ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಘೋಷಣೆಯಾದ ಹಿನ್ನೆಲೆ ಕೆಜಿಎಫ್‌ ನಗರಸಭೆಗೆ ಕಾಂಗ್ರೆಸ್‌ಗೆ ಬಂಡಾಯದ ಬಿಸಿ

KannadaprabhaNewsNetwork |  
Published : Aug 17, 2024, 12:50 AM ISTUpdated : Aug 17, 2024, 04:25 AM IST
೧೬ಕೆಜಿಎಫ್೧ನಗರಸಭೆ ಮಾಜಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಇಬ್ಬರು ನಗರಸಭೆ ಸದಸ್ಯರೊಂದಿಗೆ ಸ್ವಾಭಿಮಾನಿ ಬಣದ ಮುಖಂಡ ವಿ.ಮೋಹನ್ ಕೃಷ್ಣ ರವರೊಂದಿಗೆ ಖಾಸಗಿ ಹೋಟೆಲೊಂದರಲ್ಲಿ ಚರ್ಚಿಸುತ್ತಿರುವುದು. | Kannada Prabha

ಸಾರಾಂಶ

ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಕಲಾ ಶಶಿಧರ್ ಹಾಗೂ ಬ್ಯಾಲಹಳ್ಳಿ ಗೋವಿಂದಗೌಡ ಅವರ ಕಾರ್ಯವೈಖರಿಗೆ ನಗರಸಭೆಯ ಕಾಂಗ್ರೆಸ್‌ ಸದಸ್ಯರು ಅಸಮಾಧಾನಗೊಂಡು ಬಂಡಾಯ ಸಾರಿದ್ದಾರೆ.

 ಕೆಜಿಎಫ್ : ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಕಲಾ ಶಶಿಧರ್ ಹಾಗೂ ಬ್ಯಾಲಹಳ್ಳಿ ಗೋವಿಂದಗೌಡ ಅವರ ಕಾರ್ಯವೈಖರಿಗೆ ನಗರಸಭೆಯ ಕಾಂಗ್ರೆಸ್‌ ಸದಸ್ಯರು ಅಸಮಾಧಾನಗೊಂಡು ಬಂಡಾಯ ಸಾರಿದ್ದಾರೆ. 

ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನದ ಆಕ್ಷಾಂಕ್ಷಿಯಾದ ಶಾಂತಿ ವಳ್ಳಲ್ ಮುನಿಸ್ವಾಮಿಯನ್ನು ಅಧ್ಯಕ್ಷರಾಗಿ ಮಾಡಲು ಕೆಲವರು ಅಡ್ಡಿಪಡಿಸುತ್ತಿದ್ದಾರೆ ಎನ್ನಲಾಗಿದೆ. 

ಇದರಿಂದಾಗಿ ಮಾಜಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಅ‍ವರು ಸ್ವಾಭಿಮಾನಿ ಬಣದ ಮೋಹನ್‌ಕೃಷ್ಣರ ಜೊತೆ ೨೨ ಸದಸ್ಯರ ಬೆಂಬಲದೊಂದಿಗೆ ತಮ್ಮ ಪತ್ನಿಯನ್ನು ಅಧ್ಯಕ್ಷರನ್ನಾಗಿ ಮಾಡಲು ಹೊಟಿದ್ದಾರೆ. 

ಇದರಿಂದ ಶಾಸಕಿ ರೂಪಕಲಾಶಶಿಧರ್ ಹಾಗೂ ಬ್ಯಾಲಹಳ್ಳಿ ಗೋವಿಂದಗೌಡರಿಗೆ ತೀವ್ರ ಮುಖಭಂಗವಾಗುವ ಸಾಧ್ಯತೆ ಇದೆ. ಬ್ಯಾಲಹಳ್ಳಿ ಜತೆ ಮಾತಿನ ಚಕಮಕಿ ವಳ್ಳಲ್ ಮುನಿಸ್ವಾಮಿ ಹಾಗೂ ಗೋವಿಂದಗೌಡರ ನಡುವೆ ಶಾಸಕರ ಮನೆಯಲ್ಲಿ ಏರು ಧ್ವನಿಯಲ್ಲಿ ಇಬ್ಬರಿಗೂ ಮಾತಿನ ಚಕಮುಕಿ ನಡೆದ ನೀವು 10 ಲಕ್ಷ ಖರ್ಚು ಮಾಡಿದರೆ ನಾನು 80 ಲಕ್ಷ ಖರ್ಚು ಮಾಡುವುದಾಗಿ ಏರು ಧ್ವನಿಯಲ್ಲಿ ಮಾತನಾಡಿಕೊಂಡಿದ್ದಾರೆ, ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಳ್ಳಲ್ ಮುನಿಸ್ವಾಮಿ ಬೆಂಬಲಿಗರು ಕಾಂಗ್ರೆಸ್‌ನಿಂದ ಹೊರ ನಡೆಯುವ ಸಾಧ್ಯತೆ ಹೆಚ್ಚಾಗಿದೆ. 

ಒಂದು ಕಡೆ ಶಾಸಕಿ ರೂಪಕಲಾಶಶಿಧರ್, ಯಾರು ಸಹ ಟೂರ್‌ಗೆ ಹೋಗಬಾರದು ಚುನಾವಣೆಯ ದಿನದಂದು ಬೆಳಗ್ಗೆ ಸಭೆ ಸೇರಿ ಅಂತಿಮವಾಗಿ ತೀರ್ಮಾನ ಕೈಗೊಳ್ಳಲಾಗುವುದು, ಅಲ್ಲಿಯವರೆಗೂ ಯಾರು ಸಹ ಮಾತನಾಡಬಾರದು ಎಲ್ಲಿಗೂ ಹೋಗಬಾರದು ಎಂದು ತಾಕೀತು ಮಾಡಿದ್ದಾರೆ. ಬ್ಯಾಲಹಳ್ಳಿಯೊಂದಿಗೆ ಅಸಮಾಧಾನ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ಬಂಡಾಯ ಗ್ಯಾರಂಟಿ ಎನ್ನಲಾಗುತ್ತಿದೆ, ನಗರಸಭೆಯಲ್ಲಿ ೧೪ ಕಾಂಗ್ರೆಸ್ ನಗರಸಭೆ ಸದಸ್ಯರು ಆಯ್ಕೆಯಾಗಿದ್ದು, 3 ಬಿಜೆಪಿ 1ಸಿಪಿಎಂ, 1 ಆರ್‌ಪಿಐ ಹಾಗೂ 16 ಸದಸ್ಯರು ಪಕ್ಷೇತರರು ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್‌ನಲ್ಲಿ ಬಂಡಾಯ ಸಾಧ್ಯತೆ

ಒಂದು ವೇಳೆ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯ ಸ್ಫೋಟಗೊಂಡರೆ ವಳ್ಳಲ್ ಮುನಿಸ್ವಾಮಿ ಜೊತೆಯಲ್ಲಿ ಸ್ವರ್ಣನಗರ ನಗರಸಭೆ ಸದಸ್ಯ ಕರುಣಕರನ್, ಸೆಂದಿಲ್, ಶಾಂತಿ ವಳ್ಳಲ್‌ಮುನಿಸ್ವಾಮಿ ಜೊತೆ ನಿಲ್ಲಲಿದ್ದಾರೆ. ಇವರೊಂದಿಗೆ ಇನ್ನು ೩ ನಗರಸಭೆ ಸದಸ್ಯರು ಸಹ ವಳ್ಳಲ್‌ಮುನಿಸ್ವಾಮಿ ಸಂರ್ಪಕದಲ್ಲಿ ಇದ್ದಾರೆ ಎನ್ನಲಾಗುತ್ತಿದ್ದು, ೭ಕ್ಕಿಂತ ಹೆಚ್ಚು ಕಾಂಗ್ರೆಸ್ ಸದಸ್ಯರು ಬಂಡಾಯ ಸಾರುವುದು ಸಾಧ್ಯತೆ ಇದೆ. 

ಬ್ಯಾಲಹಳ್ಳಿ ಪುತ್ರನಿಗೆ ಗುತ್ತಿಗೆ

ನಗರಸಭೆ ವ್ಯಾಪ್ತಿಯಲ್ಲಿ ಆಯಾ ಸದಸ್ಯರ ಗಮನಕ್ಕೆ ತರಾದೆ ಕಾಮಗಾರಿಗಳಿಗೆ ಟೆಂಡರ್‌ನ್ನು ಹೊರಗಿನವರಿಗೆ ನೀಡುವುದು ಅಲ್ಲದೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಗರಸಭೆ ವ್ಯಾಪ್ತಿಯ ಟೆಂಡರ್ ಕಾಮಗಾರಿಗಳನ್ನು ಗೋವಿಂದಗೌಡರ ಪುತ್ರ ಭರತ್ ಮುಖಾಂತರ ವ್ಯವಹಾರ ಮಾಡುತ್ತಿದ್ದಾರೆ. ಇದರಿಂದ ನಗರಸಭೆ ಸದಸ್ಯರಾಗಿ ನಾವು ಏಕೇ ಇರಬೇಕು, ಎಲ್ಲ ಕೆಲಸಗಳನ್ನು ಗೋವಿಂದಗೌಡರೇ ಮಾಡಿಕೊಳ್ಳಲಿ. ನಮಗೇನು ಕೆಲಸ ಇದೆ ಎಂದು ನಗರಸಭೆ ಸದಸ್ಯರು ಶಾಸಕರ ವಿರುದ್ದ ಬಹಿರಂಗವಾಗಿ ಬಂಡಾಯ ಸಾರಿದ್ದಾರೆ.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ