ಗೋಪಾಲಯ್ಯ ನೇತೃತ್ವದ ಮಹಾಲಕ್ಷ್ಮೀ ಎಜುಕೇಷನಲ್ ಟ್ರಸ್ಟ್‌ ವತಿಯಿಂದ ಪೌಷ್ಟಿಕಾಂಶ ಕಿಟ್‌ ವಿತರಣೆ

KannadaprabhaNewsNetwork |  
Published : Apr 01, 2025, 02:01 AM ISTUpdated : Apr 01, 2025, 04:21 AM IST
Goplaiah | Kannada Prabha

ಸಾರಾಂಶ

ಶಾಸಕ ಕೆ.ಗೋಪಾಲಯ್ಯ ನೇತೃತ್ವದ ಮಹಾಲಕ್ಷ್ಮೀ ಎಜುಕೇಷನಲ್ ಟ್ರಸ್ಟ್‌ ವತಿಯಿಂದ ಭಾನುವಾರ ಕ್ಷಯ ರೋಗಿಗಳಿಗೆ ಪೌಷ್ಟಿಕಾಂಶ ಆಹಾರ ಕಿಟ್‌ ಒಳಗೊಂಡಿರುವ ದಿನಸಿ ಪದಾರ್ಥಗಳನ್ನು ವಿತರಣೆ ಮಾಡಲಾಯಿತು.

 ಬೆಂಗಳೂರು : ಶಾಸಕ ಕೆ.ಗೋಪಾಲಯ್ಯ ನೇತೃತ್ವದ ಮಹಾಲಕ್ಷ್ಮೀ ಎಜುಕೇಷನಲ್ ಟ್ರಸ್ಟ್‌ ವತಿಯಿಂದ ಭಾನುವಾರ ಕ್ಷಯ ರೋಗಿಗಳಿಗೆ ಪೌಷ್ಟಿಕಾಂಶ ಆಹಾರ ಕಿಟ್‌ ಒಳಗೊಂಡಿರುವ ದಿನಸಿ ಪದಾರ್ಥಗಳನ್ನು ವಿತರಣೆ ಮಾಡಲಾಯಿತು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣೆ ಮಾಡಿದರು. 2022ರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಧಾನಮಂತ್ರಿ ಟಿ.ಬಿ ಮುಕ್ತ ಭಾರತ ಅಭಿಯಾನ ಘೋಷಿಸಿದರು. ಪ್ರಧಾನಿ ನರೇಂದ್ರ ಮೋದಿ ಸಹ ಈ ಅಭಿಯಾನದ ಮೂಲಕ ಕ್ಷಯ ರೋಗವನ್ನು ಭಾರತದಿಂದ ಕಿತ್ತೊಗೆಯುವ ಬಗ್ಗೆ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದರು.

ಇದರಿಂದ ಪ್ರೇರಣೆಗೊಂಡ ಗೋಪಾಲಯ್ಯ ಅವರು ತಮ್ಮ ಟ್ರಸ್ಟ್ ಮೂಲಕ ಟಿ.ಬಿ.ಮುಕ್ತ ಭಾರತ್‌ ಅಭಿಯಾನ್‌ ಕೈಗೊಳ್ಳಲು ನಿರ್ಧರಿಸಿದರು. ಆರೋಗ್ಯ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಉಚಿತವಾಗಿ ಪೌಷ್ಠಿಕಾಂಶ ಆಹಾರ ಕಿಟ್‌ ನೀಡುವ ಮೂಲಕ ಅಭಿಯಾನ ಪ್ರಾರಂಭಿಸಿದರು. ಪ್ರತಿ ತಿಂಗಳು ಸುಮಾರು 140 ರಿಂದ 160 ಕ್ಷಯ ಸೋಂಕಿತರಿಗೆ ಔಷಧಿಗಳ ಜತೆಗೆ ಪೌಷ್ಠಿಕಾಂಶ ಆಹಾರ ಕಿಟ್‌ ನೀಡಲಾಗುತ್ತಿದೆ.

ಪೌಷ್ಠಿಕಾಂಶ ಆಹಾರ ಕಿಟ್‌ ವಿತರಣೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಬೆಂಗಳೂರು ನಗರ ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್ ಹರೀಶ್, ರಾಜೀವ್ ಟ್ರಸ್ಟ್‌ನ ಅಧ್ಯಕ್ಷ ಜಯರಾಮಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಎಂಎಸ್‌ಎಂಇ ಅಭಿವೃದ್ಧಿಗೆ ಸಂಪೂರ್ಣ ಸಹಕಾರ : ಸಚಿವೆ ಶೋಭಾ ಕರಂದ್ಲಾಜೆ