ಸಿಇಸಿ ಜ್ಞಾನೇಶ್‌ ವಿರುದ್ಧ ಇಂಡಿಯಾ ಕೂಟದಿಂದ ‘ಅಣಕು ಸಂಸತ್ತು

Published : Oct 25, 2026, 11:27 AM IST
Gyanesh

ಸಾರಾಂಶ

ಮತಪಟ್ಟಿ ವಿಶೇಷ ಪರಿಷ್ಕರಣೆ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ಮುಂದಾಗಿರುವ ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟ, ಮುಂದಿನ ವಾರ 28ರಂದು‘ಅಣಕು ಸಂಸತ್ತು’ ನಡೆಸಲು ಚಿಂತನೆ ನಡೆಸಿದೆ.

ನವದೆಹಲಿ: ಮತಪಟ್ಟಿ ವಿಶೇಷ ಪರಿಷ್ಕರಣೆ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ಮುಂದಾಗಿರುವ ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟ, ಮುಂದಿನ ವಾರ 28ರಂದು‘ಅಣಕು ಸಂಸತ್ತು’ ನಡೆಸಲು ಚಿಂತನೆ ನಡೆಸಿದೆ.

ಸಿಇಸಿ ವಾಗ್ದಂಡನೆ, ಅವರ ರಾಜೀನಾಮೆಗೆ ಒತ್ತಾಯ

ಈ ಅಣಕು ಅಧಿವೇಶನವು ಸಿಇಸಿ ವಾಗ್ದಂಡನೆ, ಅವರ ರಾಜೀನಾಮೆಗೆ ಒತ್ತಾಯ ಹಾಗೂ ಎಸ್‌ಐಆರ್ ಕುರಿತಾದ ಸಮಗ್ರ ಚರ್ಚೆಗಳನ್ನು ಒಳಗೊಂಡಿರಲಿದೆ ಎಂದು ವಿಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

ಅಣಕು ಅಧಿವೇಶನ

ದೆಹಲಿಯಲ್ಲಿ ಅ.28ರಂದು ಸಂಸದರನ್ನೊಳಗೊಂಡ ಸಭೆಯ ರೂಪದಲ್ಲಿ ಈ ಅಣಕು ಅಧಿವೇಶನ ನಡೆಯುವ ಸಾಧ್ಯತೆಯಿದೆ. ಸಿಇಸಿ ರಾಜೀನಾಮೆಗೆ ಒತ್ತಾಯಿಸಿ ನ.1ರಂದು ರಾಮಲೀಲಾ ಮೈದಾನದಲ್ಲಿ ಬೃಹತ್ ರ‍್ಯಾಲಿ ನಿಗದಿಯಾಗಿರುವುದರಿಂದ, ಇದು ಸಂಸದರು ಮತ್ತು ನಾಯಕರಷ್ಟೇ ಭಾಗವಹಿಸುವ ಸೀಮಿತ ಸಭೆಯಾಗಿರಲಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸ್ಟಿಂಗ್‌ ಪಿತಾಮಹ ಎಲ್ಲರಿಗೂ ಗೊತ್ತಿದೆ : ವಿಜಯೇಂದ್ರ ಟೀಕೆ
ಆಂಧ್ರದಲ್ಲಿ ‘ಯಲಹಂಕ ಪ್ಯಾಲೇಸ್‌’ ಫೈಟ್‌! - ಬೆಂಗಳೂರು ಆಸ್ತಿಗಾಗಿ ಅಣ್ಣ-ತಂಗಿ ನಡುವೆ ಗಲಾಟೆ