ಎಂಎಸ್‌ಎಂಇ ಅಭಿವೃದ್ಧಿಗೆ ಸಂಪೂರ್ಣ ಸಹಕಾರ : ಸಚಿವೆ ಶೋಭಾ ಕರಂದ್ಲಾಜೆ

KannadaprabhaNewsNetwork |  
Published : Dec 21, 2025, 03:00 AM IST
FKCCI

ಸಾರಾಂಶ

ರಾಜ್ಯದ ಸಣ್ಣ ಕೈಗಾರಿಕೆಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಷ್ಟರ ಮಟ್ಟಿಗೆ ಅಭಿವೃದ್ಧಿ ಸಾಧಿಸಬೇಕು. ಕೇಂದ್ರ ಸರ್ಕಾರ ಎಂಎಸ್‌ಎಂಇ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭರವಸೆ ನೀಡಿದರು.

  ಬೆಂಗಳೂರು :  ರಾಜ್ಯದ ಸಣ್ಣ ಕೈಗಾರಿಕೆಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಷ್ಟರ ಮಟ್ಟಿಗೆ ಅಭಿವೃದ್ಧಿ ಸಾಧಿಸಬೇಕು. ಕೇಂದ್ರ ಸರ್ಕಾರ ಎಂಎಸ್‌ಎಂಇ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭರವಸೆ ನೀಡಿದರು.

ಶನಿವಾರ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಹಾಗೂ ಪೀಣ್ಯ ಕೈಗಾರಿಕಾ ಸಂಘದ ಸಹಯೋಗದಲ್ಲಿ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ಲೋಬಲ್ ಎಂಎಸ್‌ಎಂಇ ಕಾನ್‌ಕ್ಲೇವ್‌ 2026 ಲೋಗೋ ಅನಾವರಣಗೊಳಿಸಿ ಮಾತನಾಡಿದರು.

 ಕೈಗಾರಿಕಾ ಮಳಿಗೆಗಳ ಪ್ರದರ್ಶನಕ್ಕೆ ಸೀಮಿತಗೊಳ್ಳಬಾರದು

ಈ ಸಮಾವೇಶ ಕೇವಲ ಕೈಗಾರಿಕಾ ಮಳಿಗೆಗಳ ಪ್ರದರ್ಶನಕ್ಕೆ ಸೀಮಿತಗೊಳ್ಳಬಾರದು. ಅಂತಾರಾಷ್ಟ್ರೀಯ ತಂತ್ರಜ್ಞಾನ ಕುರಿತು ಅಧ್ಯಯನ ನಡೆಸುವಂತಾಗಬೇಕು. ರಫ್ತಿನ ಬಗ್ಗೆ ಕೇಂದ್ರೀಕರಿಸಿ ಹೆಚ್ಚಿನ ಅಧ್ಯಯನ ನಡೆಸಿ, ಭಾರತ ಸರ್ಕಾರಕ್ಕೆ ವರದಿ ನೀಡಬೇಕು. ಆಗ ಮಾತ್ರ ಎಂಎಸ್‌ಎಂಇಗಳ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾರೆಡ್ಡಿ, ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಪಿ.ದಾನಪ್ಪ, ಹಿರಿಯ ಉಪಾಧ್ಯಕ್ಷ ಟಿ.ಸಾಯಿರಾಂ ಪ್ರಸಾದ್‌, ಉಪಾಧ್ಯಕ್ಷರಾದ ಬಿ.ಪಿ.ಶಶಿಧರ್‌, ನಿಕಟಪೂರ್ವ ಅಧ್ಯಕ್ಷ ಎಂ.ಜಿ.ಬಾಲಕೃಷ್ಣ, ಗ್ಲೋಬಲ್‌ ಎಂಎಸ್‌ಎಂಇ ಕಾನ್‌ಕ್ಲೇವ್‌ ಚೇರ್ಮನ್‌ ಬಿ.ಸಿ.ತಿಪ್ಪೇಶಪ್ಪ ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷ ಎಂ.ಸಿ. ದಿನೇಶ್‌ ಸೇರಿ ಮತ್ತಿತರರು ಇದ್ದರು.

‘ಗ್ಲೋಬಲ್ ಎಂಎಸ್‌ಎಂಇ ಕಾನ್‌ಕ್ಲೇವ್

ಮೇ ತಿಂಗಳಲ್ಲಿ ಕಾನ್‌ಕ್ಲೇವ್ಮೂರನೇ ಆವೃತ್ತಿಯ ‘ಗ್ಲೋಬಲ್ ಎಂಎಸ್‌ಎಂಇ ಕಾನ್‌ಕ್ಲೇವ್ -2026’ ಮೇ 29, 30, 31 ರಂದು ಮೂರು ದಿನಗಳ ಕಾಲ ಅರಮನೆ ಮೈದಾನದಲ್ಲಿ ನಡೆಯಲಿದೆ. ಎಂಜಿನಿಯರಿಂಗ್, ಉತ್ಪಾದನೆ ಮತ್ತು ಸೇವಾವಲಯವನ್ನು ಗುರಿಯಾಗಿರಿಸಿಕೊಂಡು ಈ ಕಾರ್ಯಕ್ರಮ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿ ನೀತಿ ನಿರೂಪಣೆ ಮತ್ತು ತಂತ್ರಜ್ಞಾನ ಅಳವಡಿಕೆ ಕುರಿತು ಮೂರು ದಿನಗಳ ಚರ್ಚೆ ನಡೆಯಲಿದೆ. ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು 500 ಮಳಿಗೆಗಳ ವ್ಯವಸ್ಥೆ ಮಾಡಲಾಗುತ್ತಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬಿಜೆಪಿ ವಿರುದ್ಧ ‘ಚಿಲುಮೆ’ ಅಸ್ತ್ರಕ್ಕೆ ಸರ್ಕಾರ ಸಜ್ಜು
ಇಬ್ಬರನ್ನೂ ದೆಹಲಿಗೆ ಕರೆಸುತ್ತೇವೆ ಅಂತ ವರಿಷ್ಠರು ಹೇಳಿದ್ದಾರೆ: ಡಿಕೆ