ಕರ್ನಾಟಕದ ಪೇಸಿಎಂ ರೀತಿ ಡಿಎಂಕೆ ‘ಜಿ-ಪೇ’ ಅಭಿಯಾನ

KannadaprabhaNewsNetwork |  
Published : Apr 12, 2024, 01:06 AM ISTUpdated : Apr 12, 2024, 04:14 AM IST
ಜಿ ಪೇ ಪೋಸ್ಟರ್‌ | Kannada Prabha

ಸಾರಾಂಶ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ನವರು ಆಡಳಿತಾರೂಢ ಬಿಜೆಪಿ ವಿರುದ್ಧ ‘ಪೇಸಿಎಂ’ ಆಂದೋಲನ ನಡೆಸಿದ ಮಾದರಿಯಲ್ಲೇ ತಮಿಳುನಾಡಿನಲ್ಲಿ ಈಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಡಿಎಂಕೆ ವತಿಯಿಂದ ‘ಜಿ-ಪೇ’ ಪೋಸ್ಟರ್‌ ಆಂದೋಲನ ಆರಂಭವಾಗಿದೆ.

ಚೆನ್ನೈ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ನವರು ಆಡಳಿತಾರೂಢ ಬಿಜೆಪಿ ವಿರುದ್ಧ ‘ಪೇಸಿಎಂ’ ಆಂದೋಲನ ನಡೆಸಿದ ಮಾದರಿಯಲ್ಲೇ ತಮಿಳುನಾಡಿನಲ್ಲಿ ಈಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಡಿಎಂಕೆ ವತಿಯಿಂದ ‘ಜಿ-ಪೇ’ ಪೋಸ್ಟರ್‌ ಆಂದೋಲನ ಆರಂಭವಾಗಿದೆ.

ತಮಿಳುನಾಡಿನಾದ್ಯಂತ ಡಿಎಂಕೆ ಕಾರ್ಯಕರ್ತರು ಪ್ರಧಾನಿ ಮೋದಿ ಚಿತ್ರವಿರುವ ಬಾರ್‌ಕೋಡ್‌ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಅದನ್ನು ಸ್ಕ್ಯಾನ್‌ ಮಾಡಿದರೆ ಬಿಜೆಪಿ ಸರ್ಕಾರದ ‘ಹಗರಣಗಳ’ ಮಾಹಿತಿ ಲಭಿಸುತ್ತದೆ. ಜನಪ್ರಿಯ ಗೂಗಲ್‌ ಪೇ (ಜಿ-ಪೇ) ಆ್ಯಪ್‌ನ ಹೆಸರು ಅನುಕರಿಸಿ ಇದಕ್ಕೆ ‘ಜಿ-ಪೇ’ (ಮೋದಿಜಿ ಪೇ) ಎಂದು ಹೆಸರಿಡಲಾಗಿದೆ.

ಪ್ರಧಾನಿ ಮೋದಿ ಬುಧವಾರ ತಮಿಳುನಾಡಿನಲ್ಲಿ ಪ್ರಚಾರ ಸಮಾವೇಶ ನಡೆಸಿ ‘ಡಿಎಂಕೆ ಪಕ್ಷ ಈ ದೇಶದಲ್ಲಿ ಭ್ರಷ್ಟಾಚಾರಕ್ಕೆ ಮೊಟ್ಟಮೊದಲ ಕಾಪಿರೈಟ್‌ ಪಡೆದ ಪಕ್ಷ’ ಎಂದು ಟೀಕಿಸಿದ್ದರು. ಅದರ ಬೆನ್ನಲ್ಲೇ ಡಿಎಂಕೆಯಿಂದ ಮೋದಿ ವಿರುದ್ಧ ‘ಜಿ-ಪೇ’ ಪೋಸ್ಟರ್‌ ಸಮರ ಆರಂಭವಾಗಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ರಾಜಕೀಯದಲ್ಲಿ ಸಕ್ರಿಯ, ಚುನಾವಣೆಗೆ ಮಾತ್ರ ಸ್ಪರ್ಧಿಸುವುದಿಲ್ಲ: ಎಚ್‌.ವಿಶ್ವನಾಥ್
ಮಮತಾ ಕಿರಿಕ್‌ ನಡುವೆ ಬಿಜೆಪಿ ಪ್ರಮಾಣ ಸಸ್ಪೆನ್ಸ್‌ - ಮೇ 9ರ ಪ್ರಮಾಣಕ್ಕೆ ಬಿಜೆಪಿ ಸಜ್ಜು