ಆರ್.ಬಾಲಸುಬ್ರಹ್ಮಣ್ಯಂ ಅವರು ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಕುರಿತು ಬರೆದಿರುವ ‘ಪವರ್ ವಿಥಿನ್’ ಪುಸ್ತಕ ಬಿಡುಗಡೆ

KannadaprabhaNewsNetwork |  
Published : Oct 09, 2024, 01:46 AM ISTUpdated : Oct 09, 2024, 08:06 AM IST
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆರ್.ಬಾಲಸುಬ್ರಹ್ಮಣ್ಯಂ ಅವರು ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಕುರಿತು ಬರೆದಿರುವ ‘ಪವರ್ ವಿಥಿನ್’ ಪುಸ್ತಕವನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಪೂರ್ವ-ಪಶ್ಚಿಮದ ತತ್ವಜ್ಞಾನದ ಸಂಗಮವಾಗಿದೆ. ಮೋದಿ ಆಡಳಿತದ ಕಾಲದಲ್ಲಿ ನಾವೆಲ್ಲಾ ಇರುವುದು ನಮ್ಮ ಸೌಭಾಗ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

 ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಪೂರ್ವ-ಪಶ್ಚಿಮದ ತತ್ವಜ್ಞಾನದ ಸಂಗಮವಾಗಿದೆ. ಮೋದಿ ಆಡಳಿತದ ಕಾಲದಲ್ಲಿ ನಾವೆಲ್ಲಾ ಇರುವುದು ನಮ್ಮ ಸೌಭಾಗ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ರಾಜ್ಯ ಬಿಜೆಪಿ ಆರ್ಥಿಕ ಪ್ರಕೋಷ್ಠ ಏರ್ಪಡಿಸಿದ್ದ ಕೇಂದ್ರದ ಮಾನವ ಸಂಪನ್ಮೂಲ ಸಾಮರ್ಥ್ಯ ನಿರ್ಮಾಣ ಆಯೋಗದ ಸದಸ್ಯ ಆರ್.ಬಾಲಸುಬ್ರಹ್ಮಣ್ಯಂ ಅವರು ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಕುರಿತು ಬರೆದಿರುವ ‘ಪವರ್ ವಿಥಿನ್’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ವ್ಯಕ್ತಿ ಮನದಾಳದಲ್ಲಿ ಅವರ ಬಗ್ಗೆ ವಿಶೇಷ ಭಾವನೆ ಇಟ್ಟುಕೊಳ್ಳಲೇಬೇಕು ಎಂದರು.

ಯಾವುದೇ ವ್ಯಕ್ತಿ ಒಂದು ತೀರ್ಮಾನ ಮಾಡಲು ಎರಡು ಬಾರಿ ಮಾಡುತ್ತಾರೆ. ಮೊದಲು ತೀರ್ಮಾನ ಮಾಡಬೇಕೆಂದು ಮಾಡುತ್ತಾರೆ. ಮತ್ತೊಂದು ವಾಸ್ತವವಾಗಿ ಮಾಡುತ್ತಾರೆ. ಮೋದಿ ಅವರು ಮಾನವೀಯ ಗುಣ ಹಾಗೂ ಸೂಕ್ಷ್ಮ‌ ಮನಸಿನವರಾಗಿದ್ದಾರೆ ಎಂದು ಶ್ಲಾಘಿಸಿದರು.

ಪ್ರಧಾನಿಯವರು ಈ ದೇಶ ಸೇವೆ ಮಾಡಲು ದೇವರೇ ನನ್ನನ್ನು ಕಳುಹಿಸಿದ್ದಾನೆ ಎಂದು ಹೇಳಿದ್ದನ್ನು ವಿರೋಧ ಪಕ್ಷದವರು ಲೇವಡಿ ಮಾಡಿದರು. ಆದರೆ, ಮೋದಿಯವರು ತಮ್ಮ ಜೀವನದ ಉದ್ದೇಶ ಅರ್ಥ ಮಾಡಿಕೊಂಡಿದ್ದಾರೆ. ಮೋದಿಯವರು ಬಹಳ ಗಂಭೀರವಾಗಿ ಇರುತ್ತಾರೆ ಎನ್ನುತ್ತಾರೆ. ಆದರೆ, ಅವರನ್ನು ಹತ್ತಿರದಿಂದ ನೋಡಿದವರಿಗೆ ಅವರು ಬಹಳ ತಮಾಷೆಯಾಗಿ ಇರುತ್ತಾರೆ. ಅವರ ಜೀವನ ಪ್ರಯಾಣ ಬಹಳ ಅದ್ಭುತವಾಗಿದೆ ಎಂದು ಹೇಳಿದರು.

ಲೇಖಕ ಆರ್. ಬಾಲಸುಬ್ರಹ್ಮಣ್ಯಂ, ರಾಜ್ಯ ಬಿಜೆಪಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ದತ್ತಾತ್ರೆಯ, ಜಿ.ಎಸ್‌.ಪ್ರಶಾಂತ್ ಉಪಸ್ಥಿತರಿದ್ದರು. 

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮತಚೋರಿ ಹೆಸರಲ್ಲಿ ಸುಳ್ಳು ಪ್ರಚಾರ ತಪ್ಪು: ದೇವೇಗೌಡ
ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು