ಕನಕಪುರ: ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪತಿ ಗೆದ್ದಿದ್ದಕ್ಕೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಪತ್ನಿ ಅನುಸೂಯಮ್ಮ ಅವರು ಬುಧವಾರ ತಾಲೂಕಿನ ಚಿರಣಕುಪ್ಪೆ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಬಸವನನ್ನು ಬಿಟ್ಟು ತಮ್ಮ ಹರಕೆ ತೀರಿಸಿದರು.
ಬಸವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭಾ ಚುನಾವಣೆ ವೇಳೆ ಮಂಜುನಾಥ್ ಅವರ ಗೆಲುವಿಗಾಗಿ ಹರಕೆ ಹೊತ್ತಿದ್ದೆ. ಅದರಂತೆ ಬಸವನಿಗೆ ಪೂಜೆ ಸಲ್ಲಿಸಿ, ಕರುವನ್ನು ದೇವಸ್ಥಾನಕ್ಕೆ ಒಪ್ಪಿಸಿದ್ದೇವೆ. ಕಾರಣಾಂತರಗಳಿಂದ ಮಂಜುನಾಥ್ ಅವರಿಗೆ ಕಾರ್ಯಕ್ರಮಕ್ಕೆ ಬರಲು ಆಗಿಲ್ಲ ಎಂದರು.