ಮೋದಿ ಗೆದ್ದಿದ್ದು ವಾಮ ಮಾರ್ಗದಿಂದ: ಖರ್ಗೆ

Published : Oct 12, 2026, 09:17 AM IST
Mallikarjun kharge

ಸಾರಾಂಶ

ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಇಬ್ಬರೂ ಸೇರಿ ಪ್ರಜಾಪ್ರಭುತ್ವ ಅಳಿಸಿ ಹಾಕುವ ಮನಸ್ಥಿತಿಯಲ್ಲಿದ್ದಾರೆ. ಮೋದಿ ಅವರು ಗೆದ್ದು ಬಂದಿದ್ದೇ ವಾಮ ಮಾರ್ಗದಿಂದ. ಮೊದಲು ಮೋದಿ ಅವರು ರಾಜೀನಾಮೆ ಕೊಡಬೇಕು. ಮೋದಿ ನಿಜವಾದ ಪ್ರಧಾನಿ ಅಲ್ಲ

ಕಲಬುರಗಿ : ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಇಬ್ಬರೂ ಸೇರಿ ಪ್ರಜಾಪ್ರಭುತ್ವ ಅಳಿಸಿ ಹಾಕುವ ಮನಸ್ಥಿತಿಯಲ್ಲಿದ್ದಾರೆ. ಮೋದಿ ಅವರು ಗೆದ್ದು ಬಂದಿದ್ದೇ ವಾಮ ಮಾರ್ಗದಿಂದ. ಮೊದಲು ಮೋದಿ ಅವರು ರಾಜೀನಾಮೆ ಕೊಡಬೇಕು. ಮೋದಿ ನಿಜವಾದ ಪ್ರಧಾನಿ ಅಲ್ಲ. ನಮ್ಮ ಬೇಡಿಕೆಯಂತೆ ಇವಿಎಂ ತೆಗೆಯಿರಿ.‌ ಬ್ಯಾಲೆಟ್ ಪೇಪರ್ ಮೇಲೆ ಎಲೆಕ್ಷನ್ ಮಾಡಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಆಗ್ರಹಿಸಿದರು.

ರಾಹುಲ್ ಗಾಂಧಿ ಹೇಳಿಕೆ ಕೊಟ್ಟಾಗ ಕೆಲವರು ಅದರ ಬಗ್ಗೆ ತಮಾಷೆ

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಇವಿಎಂ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ಕೊಟ್ಟಾಗ ಕೆಲವರು ಅದರ ಬಗ್ಗೆ ತಮಾಷೆ ಮಾಡಿದ್ದರು. ಈಗ ಕೇಂದ್ರ ಚುನಾವಣಾ ಆಯೋಗದ ಇಬ್ಬರು ಸದಸ್ಯರೇ ಚುನಾವಣೆಯಲ್ಲಿ ಮಿಸ್ ಮ್ಯಾನೆಜ್ಮೆಂಟ್ ಮಾಡುತ್ತಿದ್ದಾರೆ. ಮತ ಕಳ್ಳತನ ಆಗುತ್ತದೆ, ವೋಟ್‌ ಬದಲಾವಣೆ ಆಗುತ್ತದೆ ಎಂದು ಬಹಿರಂಗವಾಗಿ ಮಾತನಾಡಿದ್ದಾರೆ ಎಂದು ಆತಂಕ ಹೊರಹಾಕಿದರು.

ಹಲವು ಸಂಗತಿಗಳು ಹೊರಬಂದ ಮೇಲೆಯೇ ರಾಹುಲ್ ಗಾಂಧಿ ಪ್ರತಿಭಟನೆ

ಇಂತಹ ಹಲವು ಸಂಗತಿಗಳು ಹೊರಬಂದ ಮೇಲೆಯೇ ರಾಹುಲ್ ಗಾಂಧಿ ಪ್ರತಿಭಟನೆ ಶುರು ಮಾಡಿದರು. ಆಳಂದ ಸೇರಿದಂತೆ ನಮ್ಮ ರಾಜ್ಯದಲ್ಲಿ ಮತಗಳ್ಳತನ ಯತ್ನಗಳು ನಡೆದಿವೆ. ಈ ಮೊದಲಿನಿಂದಲೂ ರಾಹುಲ್ ಗಾಂಧಿ ಅವರು ಇದನ್ನು ಹೇಳುತ್ತಲೇ ಬಂದಿದ್ದರು. ಈ ವಿಷಯ ಈಗ ಜನರ ಗಮನಕ್ಕೆ ತರಲು ನಾವು ಇಂಡಿಯಾ ಅಲಯನ್ಸ್ ಸೇರಿ ಪ್ರತಿಭಟನೆ ಶುರು ಮಾಡಿದ್ದೇವೆ. ರಾಹುಲ್ ಗಾಂಧಿ ಮಾತು ಸತ್ಯ ಇದೆ ಎನ್ನುವುದು ಗೊತ್ತಾಗಿ ಅನೇಕ ಯುವಕರೂ ಸಹ ಹೋರಾಟಕ್ಕೆ ಬೆಂಬಲಿಸುತ್ತಿದ್ದಾರೆ. ಆದರೆ ಮೋದಿ, ಅಮಿತ್ ಶಾ ಈ ಹೋರಾಟ ಸದೆಬಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಡಾ। ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

ಕೇಂದ್ರವು ಮತ ಕಳ್ಳತನಕ್ಕೆ ಎಷ್ಟು ಸಿದ್ಧತೆ ಮಾಡಿದೆ, ಅಂದರೆ ಜ್ಞಾನೇಶ್‌ ಕುಮಾರ್‌ ರಕ್ಷಣೆಗೆ ವಿಶೇಷ ಕಾನೂನು ಜಾರಿಗೆ ತಂದಿದ್ದಾರೆ. ಜ್ಞಾನೇಶ್‌ ಕುಮಾರ್‌ರಿಂದ ಲೋಪ ಆದರೂ ಶಿಕ್ಷೆ ಇಲ್ಲ. ಅವರು ಜೀವಂತವಾಗಿರುವವರೆಗೂ ಯಾರೂ ಮುಟ್ಟುವಂತಿಲ್ಲ ಎನ್ನುವ ಕಾನೂನು ತಂದಿದ್ದಾರೆ. ದೇಶದ ಜಡ್ಜ್‌ಗಳಿಗೆ, ರಾಷ್ಟ್ರಪತಿಗೆ ಇಲ್ಲದ ರಕ್ಷಣೆ ಅವರಿಗೆ ಕೊಟ್ಟಿದಾರೆ. ಜ್ಞಾನೇಶ್‌ ಕುಮಾರ್‌, ಮೋದಿ, ಶಾ ಸೇರಿ ತಪ್ಪು ಮಾಡಿಸಿದ್ದಾರೆಂದು ಖರ್ಗೆ ಟೀಕಿಸಿದರು. ಜ್ಞಾನೇಶ್‌ ಕುಮಾರ್‌ ಅವರನ್ನು ಕೂಡಲೇ ವಜಾ ಮಾಡಬೇಕು ಎಂದು ಆಗ್ರಹಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಇಂಡಿಯಾ ನಾಯಕರ ಭೇಟಿಗೆ ಸಿಜೆಐ ನಕಾರ
ಹಿರಿಯೂರಿನಲ್ಲಿ ತನ್ನ ಅಭ್ಯರ್ಥಿ ಕಣಕ್ಕಿಳಿಸಲು ಬಿಜೆಪಿ ನಿರ್ಧಾರ