ಮೋದಿ ಸಾಧನೆ ಕಾಂಗ್ರೆಸ್ಸನ್ನು ಕೆಂಗೆಡಿಸಿದೆ: ಸಂಸದ

KannadaprabhaNewsNetwork | Published : Feb 27, 2024 1:33 AM

ಸಾರಾಂಶ

ಮೋದಿಯ ನಿರಂತರ ಅಭಿವೃದ್ಧಿಯ ಸಾಧನೆಗಳನ್ನು ಕಂಡು ಕಾಂಗ್ರೆಸ್ ಮುಖಂಡರುಗಳು ವಿಲವಿಲ ಒದಾಡುತ್ತಿದ್ದು, ಮುಂದಿನ ಪ್ರಧಾನಿ ನರೇಂದ್ರ ಮೋದಿ ಆಗುವುದನ್ನು ತಪ್ಪಿಸಲು ವಾಮಮಾರ್ಗದಿಂದ ಪ್ರಯತ್ನ ನಡೆಸುತ್ತಿದ್ದಾರೆ ಎಂಬುದು ಸಂಸದ ಮುನಿಸ್ವಾಮಿ ಆರೋಪ

ಕನ್ನಡಪ್ರಭ ವಾರ್ತೆ ಮಾಲೂರು

ಭಷ್ಟಚಾರದ ಸರಮಾಲೆಯ ಸರ್ಕಾರ ನೀಡಿದ್ದ ಕಾಂಗ್ರೆಸ್ ನೇತೃತ್ವದ ಯುಪಿಐ ಸರ್ಕಾರವು ಕಳೆದ ಹತ್ತು ವರ್ಷದಿಂದ ಒಂದೇ ಒಂದು ಹಗರಣ ಇಲ್ಲದೆ ಆಡಳಿತ ನೀಡಿರುವ ಪ್ರಧಾನಿ ನರೇಂದ್ರ ಮೋದಿಯ ನಿರಂತರ ಅಭಿವೃದ್ಧಿಯ ಸಾಧನೆಗಳನ್ನು ಕಂಡು ಕಾಂಗ್ರೆಸ್ ಮುಖಂಡರುಗಳು ವಿಲವಿಲ ಒದಾಡುತ್ತಿದ್ದು, ಮುಂದಿನ ಪ್ರಧಾನಿ ನರೇಂದ್ರ ಮೋದಿ ಆಗುವುದನ್ನು ತಪ್ಪಿಸಲು ವಾಮಮಾರ್ಗದಿಂದ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಸಂಸದ ಮುನಿಸ್ವಾಮಿ ಹೇಳಿದರು.

ಅವರು ಇಲ್ಲಿನ ರೈಲ್ವೇ ನಿಲ್ದಾಣದಲ್ಲಿ ರಾಷ್ಠದ ೫೫೪ ರೈಲ್ವೇ ನಿಲ್ದಾಣ ಆಧುನೀಕರಣ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚವಲ್ ಮೂಲಕ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈಲು ನಿಲ್ದಾಣ ಮೇಲ್ದರ್ಜೆಗೆ

ಬ್ರಿಟಿಷರ ಕಾಲದಲ್ಲಿನ ರೈಲ್ವೇ ನಿಲ್ದಾಣಗಳನ್ನು ಉನ್ನತ ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಭಾರತದ ೧೨೭೫ರೈಲ್ವೇ ನಿಲ್ದಾಣಗಳನ್ನು ಹೈಟೆಕ್ ಟಚ್ ನೀಡಲಾಗಿದೆ. ವಯೋ ವೃದ್ದರಿಗೆ ರೈಲ್ವೇ ಹಳಿ ದಾಟಲು ಸಾಧ್ಯವಾಗದ ಕಾರಣ ಎಕ್ಸ್‌ಲೇಟರ್ ವ್ಯವಸ್ಥೆ, ವಾಹನಗಳಿಗೆ ಪಾರ್ಕಿಂಗ್, ಉಚಿತ ವೈಫೈ, ಉದ್ಯಾನವನ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದರು.

ಶ್ರೀರಾಮ ಮಂದಿರ ನಿರ್ಮಾಣ

ಜಮ್ಮು ಕಾಶ್ಮೀರದಲ್ಲಿ ೩೭೦ ತೆಗೆದಿದ್ದು, ತ್ರಿವಳಿ ತಲಾಖ್ ತೆಗೆದಿದ್ದು, ಅಯ್ಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ, ಕೋಲಾರದಲ್ಲಿ ೧೭೬ಕಿ.ಮೀ ರಸ್ತೆ ಅಭಿವೃದ್ಧಿ, ಜಲಜೀವನ ಮಿಷನ್ ಯೋಜನೆಯಡಿ ಪ್ರತಿ ಹಳ್ಳಿಯಲ್ಲಿ ಕುಡಿಯುವ ನೀರಿನ ಯೋಜನೆ ನೀಡಿರುವ ಮೋದಿ ಎಂದರೇ ಅಭಿವೃದ್ಧಿ, ಮೋದಿ ಎಂದರೇ ಸದೃಡ ಭಾರತದ ಹರಿಕಾರ ಎಂದರು. ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಎನ್‌ಡಿಎ ಬೆಂಬಲಿತ ಅಭ್ಯರ್ಥಿಯನ್ನು ಗೆಲ್ಲಿಸಿ ಕೇಂದ್ರದಲ್ಲಿ ೩ನೇ ಬಾರಿ ಮೋದಿಯನ್ನು ಪ್ರಧಾನಿಯಾಗಿಸಲು ಕೈಜೋಡಿಸಿ ಎಂದು ಮನವಿ ಮಾಡಿದರು. ಬಿಜೆಪಿ ತಾಲೂಕು ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಚ್.ರಾಜು, ತಾಲೂಕು ಪ್ರಧಾನ ಕಾರ್ಯದರ್ಶಿ ಪಿ.ವೆಂಕಟೇಶ್, ಪುರಸಭಾ ಸದಸ್ಯ ಎಂ.ವಿ.ವೇಮನ, ಮುಖಂಡ ತಬಲ ನಾರಾಯಣಪ್ಪ, ವಿ.ಹನುಮಪ್ಪ, ಎಸ್.ಎನ್.ರಘುನಾಥ್, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಅಮುದಾ ವೇಣು,ತಾಲೂಕು ಅಧ್ಯಕ್ಷೆ ಪದ್ಮಾವತಿ ನಾರಾಯಣಸ್ವಾಮಿ,ಮಾಜಿ ಪುರಸಭೆ ಅಧ್ಯಕ್ಷೆ ಭಾರತಮ್ಮ ನಂಜುಂಡಪ್ಪ, ನೀಲಾ ಚಂದ್ರ ಇನ್ನಿತರರು ಇದ್ದರು.

Share this article