದ್ದೆ ಆಸೆ ಬಿಚ್ಚಿಟ್ಟಿದ್ದಾರೆ. ಹಾರೋಹಳ್ಳಿಯಲ್ಲಿ ಮಂಗಳವಾರವಷ್ಟೇ ಸಿಎಂ ಹುದ್ದೆ ವಿಚಾರ ಪ್ರಸ್ತಾಪಿಸಿದ್ದ ಅವರು, ಇದೀಗ ನಾನು ಮುಖ್ಯಮಂತ್ರಿ ಆಗುತ್ತೇನೆಂಬ ನಂಬಿಕೆಯಿಂದ ಮತಹಾಕಿದ್ದೀರಿ, ಈ ವಿಚಾರದಲ್ಲಿ ಯಾರೂ ಹತಾಶರಾಗಬೇಡಿ ಎಂದು ಹೇಳಿದ್ದಾರೆ.

ದೊಡ್ಡಾಲಹಳ್ಳಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ನೀವು ಕೊಟ್ಟ ಶಕ್ತಿಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ. ನಾನು ಮುಖ್ಯಮಂತ್ರಿ ಆಗುತ್ತೇನೆಂಬ ನಂಬಿಕೆ ಇಟ್ಟುಕೊಂಡಿದ್ದೀರಿ, ಆದರೆ, ಪಕ್ಷ ಉಪಮುಖ್ಯಮಂತ್ರಿ ಮಾಡಿದ್ದು, ಯಾರೂ ಹತಾಶರಾಗಬೇಡಿ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಯಾವಾಗ ಏನು ಮಾಡ ಬೇಕೋ ಅದನ್ನು ಮಾಡುತ್ತದೆ ಎಂದರು. 

ಐದು ವರ್ಷಕ್ಕೊಮ್ಮೆ ದೇವೇಗೌಡ ಮತ್ತು ಕುಮಾರಸ್ವಾಮಿಯವರು ಕನಕಪುರ ದಲ್ಲಿ ಪ್ರವಾಸ ಮಾಡಿ ಹೋಗ್ತಾರೆ. ಅವರು ಎಷ್ಟು ಸಾರಿ ಬೇಕಾದರೂ ಬಂದು ಹೋಗಲಿ, ನನ್ನದೇನೂ ಅಭ್ಯಂತರವಿಲ್ಲ.  ಈ ತಾಲೂಕಿನ ಜನರ ಮಕ್ಕಳಾಗಿರುವ ನಮ್ಮ ಬದುಕು, ಜೀವನ, ಪಲ್ಲಕ್ಕಿ, ಕೊನೆಗೆ ಹೆಣ ಎಲ್ಲವೂ ಇದೇ ಮಣ್ಣಿನಲ್ಲಿ ಅಡಗಿದೆ ಎಂದು ತಿಳಿಸಿದರು.

ಹಾರೋಹಳ್ಳಿಯಲ್ಲಿ ಹೇಳಿದ್ದೇನು?: ನಾನು ಮುಖ್ಯಮಂತ್ರಿಯಾಗುತ್ತೇನೆಂದು ನೀವು ಮತಹಾಕಿ ಗೆಲ್ಲಿಸಿದ್ದೀರಿ. ನಿಮ್ಮ ನಂಬಿಕೆಗೆ ಮೋಸ ಆಗಲ್ಲ. ನಾನು ನಿಮ್ಮ ಸೇವೆ ಮಾಡಲಿದ್ದೇನೆ. ಡಿ.ಕೆ.ಸುರೇಶ್ ರನ್ನು ಈ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಹಾರೋಹಳ್ಳಿ ಚುನಾವಣಾ ಪ್ರಚಾರ ವೇಳೆ ಡಿ.ಕೆ.ಶಿವಕುಮಾ‌ರ್ ಹೇಳಿಕೊಂಡಿದ್ದರು. ನಮಗೆ ಕೆಟ್ಟ ಹೆಸರು ತರಬೇಕು, ನಮ್ಮ ಕಾರ್ಯಕರ್ತರು ಚುನಾವಣೆಯಲ್ಲಿ ಭಾಗವಹಿಸದಂತೆ ಮಾಡಬೇಕು ಎಂಬ ಉದ್ದೇಶದಿಂದ ಬಿಜೆಪಿ ಐಟಿ ದಾಳಿ ಮಾಡಿಸುತ್ತಿದೆ. ಬಿಜೆಪಿ ಹಾಗೂ ದಳದವರು ಯಾರೂ ಹಣ ಹಂಚುತ್ತಿಲ್ಲವೇ? ಅವರ ಮನೆಗಳ ಮೇಲೆ ಏಕೆ ದಾಳಿಯಾಗುತ್ತಿಲ್ಲ. ಅವರ ವಿಚಾರದಲ್ಲಿ ಐಟಿ ಅಧಿಕಾರಿಗಳು ಕಣ್ಮುಚ್ಚಿಕೂತಿದ್ದಾರೆ ಎಂದು ಕಿಡಿಕಾರಿದರು. ಯಾರ ಮನೆಗಳ ಮೇಲೆ ನಡೆಯಬೇಕು ದಾಳಿ ಎಂದು ಪಟ್ಟಿ ಮಾಡಿಕೊಂಡಿದ್ದಾರೆ. ಬೇರೆ ಕಡೆಗಳಲ್ಲಿ ಗುತ್ತಿಗೆದಾರರ ಮನೆಯಲ್ಲಿ ಹಣ ಸಿಕ್ಕರೂ ಇದು ಡಿ.ಕೆ.ಶಿವಕುಮಾರ್‌ ಅವರ ಹಣ ವೆಂದು ಹೇಳುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

PREV

Recommended Stories

ಎಲ್ಲರ ಎದ್ದುನಿಲ್ಲಿಸಿ ಬಿವೈವಿಗೆ ಬಿ.ಎಲ್‌.ಸಂತೋಷ್‌ ಚಪ್ಪಾಳೆ
ಕಮಲ-ದಳದಿಂದ ‘ಕೈ’ ಯೋಜನೆ ರದ್ದು ಅಸಾಧ್ಯ: ಡಿಕೆ