ಗೌರಿಬಿದನೂರು ನಗರಸಭೆ ಕೆಎಚ್‌ಪಿ ಬಣದ ತೆಕ್ಕೆಗೆ

KannadaprabhaNewsNetwork | Published : Sep 10, 2024 1:32 AM

ಸಾರಾಂಶ

27 ಜನ ಸದಸ್ಯರ ಬಲಾಬಲ ಹೊಂದಿರುವ ಗೌರಿಬಿದನೂರು ನಗರಸಭೆಯಲ್ಲಿ ಕಾಂಗ್ರೆಸ್ಸಿನ-15, ಜೆಡಿಎಸ್‌-೬, ಬಿಜೆಪಿ-03 ಉಳಿದಂತೆ 7 ಮಂದಿ ಪಕ್ಷೇತರ ನಗರಸಭೆ ಸದಸ್ಯರಿದ್ದಾರೆ. ಆದರೂ ಕೆಎಚ್‌ಪಿ ಬಣದ ಅಭ್ಯರ್ಥಿಗಳು ಜಯ ಸಾಧಿಸಿದಾದರೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ತೀವ್ರ ಕುತೂಹಲ ಕೆರಳಿಸಿದ್ದ ಗೌರಿಬಿದನೂರು ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಸೋಮವಾರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕೆಎಚ್‌ಪಿ ಬಣದ ಲಕ್ಷ್ಮೀನಾರಾಯಣ ಹಾಗು ಉಪಾಧ್ಯಕ್ಷರಾಗಿ ಫರೀದ್‌ ಆಯ್ಕೆಯಾಗಿದ್ದಾರೆ.

27 ಜನ ಸದಸ್ಯರ ಬಲಾಬಲ ಹೊಂದಿರುವ ಗೌರಿಬಿದನೂರು ನಗರಸಭೆಯಲ್ಲಿ ಕಾಂಗ್ರೆಸ್ಸಿನ-15, ಜೆಡಿಎಸ್‌-೬, ಬಿಜೆಪಿ-03 ಉಳಿದಂತೆ 7 ಮಂದಿ ಪಕ್ಷೇತರ ನಗರಸಭೆ ಸದಸ್ಯರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶಾಸಕ ಕೆ.ಹೆಚ್.‌ ಪುಟ್ಟಸ್ವಾಮಿಗೌಡ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ. ಅವರ ಬೆಂಬಲಿಗರೆಲ್ಲರೂ ಕೆಎಚ್‌ಪಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿಗಳ ಸೋಲು

ಅಧ್ಯಕ್ಷ ಸ್ಥಾನಕ್ಕೆ ಶಾಸಕ ಪುಟ್ಟಸ್ವಾಮಿಗೌಡ ಬೆಂಬಲಿತ 27ನೇ ವಾರ್ಡಿನ ಸದಸ್ಯ ಲಕ್ಷ್ಮೀನಾರಾಯಣ ಹಾಗು ಮಾಜಿ ಶಾಸಕ ಎನ್.ಹೆಚ್.‌ ಶಿವಶಂಕರರೆಡ್ಡಿರವರ ಬೆಂಬಲಿತವಾಗಿ 29ನೇ ವಾರ್ಡಿನ ಸುಬ್ಬರಾಜು ನಾಮಪತ್ರವನ್ನು ಸಲ್ಲಿಸಿದ್ದರು. ಉಪಾಧ್ಯಕ್ಷರ ಸ್ಥಾನಕ್ಕೆ ಶಾಸಕರ ಕಡೆಯಿಂದ 15ನೇ ವಾರ್ಡಿನ ಫರೀದ್‌ ಮತ್ತು ಮಾಜಿ ಶಾಸಕ ಕಡೆಯಿಂದ ೧೨ನೇ ವಾರ್ಡಿನ ವಿ. ಅಮರನಾಥ್‌ ನಾಮಪತ್ರ ಸಲ್ಲಿಸಿದ್ದರು.

ಕೆಎಚ್‌ಪಿ ಬಣ ಮೇಲುಗೈ

ಚುನಾವಣೆಯಲ್ಲಿ ಲಕ್ಷ್ಮೀನಾರಾಯಣ ಅವರಿಗೆ 17 ಮತಗಳು, ಸುಬ್ಬರಾಜು ರವರಿಗೆ ೧೩ ಮತಗಳು ಹಾಗು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಫರಿದ್‌ ಗೆ 16 ಮತ್ತು ಅಮರ್‌ನಾಥ್‌ ವಿ ರವರಿಗೆ 13 ಮತ ಪಡೆದಿದ್ದರು. ಹೆಚ್ಚು ಮತಗಳನ್ನು ಪಡೆದಿದ್ದ ಕೆ.ಹೆಚ್.ಪಿ. ಬಣದ ಅಭ್ಯರ್ಥಿಗಳಾದ ಲಕ್ಷ್ಮೀನಾರಾಯಣ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಫರೀದ್‌ ಜಯಗಳಿಸಿರುವುದಾಗಿ ಚುನಾವಣಾಧಿಕಾರಿಗಳು ಘೋಷಣೆ ಮಾಡಿದರು.

ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅಭಿನಂದಿಸಿ ಮಾತನಾಡಿ, ವಿಶೇಷ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರು ಹಾಗೂ ಶಾಸಕರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಪಟ್ಟಣದ ಜನತೆಗೆ ಮೂಲಭೂತ ಸವಲತ್ತುಗಳನ್ನು ಒದಗಿಸಿ ಅಭಿವೃದ್ಧಿ ಮಾಡುವುದರ ಮೂಲಕ ಆಡಳಿತವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುವ ಕೆಲಸ ಮಾಡಬೇಕು ಎಂದರು.

Share this article