ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಮತ್ತು ಇಲ್ಲಿನ ಮಾಜಿ ಶಾಸಕ ಡಾ ಕೆ. ಸುಧಾಕರ್ ನಡುವೆ ವಿಧಾನಸಭಾ ಚುನಾವಣೆ ಸಮಯದಲ್ಲಿ ಶುರುವಾದ ಮಾತಿನ ಸಮರ ಲೋಕಸಭಾ ಚುನಾವಣೆಯಲ್ಲೂ ಮುಂದುವರಿದಿದೆ. ಮಂಗಳವಾರ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳೂ ಸೇರಿದಂತೆ ವಿವಿಧ ಯೋಜನೆಗಳು,ಕಾರ್ಯಕ್ರಮಗಳ ಕುರಿತು ವಸ್ತುಪ್ರದರ್ಶನ ಮಳಿಗೆಗೆ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತಾನಾಡಿದರು.ಪರೇಸಂದ್ರದಲ್ಲಿ ಸ್ಮಶಾನಕ್ಕೆ ಜಾಗ
ಸುಧಾಕರ್ ಯಾವತ್ತೂ ಒಬ್ಬ ದಲಿತನ ಜೊತೆ ಕೂತು ಮಾತಾಡಿಲ್ಲ. ಅವರೇನಿದ್ದರೂ ಶ್ರೀಮಂತರ ನಾಯಕ. ಆದರೆ ತಾನು ದಲಿತರಿಗಾಗಿ ಆರಿಸಿ ಬಂದಿರೋನು ಎಂದು ಹೇಳಿದರು.ಕೈ ಟಿಕೆಟ್‌ಗೆ ಸುಧಾಕರ್ ಯತ್ನ
ಡಾ.ಕೆ.ಸುಧಾಕರ್ ಕಾಂಗ್ರೆಸ್ ಟಿಕೆಟ್ಗಾಗಿ ಓಡಾಡುತ್ತಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಎಂಪಿ ಟಿಕೆಟ್ ಮಿಸ್ ಆದ್ರೆ, ಕಾಂಗ್ರೆಸ್ನಿಂದ ಬೆಂಗಳೂರು ಉತ್ತರದಲ್ಲಿ ಸ್ಪರ್ಧೆಗೆ ಪ್ರಯತ್ನ ಮಾಡ್ತಿದ್ದಾರೆ. ಬೆಂಗಳೂರು ಉತ್ತರದ ಕಾಂಗ್ರೆಸ್ ಟಿಕೆಟ್ಗಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಹೆಗಡೆ ವಿರುದ್ಧ ವಾಗ್ದಾಳಿಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಆನೆ ಹೋಗುತ್ತಿದ್ದರೆ ನಾಯಿಗಳು ಬೋಗಳುತ್ತವೆ ಎಂದು ಹೇಳಿದ್ದಾರೆ. ಇದರಲ್ಲಿ ನಮ್ಮ ಸಿದ್ದರಾಮಯ್ಯನವರು ಆನೆ, ಆ ಇನ್ನೊಂದು ಪ್ರಾಣಿ ಅನಂತ್ ಕುಮಾರ್ ಹೆಗಡೆ ಎಂದು ಟೀಕಿಸಿದರು.