ನೀರಾವರಿ ಹೋರಾಟಕ್ಕೆ ಸಿದ್ಧ ಎಂದ ಎಚ್ಡಿ ದೇವೇಗೌಡಗೆ ಸಿಎಂ ಸಿದ್ದರಾಮಯ್ಯ, ಡಿಕೆ ಗುದ್ದು

Published : Feb 17, 2025, 07:08 AM IST
HD Devegowda birthday

ಸಾರಾಂಶ

ನೀರಾವರಿ ಹೋರಾಟಕ್ಕೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರೊಂದಿಗೆ ಕೈ ಜೋಡಿಸುವುದಾಗಿ ಹೇಳಿದ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ವಿರುದ್ಧ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ

ಬೆಂಗಳೂರು  : ನೀರಾವರಿ ಹೋರಾಟಕ್ಕೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರೊಂದಿಗೆ ಕೈ ಜೋಡಿಸುವುದಾಗಿ ಹೇಳಿದ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ವಿರುದ್ಧ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ

ಗೌಡ ಈಗ ಬಿಜೆಪಿ ಚಿಯರ್‌ ಲೀಡರ್‌

ದೇವೇಗೌಡರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಹಿಂದೆಲ್ಲಾ ರಾಜ್ಯದ ಪರ ಮುತ್ಸದ್ದಿ ರೀತಿ ಹೋರಾಡುತ್ತಿದ್ದ ದೇವೇಗೌಡರು ಈಗ ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ಚಿಯರ್ ಲೀಡರ್ ರೀತಿ ವರ್ತಿಸುತ್ತಿದ್ದಾರೆ. ಆದರೂ ಕಳಕಳಿಗೆ ನಮ್ಮ ಸಂಪೂರ್ಣ ಸಹಕಾರ ಇದೆ. ಅವರ ಹೋರಾಟಕ್ಕೆ ನಾನು ಮತ್ತು ಡಿಕೆಶಿ ಮಾತ್ರವಲ್ಲ, ಸಮಸ್ತ ಕರ್ನಾಟಕ ಜೊತೆ ಇರುತ್ತದೆ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

ಅಧಿಕಾರದಲ್ಲಿದ್ದರೂ  ಹೋರಾಟವೇಕೆ?

ಮೇಕೆದಾಟು, ಮಹದಾಯಿ ಯೋಜನೆಗೆ ಒಂದೇ ದಿನದಲ್ಲಿ ಸಹಿ ಮಾಡಿಸುತ್ತೇನೆ ಎಂದಿದ್ದ ದೇವೇಗೌಡರು ಈಗ ಪಕ್ಷಾತೀತವಾಗಿ ಹೋರಾಡೋಣ ಎನ್ನುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದುಕೊಂಡು ಹೋರಾಟ ಯಾಕೆ ಮಾಡಬೇಕು? ಅವರು ಯೋಜನೆಗೆ ಅನುಮತಿ ಕೊಡಿಸಲಿ, ಸಂಪೂರ್ಣ ಬೆಂಬಲದ ಜತೆಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ.

- ಡಿ.ಕೆ.ಶಿವಕುಮಾರ್‌ ಡಿಸಿಎಂ

PREV

Recommended Stories

ಮೇಲ್ಮನೆ: ಹೊರಟ್ಟಿ ಸ್ಥಾನಕ್ಕೆ ರೇಸಲ್ಲಿ ಹರಿ, ಬೋಸರಾಜು
ಯಾವ ಸಮುದಾಯವನ್ನು ಓಲೈಸುವ ಪ್ರಶ್ನೆಯೇ ಇಲ್ಲ : ಚಲುವರಾಯಸ್ವಾಮಿ