ಬೆಂಗಳೂರು : ಸತೀಶ್ ಜಾರಕಿಹೊಳಿ ಅವರು ಯಾವ ಕಾರಣಕ್ಕೆ ಕುಮಾರಸ್ವಾಮಿ, ದೇವೇಗೌಡರನ್ನು ಭೇಟಿ ಮಾಡಿದ್ದಾರೋ ನನಗೆ ಗೊತ್ತಿಲ್ಲ, ಅವರನ್ನೇ ಕೇಳಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬುಧವಾರ ಈ ಕುರಿತು ಸುದ್ದಿಗಾರರ ಪ್ರಶ್ನೆಗೆ, ಯಾಕೆ ಭೇಟಿ ಮಾಡಿದ್ದಾರೋ ನನಗೆ ಗೊತ್ತಿಲ್ಲ. ದೇಶದ ವಿಚಾರವೋ, ರಾಜ್ಯದ ವಿಚಾರವೋ, ವೈಯಕ್ತಿಕ ವಿಚಾರವೋ ಅವರನ್ನೇ ಕೇಳಬೇಕು ಎಂದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ರನ್ನು ಉಚ್ಚಾಟನೆ ವಿಚಾರ ಕುರಿತ ಪ್ರಶ್ನೆಗೆ, ''''ಆ ಮುತ್ತುರತ್ನಗಳನ್ನು ಮಡಿಕೊಂಡಾದ್ರು ಮಡಿಕೊಳ್ಲಲಿ. ಈಚೆಗಾದರೂ ಬಿಸಾಕಲಿ. ಅದು ಅವರ ಪಕ್ಷದ ಆಂತರಿಕ ವಿಚಾರ. ನಮಗೇನು ಸಂಬಂಧ. ಆದರೆ, ಕೆಲವರು ಶೋಭೆಗೆ ಓಲೆ, ಮೂಗುಬೊಟ್ಟು, ಹಣೆಬೊಟ್ಟು ಇಟ್ಟುಕೊಳ್ಳುತ್ತಾರೆ. ಹಾಗೆ ಕೆಲವೊಂದನ್ನು ಇಟ್ಟುಕೊಂಡರೇನೇ ಭೂಷಣ'''' ಎಂದರು.