ರಾಜಸ್ಥಾನ ಚುನಾವಣೆ: ಪತಿ-ಪತ್ನಿ ಫೈಟ್

KannadaprabhaNewsNetwork | Updated : Nov 13 2023, 01:17 AM IST

ಸಾರಾಂಶ

ಜೈಪುರ: ರಾಜಸ್ಥಾನದ ಮುಂಬರುವ ವಿಧಾನಸಭೆ ಚುನಾವಣೆಯು ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದು, ದಂತರಾಮ್‌ಗಢ ಕ್ಷೇತ್ರದಲ್ಲಿ ಗಂಡ ಮತ್ತು ಹೆಂಡತಿಯೇ ಪರಸ್ಪರ ಸ್ಪರ್ಧಿಗಳಾಗಿ ಕಣಕ್ಕಿಳಿದಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ವೀರೇಂದ್ರ ವಿರುದ್ಧ ಪತ್ನಿ ರೀಟಾ ಕಣಕ್ಕೆ

ಜೈಪುರ: ರಾಜಸ್ಥಾನದ ಮುಂಬರುವ ವಿಧಾನಸಭೆ ಚುನಾವಣೆಯು ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದು, ದಂತರಾಮ್‌ಗಢ ಕ್ಷೇತ್ರದಲ್ಲಿ ಗಂಡ ಮತ್ತು ಹೆಂಡತಿಯೇ ಪರಸ್ಪರ ಸ್ಪರ್ಧಿಗಳಾಗಿ ಕಣಕ್ಕಿಳಿದಿದ್ದಾರೆ.

ಹಾಲಿ ಕಾಂಗ್ರೆಸ್‌ ಶಾಸಕ ನಾರಾಯಣ್‌ ಸಿಂಗ್‌ ಅವರ ಪುತ್ರ ವೀರೇಂದ್ರ ಸಿಂಗ್‌ ಅವರು ದಂತರಾಮ್‌ಗಢ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರೆ ಅವರ ಪತ್ಮಿ ಡಾ. ರೀಟಾ ಸಿಂಗ್‌ ಅವರು ಅದೇ ಕ್ಷೇತ್ರದಲ್ಲಿ ಜನನಾಯಕ್‌ ಪಕ್ಷ (ಜೆಜೆಪಿ)ದಿಂದ ಪತಿ ವಿರುದ್ಧವೇ ಕಣಕ್ಕಿಳಿದಿದ್ದಾರೆ. ಇಬ್ಬರೂ ವೈವಾಹಿಕ ಹಾಗೂ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ರೀಟಾ ಅವರಿಗೆ ಕಾಂಗ್ರೆಸ್ ಟಿಕೆಟ್‌ ನಿರಾಕರಿಸಿತ್ತು. ಅದಾದ ಬಳಿಕ ದಂಪತಿ ನಡುವೆ ಬಿರುಕು ಮೂಡಿತ್ತು ಹಾಗೂ ಆಗಲೇ ಅವರು ಜನನಾಯಕ್‌ ಪಕ್ಷದತ್ತ ವಾಲಿದರು. ರೀಟಾ ಈ ಹಿಂದೆ ಸಿಕಾರ್‌ನ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಇನ್ನು ದಂಪತಿಗಳು 2018ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ ಕೂಡ ಕಾನೂನಾತ್ಮಕವಾಗಿ ಬೇರ್ಪಟ್ಟಿಲ್ಲ.

Share this article