;Resize=(412,232))
ಕೋಲ್ಕತಾ: ಪಶ್ಚಿಮ ಬಂಗಾಳ ಸರ್ಕಾರ ಬುಧವಾರ ಮಹಿಳೆಯರಿಗಾಗಿ ಕರ್ನಾಟಕ ಮಾದರಿಯಲ್ಲಿ ‘ಅನ್ನಪೂರ್ಣ ಯೋಜನೆ’ಯನ್ನು ಪ್ರಾರಂಭಿಸಿದ್ದು, ಮೊದಲ ಹಂತದಲ್ಲಿ 28.25 ಲಕ್ಷ ಫಲಾನುಭವಿಗಳಿಗೆ ಮಾಸಿಕ 3,000 ರೂ. ನೆರವು ನೀಡುವುದಾಗಿ ಘೋಷಿಸಿದೆ.
ಈ ಯೋಜನೆಯನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಮೊದಲ ಹಂತದಲ್ಲಿ 28,25,769 ಫಲಾನುಭವಿಗಳನ್ನು ಪೋರ್ಟಲ್‌ನಲ್ಲಿ ನೋಂದಾಯಿಸಲಾಗಿದೆ . ಮುಂದಿನ 3 ತಿಂಗಳಲ್ಲಿ ಹೊಸ ಅರ್ಜಿದಾರರ ಪರಿಶೀಲನೆ ಮಾಡಿ ಮತ್ತಷ್ಟು ಮಹಿಳೆಯರಿಗೆ ಮುಂದಿನ ಹಂತದಲ್ಲಿ ಯೋಜನೆ ವಿಸ್ತರಿಸುತ್ತೇವೆ ಎಂದರು.
ಹಿಂದಿನ ಟಿಎಂಸಿ ಸರ್ಕಾರದ ‘ಲಕ್ಷ್ಮಿ ಭಂಡಾರ್’ ಹೆಸರಿನ ಯೋಜನೆ ಹೊಂದಿತ್ತು. ಇದರ ಅಡಿಯಲ್ಲಿ 2.42 ಕೋಟಿ ಫಲಾನುಭವಿಗಳು ತಿಂಗಳಿಗೆ ಗರಿಷ್ಠ 1,500 ರು. ಪಡೆಯುತ್ತಿದ್ದರು.