ವಾಲ್ಮೀಕಿ ಹಗರಣದಲ್ಲಿ ಸಿಎಂ ಪಾತ್ರ ಇಲ್ಲ: ಸಚಿವ ಕೆ.ಎಚ್.ಮುನಿಯಪ್ಪ

KannadaprabhaNewsNetwork |  
Published : Jul 15, 2024, 01:46 AM ISTUpdated : Jul 15, 2024, 04:47 AM IST
೧೪ಕೆಎಲ್‌ಆರ್-೧೩ಕೋಲಾರದ ಕುರುಬರಪೇಟೆಯ ಮುನೇಶ್ವರ ದೇವಾಲಯದ ದೀಪೋತ್ಸವ ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಇದ್ದರು. | Kannada Prabha

ಸಾರಾಂಶ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗಣರದ ಬಗ್ಗೆ ಇಡಿ ಸಂಸ್ಥೆಯಿಂದ ವಿಚಾರಣೆ ನಡೆಯುತ್ತಿದ್ದು ಕಾನೂನು ಪ್ರಕಾರ ಏನಿದೆಯೋ ಅದನ್ನು ಇಡಿ ತನಿಖೆ ನಡೆಸಲಿದ್ದಾರೆ. ಯಾವುದೇ ವಿಷಯದ ಬಗ್ಗೆ ವಿಚಾರಣೆ ನಡೆಯವ ಸಂದರ್ಭದಲ್ಲಿ ಈಗಲೇ ಅಂತಿಮ ನಿರ್ಧಾರ ಹೇಳಲು ಬರುವುದಿಲ್ಲ

 ಕೋಲಾರ  : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಪಾತ್ರವಿಲ್ಲ. ಹಗರಣದ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದ್ದು ತನಿಖೆಯ ನಂತರವಷ್ಟೇ ವಾಸ್ತವಾಂಶಗಳು ಹೊರಬರಲಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ನಗರದ ಕುರುಬರಪೇಟೆಯ ಮುನೇಶ್ವರ ದೇವಾಲಯದ ದೀಪೋತ್ಸವ ಕಾರ್ಯಕ್ರಮದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗಣರದ ಬಗ್ಗೆ ಇಡಿ ಸಂಸ್ಥೆಯಿಂದ ವಿಚಾರಣೆ ನಡೆಯುತ್ತಿದ್ದು ಕಾನೂನು ಪ್ರಕಾರ ಏನಿದೆಯೋ ಅದನ್ನು ಇಡಿ ತನಿಖೆ ನಡೆಸಲಿದ್ದಾರೆ. ಯಾವುದೇ ವಿಷಯದ ಬಗ್ಗೆ ವಿಚಾರಣೆ ನಡೆಯವ ಸಂದರ್ಭದಲ್ಲಿ ಈಗಲೇ ಅಂತಿಮ ನಿರ್ಧಾರ ಹೇಳಲು ಬರುವುದಿಲ್ಲ ಎಂದರು.ಟೀಕಿಸುವುದೇ ಪ್ರತಿಪಕ್ಷದ ಕೆಲಸ

ರಾಜ್ಯದಲ್ಲಿ ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣವು ತನಿಖೆ ಹಂತದಲ್ಲಿ ಇರುವುದರಿಂದ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸರಕಾರಕ್ಕೆ ಬರುವುದಿಲ್ಲ, ಆದರೆ ವಿರೋಧ ಪಕ್ಷದವರು ರಾಜ್ಯದ ಅಭಿವೃದ್ಧಿ ವಿಚಾರಗಳೊಂದಿಗೆ ರಾಜಕಾರಣ ಮಾಡುವುದನ್ನು ಬಿಟ್ಟು ಸುಮ್ಮನೆ ಆಡಳಿತದ ಪಕ್ಷದ ವಿರುದ್ದ ಮಾತಾಡುವುದೇ ಅವರ ಕೆಲಸವಾಗಿದೆ ಎಂದು ಹೇಳಿದರು.ಸಿಎಂ ಬದಲಾವಣೆ ಇಲ್ಲ

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಸುಮಾರು 4.5 ಕೋಟಿ ಜನ ನೆಮ್ಮದಿಯಿಂದ ಬದುಕುವ ವಾತಾವರಣ ಕಾಂಗ್ರೆಸ್ ಸರ್ಕಾರ ಮಾಡಿಕೊಟ್ಟಿದೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಯಿಂದ ಅನುಕೂಲವಾಗುವಂತೆ ಮಾಡಿದ್ದಾರೆ. ಇಂತಹ ಪವಿತ್ರವಾದ ಕೆಲಸವನ್ನು ಕಾಂಗ್ರೆಸ್ ಸರಕಾರದಿಂದ ಮಾತ್ರವೇ ಸಾಧ್ಯ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾತನಾಡಿ ಅವರು ಅಂತಹ ತೀರ್ಮಾನ ಇನ್ನೂ ನಡೆದಿಲ್ಲ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ವಕ್ತಾರ ಎಲ್.ಎ.ಮಂಜುನಾಥ್, ನಗರ ಬ್ಲಾಕ್ ಅಧ್ಯಕ್ಷ ಪ್ರಸಾದ್ ಬಾಬು, ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಜಯದೇವ್, ಎಸ್ಟಿ ಘಟಕದ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಒಬಿಸಿ ಮಂಜುನಾಥ್, ಕೆ.ಆರ್.ತ್ಯಾಗರಾಜ್, ದೇವುಡು ಇದ್ದರು.

PREV

Recommended Stories

ಭಯಪಟ್ಟು ಮಾಡಿರುವ ಪಾತ್ರ ನನ್ನದು : ಪ್ರಜ್ವಲ್ ದೇವರಾಜ್
ಸ್ಪೀಕರ್ ವಿರುದ್ಧ ಹೊರಟ್ಟಿ ಸಿಟ್ಟು : ಅಸಮಾಧಾನಕ್ಕೆ ಪತ್ರದಲ್ಲಿ ಖಾದರ್‌ ಸ್ಪಷ್ಟನೆ