ತುಮಕೂರು: ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಚಂಗಂನಲ್ಲಿ ಭಾನುವಾರ ಅಪಘಾತದಲ್ಲಿ ಮೃತಪಟ್ಟಿದ್ದ ಒಂದೇ ಕುಟುಂಬದ 7 ಮಂದಿಯ ಅಂತ್ಯಕ್ರಿಯೆ ತುಮಕೂರಿನಲ್ಲಿ ನೆರವೇರಿತು. ಕಳೆದ ಶನಿವಾರ ಪ್ರವಾಸಕ್ಕೆಂದು ಒಂದೇ ಕುಟುಂಬದ 8 ಮಂದಿ ತಮಿಳುನಾಡಿನ ತಿರುವಣ್ಣಾಮಲೈಗೆ ತೆರಳಿ ವಾಪಸ್ ಬರುವ ವೇಳೆ ಚಂಗಂನಲ್ಲಿ ಈ ಅಪಘಾತ ಸಂಭವಿಸಿದ್ದು, ತುಮಕೂರಿನ ಜಯನಗರದ ನಿವಾಸಿಗಳಾದ ಚನ್ನಪ್ಪ, ಮಲ್ಲರ್, ಮಣಿಕಂಠ, ಹೇಮಂತ್ ಸೇರಿ 7 ಮಂದಿ ಸಾವನ್ನಪ್ಪಿದ್ದಾರೆ. ಇನ್ನೊಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸೋಮವಾರ ಮೃತರ ಪಾರ್ಥಿವ ಶರೀರ ತುಮಕೂರಿಗೆ ಆಗಮಿಸಿದ್ದು, ಅಂತ್ಯಕ್ರಿಯೆ ನೆರವೇರಿತು. ಘಟನೆಯಿಂದಾಗಿ ಮೃತರ ಸಂಬಂಧಿಕರೆಲ್ಲ ದಿಗ್ಭ್ರಾಂತರಾಗಿದ್ದಾರೆ. ಅಂತಿಮ ದರ್ಶನ ಮಾಡಿದ ಕಾಂಗ್ರೆಸ್ ಮುಖಂಡ ಮುರಳೀಧರ ಹಾಲಪ್ಪ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು.