ನೆಲಮಂಗಲ: ಜೆಡಿಎಸ್‌ ಮುಖಂಡರು, ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆ

Published : Jun 10, 2025, 07:21 AM IST
Congress flag

ಸಾರಾಂಶ

ವೃಷಭಾವತಿ ಏತ ನೀರಾವರಿ ಯೋಜನೆಗೆ ವಿರೋಧ ಪಕ್ಷದವರು ವಿರೋಧಿಸುತ್ತಿದ್ದಾರೆ, ಸ್ವಚ್ಛವಲ್ಲದ ನೀರು ಬಂದರೆ ನಾನೆ ಖುದ್ದು ವಾಪಸ್ ಕಳುಹಿಸುತ್ತೇನೆ. ಶುದ್ಧ ಹಾಗೂ ಶಾಶ್ವತ ನೀರಾವರಿ ಯೋಜನೆ ನನ್ನ ಸಂಕಲ್ಪವಾಗಿದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

 ನೆಲಮಂಗಲ : ವೃಷಭಾವತಿ ಏತ ನೀರಾವರಿ ಯೋಜನೆಗೆ ವಿರೋಧ ಪಕ್ಷದವರು ವಿರೋಧಿಸುತ್ತಿದ್ದಾರೆ, ಸ್ವಚ್ಛವಲ್ಲದ ನೀರು ಬಂದರೆ ನಾನೆ ಖುದ್ದು ವಾಪಸ್ ಕಳುಹಿಸುತ್ತೇನೆ. ಶುದ್ಧ ಹಾಗೂ ಶಾಶ್ವತ ನೀರಾವರಿ ಯೋಜನೆ ನನ್ನ ಸಂಕಲ್ಪವಾಗಿದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ಜೆಡಿಎಸ್ ಮುಖಂಡರು ಹಾಗೂ ಅವರ 50ಕ್ಕೂ ಹೆಚ್ಚು ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಬೇಷರತ್ ಆಗಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಜೆಡಿಎಸ್ ಮುಖಂಡರನ್ನು ಕಡೆಗಣಿಸುವುದಿಲ್ಲ, ಅವರಿಗೆ ಸೂಕ್ತ ಸ್ಥಾನಮಾನಗಳನ್ನು ಕೊಟ್ಟು ಘನತೆ ಹೆಚ್ಚುವಂತೆ ಮಾಡುತ್ತೇವೆ, ಹಾಲಿ ಕಾಂಗ್ರೆಸ್ ಕಾರ್ಯಕರ್ತರು ಸೇರ್ಪಡೆಗೊಂಡವರೊಂದಿಗೆ ವೈಮನಸ್ಸು ಮರೆತು ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಬೇಕು. ಚುನಾವಣೆ ಸಮಯವಲ್ಲದಿದ್ದರೂ ಪಕ್ಷವನ್ನು ಸಧೃಡಗೊಳಿಸಲು ಸೇರ್ಪಡೆಯಾಗಿದ್ದಾರೆ, ಅಭಿವೃದ್ಧಿ ವಿಷಯವಾಗಿ ಕಾಲಲ್ಲಿ ಹೇಳಿದ್ದನ್ನು ಕೈಯಲ್ಲಿ ಮಾಡುತ್ತೇನೆ ಎಂದರು.

ನೂತನ ತಾಲೂಕು ಕಚೇರಿ ಪ್ರಜಾಸೌಧ ಹಾಗೂ ಒಳಚರಂಡಿ ಯೋಜನೆ ಅನುಮೋದನೆ ಹಂತದಲ್ಲಿದೆ, ನೆಲಮಂಗಲಕ್ಕೆ .015 ಟಿಎಂಸಿ ಕಾವೇರಿ ನೀರು ಕೊಡುವುದಾಗಿ ಉಪಮುಖ್ಯಮಂತ್ರಿ ತಿಳಿಸಿದ್ದರು, ಇದು ಸಾಕಾಗುವುದಿಲ್ಲ ಇನ್ನೂ ಹೆಚ್ಚಿನ ನೀರು ಅವಶ್ಯಕತೆ ಇದೆ ಎಂದು ಹೇಳಿದ್ದೇನೆ ಎಂದರು.

ಟಿ.ಬೇಗೂರು ಪಂಚಾಯಿತಿ ಸದಸ್ಯ ಬಿ.ಕೆ.ಮುನಿರಾಜು, ಗ್ರಾ.ಪಂ.ಸದಸ್ಯ ಬಿ.ಕೆ.ಶ್ರೀನಿವಾಸ್, ವಜ್ರಘಟ್ಟೆಪಾಳ್ಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮುನಿರಾಮು, ಮುಖಂಡ ಸುರೇಶ್, ಮಣ್ಣೆ ಎನ್.ಸೀತಾರಾಮಯ್ಯ, ದೊಡ್ಡಬೆಲೆ ಗಂಗಣ್ಣ, ಲಕ್ಕೇನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಂಜುನಾಥ್, ಗ್ರಾ.ಪಂ.ಸದಸ್ಯರಾದ ದೊಡ್ಡಬೆಲೆ ಗಂಗಣ್ಣ, ಕುಲುವನಹಳ್ಳಿ ಕನ್ನಿಕ, ಟಿ.ಬೇಗೂರು ಯಶೋಧಮ್ಮ ತಿಮ್ಮರಾಜು, ಲತಾ ಹನುಮಂತರಾಜು, ರಾಧಾ ಸಿದ್ದರಾಜು, ಕಲಾವತಿ ಮುನಿರಾಜು ವಸಂತಕುಮಾರ್, ಜಗದೀಶ್ ಚೌಡಯ್ಯ ಇನ್ನು ಅನೇಕರು ಬೆಂಬಲಿಗರೊಂದಿಗೆ ಸೇರ್ಪಡೆಗೊಂಡರು.

ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾರಾಯಣಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ತಾಲೂಕು ಅಧ್ಯಕ್ಷ ವಜ್ರಘಟ್ಟ ನಾಗರಾಜು, ಮುಖಂಡ ಎಂ.ಕೆ.ನಾಗರಾಜು ಇದ್ದರು. 

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಸರ್ವಜನಾಂಗ ಶಾಂತಿಯ ತೋಟ ಆಗಲು ಈ ಮಸೂದೆ ಬೇಕೇಬೇಕು