ನಿಗಮ-ಮಂಡಳಿ ಹುದ್ದೆಗೆ 500 ಜನರ ಪಟ್ಟಿ ವರಿಷ್ಠರಿಗೆ: ಡಿಕೆಶಿ

Published : Oct 23, 2026, 09:29 AM IST
CM DK Shivakumar

ಸಾರಾಂಶ

ನಿಗಮ- ಮಂಡಳಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ನಿರ್ದೇಶಕರುಗಳ ಹೆಸರುಗಳನ್ನು ಅಂತಿಮ ಮಾಡಿ ಹೈಕಮಾಂಡ್‌ಗೆ ಕೊಟ್ಟಿದ್ದೇವೆ. ಅದರಲ್ಲಿ 500 ಜನರ ಹೆಸರಿದೆ. ಹೊಸಬರಿಗೆ ಅವಕಾಶ ನೀಡಲು ಹೈಕಮಾಂಡ್‌ಗೆ ಕೋರಿದ್ದೇನೆ

ನವದೆಹಲಿ : ನಿಗಮ- ಮಂಡಳಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ನಿರ್ದೇಶಕರುಗಳ ಹೆಸರುಗಳನ್ನು ಅಂತಿಮ ಮಾಡಿ ಹೈಕಮಾಂಡ್‌ಗೆ ಕೊಟ್ಟಿದ್ದೇವೆ. ಅದರಲ್ಲಿ 500 ಜನರ ಹೆಸರಿದೆ. ಹೊಸಬರಿಗೆ ಅವಕಾಶ ನೀಡಲು ಹೈಕಮಾಂಡ್‌ಗೆ ಕೋರಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ದೆಹಲಿಗೆ ಬಂದ ಮೇಲೆ ಹೈಕಮಾಂಡ್ ಭೇಟಿ ಸಹಜ

ದೆಹಲಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌ ಅವರು, ದೆಹಲಿಗೆ ಬಂದ ಮೇಲೆ ಹೈಕಮಾಂಡ್ ಭೇಟಿ ಸಹಜ. ಕೆ.ಸಿ.ವೇಣುಗೋಪಾಲ್‌ ಅವರ ಜೊತೆ ನಿಗಮ-ಮಂಡಳಿ ನೇಮಕ ವಿಚಾರವಾಗಿ ಚರ್ಚೆ ಮಾಡಿದ್ದೇವೆ. ಹೊಸಬರಿಗೆ ಅವಕಾಶ ನೀಡಲು ಕೋರಿದ್ದೇನೆ. ಸಂಪುಟ ಭರ್ತಿ ಮಾಡುವ ವಿಚಾರವನ್ನು ಅವರ ಗಮನಕ್ಕೆ ತಂದಿದ್ದೇನೆ. ನೀತಿ ಸಂಹಿತೆ ಇರುವ ಕಾರಣ ನಿಗಮ ಮಂಡಳಿ ನಿರ್ದೇಶಕರ ಹೆಸರುಗಳನ್ನು ಘೋಷಣೆ ಮಾಡಿಲ್ಲ ಎಂದರು.

ರಾಜ್ಯದಲ್ಲಿ ನಡೆಯುತ್ತಿರುವ ಸ್ಟಿಂಗ್‌ ವಿಚಾರವಾಗಿ ಯಾವುದೇ ಚರ್ಚೆ ನಡೆಸಿಲ್ಲ ಎಂದು ತಿಳಿಸಿದರು.

- ನಿಗಮ-ಮಂಡಳಿ ಹುದ್ದೆಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಹಲವು ಆಕಾಂಕ್ಷಿಗಳು

- ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಭೇಟಿಯಾದ ಶಿವಕುಮಾರ್‌

- ಹೆಸರು ಅಂತಿಮ ಮಾಡಿ ಹೈಕಮಾಂಡ್‌ಗೆ ಕೊಟ್ಟಿರುವುದಾಗಿ ಸುದ್ದಿಗಾರರಿಗೆ ಹೇಳಿಕೆ

- ಆ ಪಟ್ಟಿಯಲ್ಲಿ 500 ಹೆಸರುಗಳಿವೆ. ಹೊಸಬರಿಗೆ ಅವಕಾಶ ಕೊಡಲು ಹೇಳಿದ್ದೇನೆ ಎಂದ ಡಿಕೆ

- ನೀತಿ ಸಂಹಿತೆ ಇರುವ ಕಾರಣ ನಿಗಮ-ಮಂಡಳಿ ಪಟ್ಟಿ ಪ್ರಕಟವಾಗಿಲ್ಲ ಎಂದ ಮುಖ್ಯಮಂತ್ರಿ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ನನ್ನ ಸಿಎಂ ಅಂತ ಒಪ್ಪದವ್ರು ನಂಗೆ ಪತ್ರ ಬರೆದಿದ್ದಾರೆ : ಡಿಕೆ ಶಿವಕುಮಾರ್
ಕೈಗಾರಿಕೆಗಾಗಿ ಜಾಗ ಕೇಳಿ ಡಿಕೆಗೆ ಎಚ್‌ಡಿಕೆ ಖಾರ ಪತ್ರ