ನನಗೆ 4ನೇ ಬಾರಿಗೆ ಹಾರ್ಟ್‌ ಸರ್ಜರಿ ಆಗ್ಲೆಂದು ಪ್ರಿಯಾಂಕ್‌ ಬಯಕೆ: ಎಚ್ಡಿಕೆ

Published : Oct 16, 2026, 07:19 AM IST
hd kumaraswamy and priyank kharge

ಸಾರಾಂಶ

‘ಬ್ಲಾಕ್ ಮೇಲ್ ಮಾಡೋರಿಗೆ ರಕ್ಷಣೆ ಕೊಡುವುದಕ್ಕೆ ಹಾಗೂ ಇಷ್ಟ ಬಂದವರನ್ನೆಲ್ಲ ಕರೆಸಿ ವಿಚಾರಣೆ ನಡೆಸುವುದಕ್ಕೆ ಗೃಹ ಇಲಾಖೆ ಏನು ನಿಮ್ಮ ಅಪ್ಪ ನಿಮಗೆ ಕೊಟ್ಟ ಬಳುವಳಿ ಅಲ್ಲ’ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು : ‘ಬ್ಲಾಕ್ ಮೇಲ್ ಮಾಡೋರಿಗೆ ರಕ್ಷಣೆ ಕೊಡುವುದಕ್ಕೆ ಹಾಗೂ ಇಷ್ಟ ಬಂದವರನ್ನೆಲ್ಲ ಕರೆಸಿ ವಿಚಾರಣೆ ನಡೆಸುವುದಕ್ಕೆ ಗೃಹ ಇಲಾಖೆ ಏನು ನಿಮ್ಮ ಅಪ್ಪ ನಿಮಗೆ ಕೊಟ್ಟ ಬಳುವಳಿ ಅಲ್ಲ’ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾಚಿಕೆ ಇಲ್ಲದೆ ಬ್ಲಾಕ್ ಮೇಲ್ ಮಾಡುವ ದುಷ್ಟರಿಗೆ ರಕ್ಷಣೆ ಕೊಡುತ್ತಾರೆ. ಅದನ್ನು ಪ್ರಶ್ನಿಸಿದ ನನ್ನನ್ನು ವಿಚಾರಣೆಗೆ ಕರೆಯುತ್ತಾರಂತೆ. ನಾನೇನು ನಿಮ್ಮಪ್ಪನ ಗಂಟು ತಿಂದಿದ್ದೀನಾ? ಬಂದು ಟಚ್ ಮಾಡಿ ನೋಡೋಣ. ಏನ್ ನಿನಗೆ ಇಷ್ಟ ಬಂದೋರೆನ್ನೆಲ್ಲ ಕರೆಸಿ ವಿಚಾರಣೆ ಮಾಡೋದಕ್ಕೆ ಗೃಹ ಇಲಾಖೆಯನ್ನು ನಿಮ್ಮಪ್ಪ ಕೊಟ್ಟಿಲ್ಲ ದರ್ಬಾರ್ ಮಾಡೋದಕ್ಕೆ ಎಂದು ಹರಿಹಾಯ್ದರು.

ಜನರ ಹಿತಕ್ಕಾಗಿ ದುಡಿಯುತ್ತಿರುವ ನನಗೆ ಅವರ ಇಚ್ಛೆಯಂತೆಯೇ ನಾಲ್ಕನೇ ಬಾರಿ ಹೃದಯಾಘಾತ ಆಗಲಿ. ಅವರು ನನ್ನ ಸಾವು ಬಯಸುತ್ತಿದ್ದಾರೆ. ಆದರೆ, ನಾನು ಜನರ ಹಿತದ ದೃಷ್ಟಿಯಿಂದ ಹೋರಾಟ ನಡೆಸುತ್ತಿದ್ದೇನೆ. ನನಗೆ ನಾಲ್ಕನೇ ಬಾರಿ ಹೃದಯಾಘಾತ ಆಗಿಬಿಡಲಿ, ಓಪನ್ ಹಾರ್ಟ್ ಸರ್ಜರಿ ಆಗಲಿ ಎನ್ನುವುದು ಗೃಹ ಸಚಿವರ ಬಯಕೆ ಎಂದು ತಿರುಗೇಟು ನೀಡಿದರು.

ನಿಮ್ಮ ಮುಖ್ಯಮಂತ್ರಿ ಅವರು ಸ್ಟಿಂಗ್ ಆಪರೇಷನ್ ಮಾಡುವವರ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ಸ್ಟಿಂಗ್ ಮಾಡೋನು ರಾಜಾರೋಷವಾಗಿ ತಿರುಗುತ್ತಿದ್ದಾನೆ. ಅವನನ್ನು ಟಚ್ ಮಾಡುವುದಕ್ಕೆ ನಿಮಗೆ ಯೋಗ್ಯತೆ ಇಲ್ಲ. ಇಲ್ಲಿ ಬಂದು ಜೆಡಿಎಸ್ ಹುಡುಗರಿಗೆ ಹೆದರಿಸುವುದಕ್ಕೆ ಬರುತ್ತಿರಿ. ಬಂದು ನೋಡು, ನನ್ನನ್ನು ಮತ್ತು ನನ್ನ ಕಾರ್ಯಕರ್ತರನ್ನು ಮುಟ್ಟಿ ನೋಡು. ಆಮೇಲೆ ಏನಾಗುತ್ತದೆ ಎಂಬುದನ್ನು ನೋಡುವಿಯಂತೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

ಅಧಿಕಾರದ ಮದ ಇಳಿಸುವುದು ಗೊತ್ತಿದೆ:

ಗೃಹ ಸಚಿವರ ಉದ್ದಟತನ, ಆ ಅಧಿಕಾರದ ಮದ ಇದೆಯಲ್ಲ ಅದನ್ನು ಇಳಿಸುವುದು ಹೇಗೆ ಎಂದು ನಮಗೆ ಗೊತ್ತಿದೆ. ಅದನ್ನು ಇಳಿಸೋಣಂತೆ ಎಂದು ಗುಡುಗಿದರು.

ಯಾವ ಕೆಪಿಎಸ್ಸಿ ಬಗ್ಗೆ ಇವತ್ತು ಯಾವ ಉತ್ತರ ಕೊಟ್ಟಿದ್ದೀರಿ ಪ್ರಿಯಾಂಕ್‌ ಖರ್ಗೆಯವರೇ? ನಾಲ್ಕು ಅಧಿಕಾರಿಗಳ ನೇಮಕವನ್ನು ಹೈಕೋರ್ಟ್ ಆದೇಶಿಸಿದರೆ ಸುಪ್ರೀಂಕೋರ್ಟ್‌ಗೆ ಯಾಕೆ ಹೋದಿರಿ? ನಿಮ್ಮ ಗೃಹ ಇಲಾಖೆಯಲ್ಲಿ ನಿಮಗೆ ಬೇಕಾದವರನ್ನೇ ಹಾಕಬೇಕು ಅಂತ ತೀರ್ಮಾನ ಮಾಡಿದ್ದೀರಿ. ನಿಮಗೆ ಬೇಕಾದ ರೀತಿಯಲ್ಲಿ ತನಿಖೆ ಬರೆಸಿಕೊಳ್ಳುತ್ತಿರುವುದನ್ನು ನೋಡಿದರೆ ಗೊತ್ತಾಗುವುದಿಲ್ಲವೇ ನಿಮ್ಮ ಹಣೆಬರಹ ಎಂದು ಲೇವಡಿ ಮಾಡಿದರು.

ಮುಖ್ಯಮಂತ್ರಿಗಳು ತಮ್ಮ ಬಗ್ಗೆ ಮಾತನಾಡುತ್ತಿಲ್ಲ, ಆದರೆ ಗೃಹ ಸಚಿವರು ಪ್ರತಿದಿನ ಬೆಳಗ್ಗೆ ಎದ್ದು ಮಾತನಾಡುತ್ತಿದ್ದಾರೆ. ಆ ಗೃಹ ಸಚಿವರಿಗೆ ಮೊದಲು ಲಗಾಮು ಹಾಕಿ. ಲಗಾಮು ಇಟ್ಟುಕೊಂಡು ಸರಿಯಾದ ದಾರಿಯಲ್ಲಿ ಕೆಲಸ ಮಾಡಿ. ನೀವು ಕೆರಳಿಸಿ ಮಾತನಾಡುವುದರಿಂದಲೇ ನಾವು ನಿಮಗೆ ಅದೇ ಭಾಷೆಯಲ್ಲಿ ಪ್ರತ್ಯುತ್ತರ ಕೊಡಬೇಕಾಗಿದೆ ಎಂದು ಕುಮಾರಸ್ವಾಮಿ ತೀಕ್ಷ್ಣವಾಗಿ ಹೇಳಿದರು.

- ಬ್ಲಾಕ್‌ಮೇಲ್‌ ಮಾಡೋರಿಗೆ ರಕ್ಷಣೆ ಕೊಡ್ತೀರಿ

- ಇಷ್ಟಬಂದವರನ್ನೆಲ್ಲ ಕರೆಸಿ ವಿಚಾರಣೆ ನಡೆಸ್ತೀರಾ?

- ನಾನೇನು ನಿಮ್ಮ ಅಪ್ಪನ ಗಂಟು ತಿಂದಿದ್ದೇನಾ?

- ನಿಮ್ಮ ಅಧಿಕಾರದ ಮದ ಇಳಿಸಲು ನಮಗೆ ಗೊತ್ತು

- ಪ್ರಿಯಾಂಕ್‌ ಖರ್ಗೆ ವಿರುದ್ಧ ಕುಮಾರಸ್ವಾಮಿ ಆಕ್ರೋಶ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

56% ಮೀಸಲಿಗಾಗಿ ಸುಪ್ರೀಂಗೆ ಮೊರೆ : ಸಂಪುಟ ಸಭೆ ನಿರ್ಧಾರ
ಸ್ಟಿಂಗ್‌ ಆಪರೇಷನ್‌ ತನಿಖೆ ನಿರ್ಧಾರ ಸಿಎಂ ವಿವೇಚನೆಗೆ: ಸಂಪುಟ