ಮೋದಿಗೆ ಏನು ಮಾಡ್ಬೋದು ನೋಡೋಣ ವಿಪಕ್ಷ ಸಂಚು - ಪ್ರಧಾನಿ ಮೇಲೆ ಹಲ್ಲೆ ಪ್ರಶ್ನೆಯೇ ಇಲ್ಲ: ಪ್ರಿಯಾಂಕಾ

Published : Feb 10, 2026, 06:55 AM IST
modi priyanka

ಸಾರಾಂಶ

 ಪ್ರಧಾನಿ ಕೂರುವ ಸ್ಥಳವನ್ನು ಆಕ್ರಮಿಸಿಕೊಂಡಿದ್ದ ವಿಪಕ್ಷಗಳ ಸದಸ್ಯರು, ಸ್ಪೀಕರ್‌ ಮುಂದಿನ ಟೇಬಲ್‌ ಮೇಲೇರಿ ಪೇಪರ್‌ ಹರಿದಿದ್ದಲ್ಲದೇ, ‘ಮೋದಿಗೆ ನಾವು ಏನು ಮಾಡ್ಬೋದು ನೋಡೋಣ’ ಎಂಬ ಬೆದರಿಕೆಯ ಸ್ವರೂಪದ ಮಾತುಗಳನ್ನು ಆಡಿದ್ದರು ಎಂಬ  ವಿಷಯ ಬೆಳಕಿಗೆ

 ನವದೆಹಲಿ: ಇತ್ತೀಚೆಗೆ ಲೋಕಸಭೆಯಲ್ಲಿ ಪ್ರಧಾನಿ ಕೂರುವ ಸ್ಥಳವನ್ನು ಆಕ್ರಮಿಸಿಕೊಂಡಿದ್ದ ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳ ಸದಸ್ಯರು, ಸ್ಪೀಕರ್‌ ಮುಂದಿನ ಟೇಬಲ್‌ ಮೇಲೇರಿ ಪೇಪರ್‌ ಹರಿದಿದ್ದಲ್ಲದೇ, ‘ಮೋದಿಗೆ ನಾವು ಏನು ಮಾಡ್ಬೋದು ನೋಡೋಣ’ ಎಂಬ ಬೆದರಿಕೆಯ ಸ್ವರೂಪದ ಮಾತುಗಳನ್ನು ಆಡಿದ್ದರು ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಕೇಂದ್ರ ಸರ್ಕಾರ ಮತ್ತು ಲೋಕಸಭಾ ಕಾರ್ಯಾಲಯದ ಮೂಲಗಳು ಇಂಥ ಬೆಳವಣಿಗೆ ನಡೆದಿದ್ದರ ಬಗ್ಗೆ ಬೆಳಕು ಚೆಲ್ಲಿವೆ.

ಪ್ರಧಾನಿ ಮೇಲೆ ಹಲ್ಲೆ ನಡೆಸುವ ಪ್ರಶ್ನೆಯೇ ಇಲ್ಲ: ಪ್ರಿಯಾಂಕಾ 

 ನವದೆಹಲಿ :  ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಲೋಕಸಭೆಯಲ್ಲಿ ಯಾರೊಬ್ಬರೂ ಕೈ ಎತ್ತುವ ಪ್ರಶ್ನೆಯೇ ಇಲ್ಲ. ಅಂತಹ ಕೆಲಸವನ್ನು ಯಾರೂ ಮಾಡುವುದಿಲ್ಲ ಎಂದು ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಪ್ರಧಾನಿ ಮೋದಿ ಅವರ ಅನುಪಸ್ಥಿತಿಯನ್ನು ಸಮರ್ಥಿಸಿಕೊಳ್ಳುವ ಒತ್ತಡಕ್ಕೆ ಸಿಲುಕಿರುವ ಲೋಕಸಭಾ ಸ್ಪೀಕರ್‌ ಅವರು ಈ ರೀತಿಯ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸ್ಪೀಕರ್‌ ಅವರಿಗೆ ಪತ್ರವನ್ನೂ ಪ್ರಿಯಾಂಕಾ ಬರೆದಿದ್ದಾರೆ

ಈ ಸಂಬಂಧ ಕಾಂಗ್ರೆಸ್ ಮಹಿಳಾ ಸಂಸದರ ಜತೆಗೂಡಿ ಸ್ಪೀಕರ್‌ ಅವರಿಗೆ ಪತ್ರವನ್ನೂ ಪ್ರಿಯಾಂಕಾ ಬರೆದಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಅವರು ಲೋಕಸಭೆಯಲ್ಲಿ 11 ಮಹಿಳಾ ಸಂಸದರು ಇದ್ದು, ಅವರೆಲ್ಲಾ ಗಂಭೀರ ಸ್ವಭಾವದವರು. ಮೋದಿ ಅವರ ಮೇಲೆ ಹಲ್ಲೆ ಯತ್ನ ನಡೆದಿದೆ ಎಂಬ ಹೇಳಿಕೆಯನ್ನು ಸ್ಪೀಕರ್‌ ಅವರು ನೀಡಬಾರದಿತ್ತು. ಅವರಿಗೆ ಸರ್ಕಾರದ ಕಡೆಯಿಂದ ಒತ್ತಡವಿದೆ. ಸದನಕ್ಕೆ ಬರುವ ಧೈರ್ಯ ಮೋದಿ ಅವರಿಗೆ ಇಲ್ಲದ ಕಾರಣ ಸ್ಪೀಕರ್‌ ಅವರು ಈ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ಇದು ತಪ್ಪು ಎಂದು ತಿಳಿಸಿದರು.

ಪ್ರಧಾನಿ ಮೋದಿ ಅವರ ಜನವಿರೋಧಿ ನೀತಿಗಳ ವಿರುದ್ಧ ನಿರಂತರವಾಗಿ ನಾವು ಹೋರಾಟ ಮಾಡಿಕೊಂಡು ಬಂದಿದ್ದೇವೆ. ಆದ ಕಾರಣ ನಮ್ಮನ್ನು ವಿನಾಕಾರಣ ಗುರಿಯಾಗಿಸಿಕೊಳ್ಳಲಾಗಿದೆ. ಮೋದಿ ಅವರು ಸದನಕ್ಕೆ ಗೈರು ಹಾಜರಾಗುತ್ತಿರುವುದಕ್ಕೆ ನಾವು ಕಾರಣ ಅಲ್ಲ. ಭಯದಿಂದ ಆ ರೀತಿ ಮಾಡುತ್ತಿದ್ದಾರೆ ಎಂದು ದೂರಿದರು.

ಮೋದಿ ಅವರತ್ತ ಕಾಂಗ್ರೆಸ್ ಸದಸ್ಯರು ನುಗ್ಗಿ ‘ಅನಿರೀಕ್ಷಿತ ಕೃತ್ಯ’ ಎಸಗುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸದನಕ್ಕೆ ಬಾರದಂತೆ ಅವರಿಗೆ ಸೂಚನೆ ನೀಡಿದ್ದೆ ಎಂದು ಸ್ಪೀಕರ್‌ ಅವರು ಕಳೆದ ವಾರ ತಿಳಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

80 ಶಾಸಕರ ಬೆಂಬಲ ಇದೆ ಎಂಬುದು ಪ್ರಶ್ನೆಯಲ್ಲ: ಸತೀಶ್‌
ನಮ್ಮ ಪ್ರಚೋದಿಸಬೇಡಿ- ಡಿಕೆ ಸಿಎಂ ಮಾಡಿ ಅಂತ 90 ಶಾಸಕರು ಕೇಳಿದ್ದೇವೆ : ಯತೀಂದ್ರಗೆ ಇಕ್ಬಾಲ್‌