ಶಿರಾ: ಕರ್ನಾಟಕದಲ್ಲಿ ಕನ್ನಡ ರಾಜ್ಯೋತ್ಸವ ನಿತ್ಯೋತ್ಸವದಂತೆ ಆಚರಿಸಬೇಕು, ಕರ್ನಾಟಕ ಎಂದು ನಾಮಕರಣಗೊಂಡ 50ವರ್ಷದ ಈ ಸಂದರ್ಭದಲ್ಲಿ ಇಡೀ ರಾಜ್ಯದ ಮೂಲೆ ಮೂಲೆಗಳಲ್ಲಿ ಕನ್ನಡ ಭಾಷೆಯ, ಹಿರಿಮೆ ಮತ್ತು ಗರಿಮೆ ಹೆಚ್ಚಿಸಬೇಕು ಎಂದು ಪ್ರಾಂಶುಪಾಲ ಡಾ.ಎಸ್.ಟಿ.ರಂಗಪ್ಪ ಹೇಳಿದರು. ಸರ್ಕಾರಿ ಕಲಾ ವಿಜ್ಞಾನ, ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ೬೮ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ವಿದ್ಯಾರ್ಥಿಗಳು, ಕನ್ನಡ ಸಾಹಿತ್ಯದ ಪುಸ್ತಕ ಓದುವುದರ ಜೊತೆಗೆ ಕವನ ವಾಚನ ಮಾಡುವುದು ಕಥೆ ಮತ್ತು ಕಾದಂಬರಿ ಬರೆಯುವ ಹವ್ಯಾಸ ಹೆಚ್ಚಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಕನ್ನಡ ಭಾಷೆಯ ಉಳಿವಿಗಾಗಿ ನಿರಂತರ ಕನ್ನಡ ಕಲಿಕೆಯ ಕಾರ್ಯಕ್ರಮ ಮುಂದುವರಿಸಬೇಕು. ಸಾಹಿತ್ಯದ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಯಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಡಾ. ಗಿರೀಶ್ ಡಿ., ಪ್ರೊ.ಗೋವಿಂದರಾಜು, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಶಿವಣ್ಣ, ಪಕ್ರಾಂಕಿತ ವ್ಯವಸ್ಥಾಪಕ ಶ್ರೀನಿವಾಸ್ ಮೂರ್ತಿ, ನರೇಂದ್ರ ಬಾಬು, ಪ್ರಾಧ್ಯಾಪಕರಾದ ಶಾಂತಕುಮಾರಿ, ಡಾ. ಹೊನ್ನಾಂಜಿನಯ್ಯ. ಡಿ. ಆರ್., ಸುಕನ್ಯಾ ಇದ್ದರು.