ಕರಾವಳಿ ಹಿಂಸೆ ಸತ್ಯ ಶೋಧನೆಗೆ ಕೆಪಿಸಿಸಿ ನಿಯೋಗ

KannadaprabhaNewsNetwork |  
Published : Jun 01, 2025, 01:50 AM ISTUpdated : Jun 01, 2025, 05:44 AM IST
 DK Shivakumar

ಸಾರಾಂಶ

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇತ್ತೀಚೆಗೆ ನಡೆದ ಅಹಿತರಕ ಘಟನೆ, ಪ್ರಕರಣಗಳ ಸತ್ಯಾಸತ್ಯತೆ ಹಾಗೂ ನೈಜತೆ ಪರಿಶೀಲಿಸಿ ವರದಿ ನೀಡಲು ಕೆಪಿಸಿಸಿಯಿಂದ ಪಕ್ಷದ ಏಳು ಪದಾಧಿಕಾರಿಗಳು, ಮುಖಂಡರನ್ನು ಒಳಗೊಂಡ ನಿಯೋಗ ರಚಿಸಲಾಗಿದೆ.

 ಬೆಂಗಳೂರು : ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇತ್ತೀಚೆಗೆ ನಡೆದ ಅಹಿತರಕ ಘಟನೆ, ಪ್ರಕರಣಗಳ ಸತ್ಯಾಸತ್ಯತೆ ಹಾಗೂ ನೈಜತೆ ಪರಿಶೀಲಿಸಿ ವರದಿ ನೀಡಲು ಕೆಪಿಸಿಸಿಯಿಂದ ಪಕ್ಷದ ಏಳು ಪದಾಧಿಕಾರಿಗಳು, ಮುಖಂಡರನ್ನು ಒಳಗೊಂಡ ನಿಯೋಗ ರಚಿಸಲಾಗಿದೆ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್‌ ನಾಸೀರ್‌ ಹುಸೇನ್‌, ಕಾರ್ಯಾಧ್ಯಕ್ಷ ಹಾಗೂ ಎಂಎಸ್‌ಸಿ ಮಂಜುನಾಥ ಭಂಡಾರಿ, ಬಿಡಿಎ ಅಧ್ಯಕ್ಷ ಎನ್‌.ಎ.ಹ್ಯಾರಿಸ್‌, ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್‌, ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್‌.ಸುದರ್ಶನ್‌, ಮಾಜಿ ಸಚಿವ ಕಿಮ್ಮನೆ ರತ್ನಾಕರ ಮತ್ತು ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ಅವರನ್ನು ಒಳಗೊಂಡ ನಿಯೋಗವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ರಚಿಸಿದ್ದಾರೆ.

ಕರಾವಳಿ ಜಿಲ್ಲೆಗಳಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೆಲ ಅಹಿತಕರ ಘಟನೆ, ಪ್ರಕರಣಗಳು ಮಾಧ್ಯಮಗಳಲ್ಲಿ ಕೊಲೆ, ಸುಲಿಗೆ, ಹತ್ಯೆ, ಕೋಮುಗಲಭೆ ಎಂಬ ವ್ಯಾಖ್ಯಾನಗಳಿಂದ ವ್ಯಾಪಕವಾಗಿ ಪ್ರಚಾರವಾಗುತ್ತಿವೆ. ಈ ಎಲ್ಲಾ ಪ್ರಕರಣಗಳ ಸತ್ಯಾಸತ್ಯತೆ ಹಾಗೂ ನೈಜತೆ ತಿಳಿದುಕೊಳ್ಳುವ ಹಿನ್ನೆಯಲ್ಲಿ ಈ ನಿಯೋಗ ರಚಿಸಿ ಕಳುಹಿಸಲಾಗುತ್ತಿದೆ. ನಿಯೋಗದ ಮುಖಂಡರು ಕರಾವಳಿ ಜಿಲ್ಲೆಗಳ ಮುಖಂಡರ ಸಹಕಾರದೊಂದಿಗೆ ಘಟನೆ ನಡೆದ ಪ್ರದೇಶಗಳಲ್ಲಿ ಸಂತ್ರಸ್ತ ಕುಟುಂಬಗಳು, ಎಲ್ಲಾ ವರ್ಗದ ಜನರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಇತರರೊಂದಿಗೆ ಚರ್ಚಿಸಿ ಎಲ್ಲಾ ಪ್ರಕರಣಗಳ ಬಗ್ಗೆ ಕೂಲಂಕಷವಾಗಿ ಪರಾಮರ್ಶಿಸಿ ಒಂದು ವಾರದೊಳಗೆ ವರದಿ ಕೆಪಿಸಿಸಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.

- ನಿಯೋಗದ ಕಾರ್ಯ ಏನು?

- ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆಗಳ ಮೇಲೆ ಕೊಲೆಗಳು

- ಹತ್ಯೆಗಳಿಂದ ಜಿಲ್ಲೆಯಲ್ಲಿ ಕೋಮುಗಲಭೆಯ ವಾತಾವರಣ ಸೃಷ್ಟಿ

- ಕೊಲೆಗಳ ಬಗ್ಗೆ ಮಾಧ್ಯಮಗಳಲ್ಲಿ ನಾನಾ ರೀತಿಯ ವ್ಯಾಖ್ಯಾನ

- ಪ್ರಕರಣಗಳ ಸತ್ಯಾಸತ್ಯತೆ, ನೈಜತೆ ಪರಿಶೀಲನೆಗೆ ಕೆಪಿಸಿಸಿ ಟೀಂ

- ನಿಯೋಗದಲ್ಲಿದ್ದಾರೆ ನಾಸೀರ್‌, ಸುದರ್ಶನ್‌, ಇತರ ಮುಖಂಡರು

- ಘಟನಾ ಸ್ಥಳಗಳಿಗೆ ತೆರಳಿ ಅಲ್ಲಿನ ಜನರ ಜತೆ ತಂಡದ ಸಂವಾದ- 1 ವಾರದಲ್ಲಿ ಕೆಪಿಸಿಸಿಗೆ ಘಟನೆಗಳ ಕುರಿತು ವರದಿ ನೀಡಲಿದೆ ತಂಡ

PREV
Read more Articles on

Recommended Stories

ಯಶವಂತಪುರ ಟಿಕೆಟ್‌: ಬಿಎಸ್‌ವೈ ವಿರುದ್ಧ ಜವರಾಯಿಗೌಡ ಆಕ್ರೋಶ
ಖರ್ಗೆ ರಾಜಕೀಯ ಭವಿಷ್ಯ ಅವರೇ ನಿರ್ಧರಿಸ್ತಾರೆ : ಸಚಿವ ಪ್ರಿಯಾಂಕ್‌