ಓಂಕಾಳಿ ದೇಗುಲದಲ್ಲಿ ಕುಂಭಾಭಿಷೇಕ

KannadaprabhaNewsNetwork | Published : Nov 3, 2023 12:30 AM

ಸಾರಾಂಶ

ತಾಲೂಕಿನ ಅರ್ಜಿಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಓಂಕಾಳಿ ದೇವಾಲಯದಲ್ಲಿ ಕುಂಭಾಭಿಷೇಕವನ್ನು ತಮಿಳುನಾಡಿನ ಅರ್ಚಕ ಕಾರ್ತಿಕ್ ಮತ್ತು ತಂಡವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಸಿಕೊಟ್ಟಿತು.
ಹನೂರು: ತಾಲೂಕಿನ ಅರ್ಜಿಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಓಂಕಾಳಿ ದೇವಾಲಯದಲ್ಲಿ ಕುಂಭಾಭಿಷೇಕವನ್ನು ತಮಿಳುನಾಡಿನ ಅರ್ಚಕ ಕಾರ್ತಿಕ್ ಮತ್ತು ತಂಡವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಸಿಕೊಟ್ಟಿತು. ಗ್ರಾಮದ ಮುಖಂಡರಾದ ವಡಿವೇಲು ಕೃಷ್ಣ, ಕನಕ ಪೂಜಾರಿ ಮತ್ತು ಚಂಗೋಡಿ ರಾಜು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಣಪತಿ ಹೋಮ, ಚಂಡಿಕಾ ಹೋಮ, ಅಭಿಷೇಕ ಹಾಗೂ ವಿವಿಧ ಹವನಗಳನ್ನು ನೆರವೇರಿಸಿದರು. ಓಂ ಕಾಳಿ ದೇವಾಲಯ ಕುಂಭಾಭಿಷೇಕ ಪ್ರಯುಕ್ತ ಅಲಾರವಿ ಕರಗ ಉತ್ಸವವನ್ನು ಗ್ರಾಮದ ವಿವಿಧ ಬಡಾವಣೆಗಳಲ್ಲಿ ನಡೆಸಲಾಯಿತು. ಇದೇ ವೇಳೆಯಲ್ಲಿ ವಾದ್ಯ ಮೇಳಗಳೊಂದಿಗೆ ಕರಗವನ್ನು ದೇವಾಲಯಕ್ಕೆ ಕರೆತರಲಾಯಿತು. ----- 2ಸಿಎಚ್‌ಎನ್‌51 ಪ್ಯಾನಲ್ ಕ್ಯಾಪ್ಷನ್...ತಾಲೂಕಿನ ಅರ್ಜಿಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಓಂಕಾಳಿ ದೇವಾಲಯದಲ್ಲಿ ಕುಂಭಾಭಿಷೇಕವನ್ನು ತಮಿಳುನಾಡಿನ ಅರ್ಚಕ ಕಾರ್ತಿಕ್ ಮತ್ತು ತಂಡವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಸಿಕೊಟ್ಟಿತು.ಮುಖಂಡರಾದ ವಡಿವೇಲು ಕೃಷ್ಣ, ಕನಕ ಪೂಜಾರಿ ಮತ್ತು ಚಂಗೋಡಿ ರಾಜು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು .

Share this article