;Resize=(412,232))
ನವದೆಹಲಿ: ಇತ್ತೀಚೆಗೆ ಸಂಘಟನಾತ್ಮಕ ಪುನಾರಚನೆ ಮಾಡಿದ್ದ ಬಿಜೆಪಿ, ಬುಧವಾರ ಎಲ್ಲ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿಗೆ ಪಕ್ಷದ ಉಸ್ತುವಾರಿಗಳು ಮತ್ತು ಸಹ-ಪ್ರಭಾರಿಗಳನ್ನು ನೇಮಿಸಿದೆ. ಕರ್ನಾಟಕದ ಉಸ್ತುವಾರಿಯನ್ನಾಗಿ ಹರೀಶ್ ದ್ವಿವೇದಿ ಹಾಗೂ ಸಹ-ಪ್ರಭಾರಿಯಾಗಿ ಡಾ। ಕಸಂ ವೆಂಕಟೇಶ್ವರಲು ಅವರನ್ನು ನೇಮಿಸಿದೆ.
ಹರೀಶ್ ಉತ್ತರ ಪ್ರದೇಶ ಮೂಲದವರು. ವೆಂಕಟೇಶ್ವರಲು ತೆಲಂಗಾಣದವರು. ಈವರೆಗೆ ಕರ್ನಾಟಕಕ್ಕೆ ರಾಧಾಮೋಹನ ದಾಸ್ ಅಗರ್‌ವಾಲ್ ಬಿಜೆಪಿ ಪ್ರಭಾರಿ ಆಗಿದ್ದರು.
ಇನ್ನು ಕರ್ನಾಟಕದವರೇ ಆದ ರಾಜ್ಯಸಭಾ ಸದಸ್ಯ ಮಾ.ನಾಗರಾಜ ಅವರನ್ನು ಕೇರಳ ಪ್ರಭಾರಿ ಎಂದು ನೇಮಿಸಲಾಗಿದೆ. ಕರ್ನಾಟಕದ ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನಾರನ್ನು ತಮಿಳುನಾಡು ಸಹ-ಉಸ್ತುವಾರಿ ಎಂದು ಹೆಸರಿಸಲಾಗಿದೆ.
ಮಹತ್ವದ ಉತ್ತರ ಪ್ರದೇಶಕ್ಕೆ ವಿನೋದ್ ತಾವ್ಡೆ, ಮಹಾರಾಷ್ಟ್ರಕ್ಕೆ ಜಯ್ ಪಾಂಡಾ ಅವರನ್ನು ನೇಮಕ ಮಾಡಿದೆ. ಹರ್ಯಾಣ ಹಾಗೂ ಛತ್ತೀಸ್‌ಗಢಕ್ಕೆ ಸ್ಮೃತಿ ಇರಾನಿ, ಪ. ಬಂಗಾಳಕ್ಕೆ ಸುನಿಲ್ ಬನ್ಸಲ್, ಉತ್ತರಾಖಂಡಕ್ಕೆ ರಾಮ್ ಮಾಧವ್, ದೆಹಲಿಗೆ ವಿನಯ್ ಸಹಸ್ರಬುದ್ಧೆ, ತಮಿಳುನಾಡಿಗೆ ರಾಮ್ ಮಾಧವ್, ಪಂಜಾಬ್‌ಗೆ ಡಾ. ಸತೀಶ್ ಪುನಿಯಾ ಅವರು ಉಸ್ತುವಾರಿ ಆಗಲಿದ್ದಾರೆ. ಮಹಾರಾಷ್ಟ್ರಕ್ಕೆ ಅಮಿತ್ ಮಾಳವೀಯ ಅವರಿಗೆ ಮಹಾರಾಷ್ಟ್ರದ ಸಹ ಪ್ರಭಾರಿ ಜವಾಬ್ದಾರಿ ನೀಡಲಾಗಿದೆ.