ಉಚಿತ ಆರೋಗ್ಯ 10ನೇ ಗ್ಯಾರಂಟಿ ಯೋಜನೆ- ವಸತಿ 8, ಇ-ಖಾತಾ 9ನೇ ಗ್ಯಾರಂಟಿ ಸ್ಕೀಂ : ಡಿಕೆಶಿ

Published : Feb 23, 2026, 09:32 AM IST
DK Shivakumar

ಸಾರಾಂಶ

ಕರ್ನಾಟಕವು ಆರೋಗ್ಯ ಕ್ಷೇತ್ರದಲ್ಲಿ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಪ್ರತಿಪಾದಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ನಮ್ಮ ಕಾಂಗ್ರೆಸ್ ಸರ್ಕಾರ 10ನೇ ಗ್ಯಾರಂಟಿಯಾಗಿ ಎಲ್ಲರಿಗೂ ಉಚಿತ ಆರೋಗ್ಯ ಸೇವೆ ನೀಡುವ ಸಂಕಲ್ಪ ಮಾಡಿದೆ ಎಂದು ಘೋಷಿಸಿದ್ದಾರೆ.

  ಕಾರವಾರ : ಕರ್ನಾಟಕವು ಆರೋಗ್ಯ ಕ್ಷೇತ್ರದಲ್ಲಿ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಪ್ರತಿಪಾದಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ನಮ್ಮ ಕಾಂಗ್ರೆಸ್ ಸರ್ಕಾರ 10ನೇ ಗ್ಯಾರಂಟಿಯಾಗಿ ಎಲ್ಲರಿಗೂ ಉಚಿತ ಆರೋಗ್ಯ ಸೇವೆ ನೀಡುವ ಸಂಕಲ್ಪ ಮಾಡಿದೆ ಎಂದು ಘೋಷಿಸಿದ್ದಾರೆ.

ಈಗಾಗಲೇ ನಾವು 5 ಗ್ಯಾರಂಟಿ ಕೊಟ್ಟಿದ್ದೇವೆ

ಕಾರವಾರದಲ್ಲಿ ಭಾನುವಾರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಈಗಾಗಲೇ ನಾವು 5 ಗ್ಯಾರಂಟಿ ಕೊಟ್ಟಿದ್ದೇವೆ. ನಮ್ಮ 6ನೇ ಗ್ಯಾರಂಟಿ ಎಲ್ಲಾ ಬಡವರಿಗೆ ಭೂಮಿ ಕೊಡುವುದು, 7ನೇ ಗ್ಯಾರಂಟಿ ನೀರು, ನೀರಾವರಿ ಸೌಲಭ್ಯ ಒದಗಿಸುವುದು, 8ನೇ ಗ್ಯಾರಂಟಿ ಎಲ್ಲಾ ಬಡವರಿಗೆ ಮನೆ ನೀಡುವುದು, 9ನೇ ಗ್ಯಾರಂಟಿ ಇ-ಖಾತಾ. ಮುಂದಿನ ಹೆಜ್ಜೆಯಾಗಿ ಎಲ್ಲರಿಗೂ ಉಚಿತ ಆರೋಗ್ಯ ಒದಗಿಸುವ ‘ಆರೋಗ್ಯ ಗ್ಯಾರಂಟಿ’ ತರಲು ಸರ್ಕಾರ ಸಂಕಲ್ಪ ಮಾಡಿದೆ ಎಂದು ಹೇಳಿದರು.

ಗ್ರಾಪಂ, ತಾಪಂ ಜಿಪಂ ಚುನಾವಣೆ ಜೂನೊಳಗೆ: ಸಿಎಂ 

ಅಂಕೋಲಾ :  ಮುಂದಿನ ಜೂನ್ ತಿಂಗಳ ಒಳಗಾಗಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳ ಚುನಾವಣೆಯನ್ನು ನಡೆಸಲಾಗುವುದು. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನಲ್ಲಿ ಭಾನುವಾರ ಮಂಜಗುಣಿ-ಗಂಗಾವಳಿ ಸೇತುವೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಗೋಕರ್ಣವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಬೇಡಿಕೆ ಇದೆ. ಚುನಾವಣೆಗಳು ಮುಗಿದ ನಂತರ ಗೋಕರ್ಣವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಭರವಸೆ ನೀಡಿದರು.

ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಪುನರ್ ಪ್ರಸ್ತಾವ ಸಲ್ಲಿಸಲು ಸರ್ಕಾರ ನಿರ್ಧರಿಸಿದೆ ಎಂದರು.

ಆದರೆ, ಚುನಾವಣೆಗಳು ಸಮೀಪಿಸಿವೆ. ಜನಗಣತಿಯೂ ನಡೆಯಲಿದೆ. ಹೀಗಾಗಿ, ಸದ್ಯ ಹೊಸದಾಗಿ ಪಟ್ಟಣ ಪಂಚಾಯಿತಿ ರಚನೆ ಸಾಧ್ಯವಾಗದು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸಂಸದೆಯರ ಮುಂದೆಬಿಟ್ಟು ಪ್ರಧಾನಿ ಆಗಬೇಕೆ ? : ಮೋದಿ
ಗೌಡ, ಎಚ್‌ಡಿಕೆ ಜಾತಿವಾದಿಗಳಲ್ಲ, ಕುಟುಂಬವಾದಿಗಳು : ಸಿದ್ದರಾಮಯ್ಯ ತರಾಟೆ