ಮಹತ್ಕಾರ್ಯದ ಹೊಣೆ ನನ್ನ ಮೇಲಿದೆ: ಭಗವಂತನೇ ನನ್ನ ಕಳಿಸಿದ್ದಾನೆ: ಮೋದಿ

KannadaprabhaNewsNetwork |  
Published : May 26, 2024, 01:42 AM ISTUpdated : May 26, 2024, 04:12 AM IST
Narendra Modi

ಸಾರಾಂಶ

‘ದೇವರು ನನ್ನನ್ನು ಮಹತ್ಕಾರ್ಯವೊಂದನ್ನು ಮಾಡುವ ಸಲುವಾಗಿ ಕಳುಹಿಸಿದ್ದಾನೆ ಮತ್ತು ಆ ಕಾರ್ಯ ಮುಗಿಯುವವರೆಗೆ ಕೆಲಸ ಮಾಡುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಲ್ಲದೆ, ಯಾರಿಗೆ ನನ್ನ ಮೇಲೆ ನಂಬಿಕೆ ಇದೆಯೋ ಅವರು ನಂಬಿರುವವರೆಗೂ ನಾನು ಕೆಲಸ ಮಾಡುತ್ತೇನೆ ಎಂದು ನುಡಿದಿದ್ದಾರೆ.

ನವದೆಹಲಿ: ‘ದೇವರು ನನ್ನನ್ನು ಮಹತ್ಕಾರ್ಯವೊಂದನ್ನು ಮಾಡುವ ಸಲುವಾಗಿ ಕಳುಹಿಸಿದ್ದಾನೆ ಮತ್ತು ಆ ಕಾರ್ಯ ಮುಗಿಯುವವರೆಗೆ ಕೆಲಸ ಮಾಡುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಲ್ಲದೆ, ಯಾರಿಗೆ ನನ್ನ ಮೇಲೆ ನಂಬಿಕೆ ಇದೆಯೋ ಅವರು ನಂಬಿರುವವರೆಗೂ ನಾನು ಕೆಲಸ ಮಾಡುತ್ತೇನೆ ಎಂದು ನುಡಿದಿದ್ದಾರೆ.

ಮಾಡಬೇಕಿರುವ ಕಾರ್ಯದ ಕುರಿತಾಗಿ ನನಗೆ ದೇವರು ಮೊದಲೇ ಸುಳಿವು ನೀಡುವುದಿಲ್ಲ. ಹಾಗೆಯೇ ನಾನೂ ದೇವರಿಗೆ ಆ ಕುರಿತು ಪ್ರಶ್ನಿಸಲು ಸಾಧ್ಯವಿಲ್ಲ ಎಂಬುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ. ಕೆಲವೇ ದಿನಗಳ ಹಿಂದೆ ದೇವರೇ ತನ್ನನ್ನು 2047ರೊಳಗೆ ಭಾರತವನ್ನು ವಿಕಸಿತ ಭಾರತ ಮಾಡುವ ಸಲುವಾಗಿ ಕಳುಹಿಸಿರುವುದಾಗಿ ಸಂದರ್ಶನವೊಂದರಲ್ಲಿ ತಿಳಿಸಿದ್ದಕ್ಕೆ ಈ ರೀತಿ ಸ್ಪಷ್ಟನೆ ನೀಡಿದ್ದಾರೆ.

ಎನ್‌ಡಿಟಿವಿ ಸಂದರ್ಶನದಲ್ಲಿ ಮಾತನಾಡಿದ ಅವರು, ‘ನನ್ನ ಬಗ್ಗೆ ಕೆಲವು ಜನ ಕೀಳಾಗಿ ಮಾತಾಡುತ್ತಾರೆ. ಮತ್ತೆ ಕೆಲವು ಜನ ಹೊಗಳುತ್ತಾರೆ. ಆದರೆ ನನ್ನ ಮೇಲೆ ನಂಬಿಕೆ ಇಟ್ಟವರಿಗೆ ನೋವುಂಟು ಮಾಡಬಾರದು ಎಂಬ ಏಕಮೇವ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇನೆ’ ಎಂದಿದ್ದಾರೆ.ಇದೇ ವೇಳೆ, ‘ಕೆಲವರು ನನ್ನನ್ನು ಹುಚ್ಚ (ಕ್ರೇಜಿ) ಎನ್ನಬಹುದು. ಆದರೂ ಹೇಳುತ್ತಿದ್ದೇನೆ. ದೇವರು ನನ್ನನ್ನು ಮಹತ್ಕಾರ್ಯವೊಂದನ್ನು ಮಾಡುವ ಸಲುವಾಗಿ ಕಳುಹಿಸಿದ್ದಾನೆ. ಒಮ್ಮೆ ದೇವರ ಉದ್ದೇಶ ಈಡೇರಿತು ಎಂದರೆ ನನ್ನ ಕೆಲಸ ಮುಗಿಯಿತು ಎಂದರ್ಥ. ಅದಕ್ಕಾಗಿಯೇ ನಾನು ಸಂಪೂರ್ಣವಾಗಿ ದೇವರಿಗೆ ನನ್ನನ್ನು ಅರ್ಪಿಸಿಕೊಂಡಿದ್ದೇನೆ’ ಎಂದು ಹೇಳಿದ್ದಾರೆ.

‘ದೇವರು ನನ್ನ ಬಳಿ ಬಹಳ ಕೆಲಸ ಮಾಡಿಸುತ್ತಿದ್ದಾನೆ. ಆದರೆ ತನ್ನ ಮುಂದಿನ ಗುರಿ ಏನು ಎಂಬ ಸುಳಿವು ಬಿಟ್ಟುಕೊಡುವುದಿಲ್ಲ. ಅಲ್ಲದೆ, ನನ್ನ ಮುಂದಿನ ಕೆಲಸ ಏನು ಎಂದು ನಾವು ಆತನನ್ನು ಕೇಳಲು ಸಾಧ್ಯವಿಲ್ಲ’ ಎಂದು ನುಡಿದಿದ್ದಾರೆ.

ಪ್ರತಿಪಕ್ಷಗಳು ಶತ್ರುಗಳಲ್ಲ:

ಇದೇ ವೇಳೆ ಪ್ರತಿಪಕ್ಷಗಳನ್ನು ಶ್ಲಾಘಿಸಿದ ಮೋದಿ, ‘ನಾನು ಪ್ರತಿಪಕ್ಷ ನಾಯಕರನ್ನು ಶತ್ರುಗಳಾಗಿ ಪರಿಗಣಿಸುವುದಿಲ್ಲ. ಅವರನ್ನು ನನ್ನ ಜೊತೆಗೇ ಕರೆದೊಯ್ಯಲು ಬಯಸುವೆ. ಅವರೂ ಸಹ 60 ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ್ದು, ಪ್ರತಿಪಕ್ಷಗಳಿಂದ ಕಲಿಯುವುದು ಬಹಳಷ್ಟಿದೆ’ ಎಂದು ತಿಳಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಉತ್ತರ ಕರ್ನಾಟಕಕ್ಕೆ ₹15,000 ಕೋಟಿ : ಅಜಯ್‌
ಗೃಹಲಕ್ಷ್ಮಿ ಸ್ಕೀಂ ₹5000 ಕೋಟಿ ಹಗರಣ: ಬಿಜೆಪಿ