ಇಂಡಿಯಾ ಕೂಟ ಗೆದ್ದರೆ ಬಾಹ್ಯ ಬೆಂಬಲ: ಮಮತಾ

KannadaprabhaNewsNetwork |  
Published : May 16, 2024, 12:49 AM ISTUpdated : May 16, 2024, 04:21 AM IST
ಮಮತಾ | Kannada Prabha

ಸಾರಾಂಶ

ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್ ಜೊತೆಗೆ ಜಟಾಪಟಿ ನಡೆಸಿ ಪ.ಬಂಗಾಳದಲ್ಲಿ ಇಂಡಿಯಾ ಒಕ್ಕೂಟದ ಮೈತ್ರಿಯನ್ನು ಮುರಿದು ಹಾಕಿದ್ದ ಮುಖ್ಯಮಂತ್ರಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮನಸ್ಸು ಸ್ವಲ್ಪಮಟ್ಟಿಗೆ ಕರಗಿದಂತಿದೆ.

ಕೋಲ್ಕತಾ: ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್ ಜೊತೆಗೆ ಜಟಾಪಟಿ ನಡೆಸಿ ಪ.ಬಂಗಾಳದಲ್ಲಿ ಇಂಡಿಯಾ ಒಕ್ಕೂಟದ ಮೈತ್ರಿಯನ್ನು ಮುರಿದು ಹಾಕಿದ್ದ ಮುಖ್ಯಮಂತ್ರಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮನಸ್ಸು ಸ್ವಲ್ಪಮಟ್ಟಿಗೆ ಕರಗಿದಂತಿದೆ. ಸಾರ್ವತ್ರಿಕ ಚುನಾವಣೆಯ ನಂತರ ವಿರೋಧ ಪಕ್ಷಗಳ ಕೂಟ ಅಧಿಕಾರಕ್ಕೆ ಬಂದರೆ ಬಾಹ್ಯ ಬೆಂಬಲ ನೀಡುವುದಾಗಿ ಬುಧವಾರ ಘೋಷಿಸಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ‘ನಾವು ಇಂಡಿಯಾ ಮೈತ್ರಿಕೂಟಕ್ಕೆ ನಾಯಕತ್ವವನ್ನು ನೀಡುತ್ತೇವೆ ಮತ್ತು ಬಾಹ್ಯವಾಗಿ ಅವರಿಗೆ ಎಲ್ಲಾ ರೀತಿಯಲ್ಲಿ ಸಹಾಯ ಮಾಡುತ್ತೇವೆ. ಬಂಗಾಳದಲ್ಲಿ ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ಎಂದಿಗೂ ಸಮಸ್ಯೆಯಾಗದಂತೆ ನಾವು ಸರ್ಕಾರವನ್ನು ರಚಿಸುತ್ತೇವೆ’ ಎಂದರು.

‘ಆದರೆ ಬಂಗಾಳದಲ್ಲಿನ ಇಂಡಿಯಾ ಕೂಟವು ಸಿಪಿಎಂ ಅಥವಾ ಬಂಗಾಳ ಕಾಂಗ್ರೆಸ್‌ ಘಟಕವನ್ನು ಒಳಗೊಂಡಿಲ್ಲ. ನಾನು ದಿಲ್ಲಿ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ’ ಎಂದು ಅವರು ಸ್ಪಷ್ಟಪಡಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!
ಉತ್ತರ ಕರ್ನಾಟಕಕ್ಕೆ ₹15,000 ಕೋಟಿ : ಅಜಯ್‌