ಮುಂದಿನ ಎಲ್ಲಾ ಚುನಾವಣೆ ಬ್ಯಾಲೆಟ್‌ ಮೂಲಕವೇ ಮಾಡೋಣ : ಪ್ರಿಯಾಂಕ್‌

Published : Oct 29, 2026, 06:57 AM IST
Priyank kharge

ಸಾರಾಂಶ

‘ಇವಿಎಂ ಸರಿಯಿಲ್ಲ ಎಂದು ನಾವು ಮಾತ್ರವಲ್ಲ ಬಿಜೆಪಿಯ ಮಾಜಿ ಕೇಂದ್ರ ಸಚಿವರೇ ಹೇಳಿದ್ದಾರೆ. ಪರಿಷತ್‌ ಚುನಾವಣೆಯಲ್ಲಿ ಬ್ಯಾಲೆಟ್‌ ಮತದಾನವಿದ್ದರೂ ಅದು ಸಾರ್ವಜನಿಕರ ಮತದಾನವಲ್ಲ. ಮುಂದಿನ ವಿಧಾನಸಭೆ ಚುನಾವಣೆವರೆಗೆ ಎಲ್ಲವನ್ನೂ ಬ್ಯಾಲೆಟ್‌ ಮೂಲಕವೇ ಮಾಡೋಣ’

ಬೆಂಗಳೂರು : ‘ಇವಿಎಂ ಸರಿಯಿಲ್ಲ ಎಂದು ನಾವು ಮಾತ್ರವಲ್ಲ ಬಿಜೆಪಿಯ ಮಾಜಿ ಕೇಂದ್ರ ಸಚಿವರೇ ಹೇಳಿದ್ದಾರೆ. ಪರಿಷತ್‌ ಚುನಾವಣೆಯಲ್ಲಿ ಬ್ಯಾಲೆಟ್‌ ಮತದಾನವಿದ್ದರೂ ಅದು ಸಾರ್ವಜನಿಕರ ಮತದಾನವಲ್ಲ. ಬ್ಯಾಲೆಟ್‌ ಮೇಲೆ ಅಷ್ಟು ವಿಶ್ವಾಸ ಇದ್ದರೆ ತಾಪಂ, ಜಿಪಂನಿಂದ ಹಿಡಿದು ಮುಂದಿನ ವಿಧಾನಸಭೆ ಚುನಾವಣೆವರೆಗೆ ಎಲ್ಲವನ್ನೂ ಬ್ಯಾಲೆಟ್‌ ಮೂಲಕವೇ ಮಾಡೋಣ’ ಎಂದು ಪ್ರತಿಪಕ್ಷಗಳಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಸವಾಲು ಹಾಕಿದ್ದಾರೆ.

ವಿಧಾನಪರಿಷತ್‌ ಚುನಾವಣೆಯಲ್ಲಿ ಮತಪತ್ರದ ಮೂಲಕ ಚುನಾವಣೆ ನಡೆದಿರೂ ಕಾಂಗ್ರೆಸ್ ಸೋಲಾಗಿರುವ ಕುರಿತ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣಾ ಫಲಿತಾಂಶಕ್ಕೆ ನಾವು ತಲೆ ಬಾಗುತ್ತೇವೆ. ಈ ಚುನಾವಣೆಯ ಫಲಿತಾಂಶ ಕರ್ನಾಟಕದ ರಾಜಕೀಯ ಮತ್ತು ಮುಂದಿನ ಸಾರ್ವತ್ರಿಕ ಚುನಾವಣೆ ಮೇಲೆ ಪರಿಣಾಮ ಬೀಳುತ್ತದೆ ಎಂಬುದು ತಪ್ಪು. ನಾವು ಸಂಘಟನೆ ಹೆಚ್ಚು ಮಾಡಬೇಕು, ಜನ ಹಾಗೂ ಶಿಕ್ಷಕರು, ಪದವೀಧರರ ಸಮಸ್ಯೆ ಬಗ್ಗೆ ಗಮನಹರಿಸಬೇಕು ಎಂಬ ಸಂದೇಶ ನೀಡಿದೆ’ ಎಂದು ಹೇಳಿದರು.

ಪರಿಷತ್‌ ಮತಪತ್ರ ಚುನಾವಣೆ ಆದರೂ ಸಾರ್ವಜನಿಕರು ಮತದಾನ ಮಾಡುವುದಿಲ್ಲ. ಕೇವಲ ಸೀಮಿತ ವರ್ಗ ಮಾತ್ರ ಮತದಾನ ಮಾಡುತ್ತದೆ. ಇವಿಎಂ ಸರಿಯಿಲ್ಲ ಎಂದು ನಾವಷ್ಟೇ ಅಲ್ಲ ಬಿಜೆಪಿಯ ಮಾಜಿ ಕೇಂದ್ರ ಸಚಿವರೂ ಹೇಳಿದ್ದಾರೆ. ಸರಿ ಇದ್ದರೆ ಒಳ್ಳೆಯದು , ಸರಿ ಇಲ್ಲ ಎಂದರೆ ಸರಿ ಮಾಡೋಣ. ಮೊದಲು ಸಂಶೋಧನೆ ನಡೆಯಲಿ ಎಂದು ಸವಾಲು ಹಾಕಿದರು.

ತಿಂಗಳ ಬಳಿಕ ಬಿವೈವಿ ಜಾಗವೇ ಗ್ಯಾರಂಟಿ ಇಲ್ಲ: ಪ್ರಿಯಾಂಕ್‌ ಖರ್ಗೆ

ಮುಂದಿನ ತಿಂಗಳಲ್ಲಿ ಬಿಜೆಪಿಯಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಬಿ.ವೈ.ವಿಜಯೇಂದ್ರ ಅವರ ಜಾಗವೇ ತಿಂಗಳ ಬಳಿಕ ಗ್ಯಾರಂಟಿ ಇಲ್ಲ. ಅವರು ಮೊದಲು ತಮ್ಮ ಜಾಗ ಗಟ್ಟಿ ಮಾಡಿಕೊಳ್ಳಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

2028ಕ್ಕೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ, ಪರಮೇಶ್ವರ್, ಖರ್ಗೆಯವರ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ನಾವು ಬದುಕಿನ ರಾಜಕಾರಣ ಮಾಡುತ್ತಿದ್ದೇವೆ, ಅಹಂಕಾರ ತೋರುತ್ತಿಲ್ಲ ಎಂದರು.

ಎಚ್ಡಿಕೆ ಮೂವರನ್ನು ಎಲ್ಲಿ ಬಚ್ಚಿಟ್ಟಿದ್ದಾರೆ: ಪ್ರಿಯಾಂಕ್

ಎಚ್.ಡಿ. ಕುಮಾರಸ್ವಾಮಿ ಅವರು ದಸರಾ ಸಮಯಕ್ಕೆ ಅಲ್ಲೋಲ ಕಲ್ಲೋಲ ಎನ್ನುತ್ತಿದ್ದರು. ಈಗ ದೀಪಾವಳಿಗೆ ಹೋಗಿದ್ದಾರೆ. ಕುಮಾರಸ್ವಾಮಿ ಅವರು ಆ ಮೂವರನ್ನು ಎಲ್ಲಿ ಬಚ್ಚಿಟ್ಟಿದ್ದಾರೆ ತಿಳಿಯಲಿ. ನರಕಾಸುರ ಯಾರು, ಭಸ್ಮಾಸುರ ಯಾರು ಎಲ್ಲವೂ ಹೊರಗೆ ಬರಲಿದೆ.ಎಲ್ಲವೂ ತನಿಖೆ ಆದ ಮೇಲೆ ಗೊತ್ತಾಗುತ್ತದೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಪ್ರಿಯಾಂಕ್‌ ಖರ್ಗೆ ಹೇಳೋದೇನು?

- ರಾಜ್ಯದ ಚುನಾವಣಾ ಫಲಿತಾಂಶಕ್ಕೆ ತಲೆಬಾಗುತ್ತೇವೆ

- ಪರಿಷತ್‌ ಚುನಾವಣೆಯಲ್ಲಿ ಎಲ್ಲ ಜನ ಮತ ಹಾಕಲ್ಲ

- ಕೇವಲ ಸೀಮಿತ ವರ್ಗ ಮಾತ್ರ ಮತದಾನ ಮಾಡುತ್ತದೆ.

- ಅಸೆಂಬ್ಲಿ ಎಲೆಕ್ಷನ್‌ಗೆ ಇದು ಪರಿಣಾಮ ಬೀರಲ್ಲ

- ನಾವು ತಳಮಟ್ಟದ ಪಕ್ಷ ಸಂಘಟನೆ ಬಲಪಡಿಸಬೇಕು

- ಇವಿಎಂ ಸರಿಯಿಲ್ಲ ಎಂದು ಬಿಜೆಪಿ ಮಾಜಿ ಸಚಿವರೂ ಹೇಳಿದ್ದಾರೆ.

- ಸರಿ ಇಲ್ಲ ಎಂದರೆ ಸರಿ ಮಾಡೋಣ. ಸಂಶೋಧನೆ ನಡೆಯಲಿ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬ್ಯಾಲೆಟ್‌ ಪೇಪರ್‌ ಬಳಸಿದರೂ ‘ಕೈ’ ಎಷ್ಟರಲ್ಲಿ ಗೆದ್ದಿತು? : ಮೋದಿ ಟಾಂಗ್‌
ಕಬ್ಬು ರೈತರ ಜತೆ ಡಿಕೆ ಸಂಧಾನ ಯಶಸ್ವಿ - ತಡರಾತ್ರಿ ಪರಿಹಾರ ಸೂತ್ರ ರೂಪಿಸಿದ ಸಿಎಂ