ಖುದ್ದು ತೆರಳಿ ಪಾಕ್‌ ತಾಕತ್ತು ಚೆಕ್‌ ಮಾಡಿದ್ದೇನೆ: ಮೋದಿ

KannadaprabhaNewsNetwork |  
Published : May 24, 2024, 12:58 AM ISTUpdated : May 24, 2024, 05:38 AM IST
ನರೇಂದ್ರ ಮೋದಿ | Kannada Prabha

ಸಾರಾಂಶ

ನಾನೇ ಖುದ್ದಾಗಿ ಲಾಹೋರ್‌ಗೆ ಹೋಗಿ ಪಾಕಿಸ್ತಾನದ ತಾಕತ್ತನ್ನು ಚೆಕ್‌ ಮಾಡಿಕೊಂಡು ಬಂದಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ನವದೆಹಲಿ: ನಾನೇ ಖುದ್ದಾಗಿ ಲಾಹೋರ್‌ಗೆ ಹೋಗಿ ಪಾಕಿಸ್ತಾನದ ತಾಕತ್ತನ್ನು ಚೆಕ್‌ ಮಾಡಿಕೊಂಡು ಬಂದಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ ನಾಯಕ ಮಣಿಶಂಕರ್‌ ಅಯ್ಯರ್‌ ಅವರ, ‘ಪಾಕ್‌ ಬಳಿ ಅಣುಬಾಂಬ್‌ ಇದೆ. ಹೀಗಾಗಿ ನಾವು ಅದರ ತಾಕತ್ತನ್ನು ಗೌರವಿಸಬೇಕು’ ಎಂಬ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ‘ನಾನೇ ಖುದ್ದಾಗಿ ಹೋಗಿ ಆ ತಾಕತ್ತನ್ನು ಪರಿಶೀಲಿಸಿಕೊಂಡು ಬಂದಿದ್ದೇನೆ’ ಎಂದು ಹೇಳಿದ್ದಾರೆ.

ಇಂಡಿಯಾ ಟೀವಿಗೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನದ ತಾಕತ್ತಿನ ಪ್ರಶ್ನೆ ಬಂದಾಗ ಮೋದಿ ಈ ರೀತಿ ಉತ್ತರಿಸಿದ್ದಾರೆ.

ಸಂದರ್ಶನದಲ್ಲಿ 2015ರಲ್ಲಿ ತಾವು ಪಾಕಿಸ್ತಾನಕ್ಕೆ ನೀಡಿದ್ದ ಭೇಟಿಯನ್ನು ಮೆಲುಕು ಹಾಕಿದ ಮೋದಿ, ‘ನಾನು ಪಾಕಿಸ್ತಾನಕ್ಕೆ ಹೋದಾಗ ಅನೇಕ ವರದಿಗಾರರು ಹೇ ಅಲ್ಲಾ, ನೀವು ವೀಸಾ ಇಲ್ಲದೆ ಬಂದುಬಿಟ್ಟಿದ್ದೀರಿ ಎಂದು ಕೇಳಿದ್ದರು. ಅದಕ್ಕೆ ನಾನು ಹಿಂದೊಮ್ಮೆ ಇದು ನನ್ನದೇ ದೇಶವಾಗಿತ್ತು ಎಂದು ಹೇಳಿದೆ’ ಎಂದೂ ತಿಳಿಸಿದರು.

2015ರಲ್ಲಿ ರಷ್ಯಾ, ಆಫ್ಘಾನಿಸ್ತಾನ ಭೇಟಿ ಮುಗಿಸಿ ತವರಿಗೆ ಮರಳುವ ವೇಳೆ ಪ್ರಧಾನಿ ಮೋದಿ ದಿಢೀರನೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಅದು ಹಿಂದಿನ 10 ವರ್ಷಗಳಲ್ಲೇ ಭಾರತದ ಪ್ರಧಾನಿಯೊಬ್ಬರ ಮೊದಲ ಪಾಕ್‌ ಭೇಟಿಯಾಗಿತ್ತು. ಈ ಭೇಟಿಯ ವೇಳೆ ಪ್ರಧಾನಿ ನವಾಜ್‌ ಷರೀಫ್‌ ಮತ್ತು ಅವರ ಕುಟುಂಬ ಸದಸ್ಯರನ್ನು ಮೋದಿ ಭೇಟಿ ಮಾಡಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿ: ರಾಮಲಿಂಗಾರೆಡ್ಡಿ
ಯುದ್ಧದಿಂದ ರಾಜ್ಯದಲ್ಲಿ ಸಿಲುಕಿರುವ ಪ್ರವಾಸಿಗರ ಆತಿಥ್ಯಕ್ಕೆ ಕ್ರಮ: ಎಚ್‌.ಕೆ.ಪಾಟೀಲ್‌