ಬೆಂಗಳೂರು ಮೆಟ್ರೋ ಪಿಂಕ್‌ ಲೈನ್‌ ಲೋಕಾರ್ಪಣೆಗೆ ಮೋದಿ

Published : Oct 29, 2026, 10:35 AM IST
Narendra Modi

ಸಾರಾಂಶ

ಬೆಣಗಳೂರು ನಮ್ಮ ಮೆಟ್ರೋ ರೈಲಿನ ಹೊಸ ಮಾರ್ಗ ಪಿಂಕ್ ಲೈನ್ ಉದ್ಘಾಟನೆಗೆ ಆಗಮಿಸಲು ಪ್ರಧಾನಿ ನರೇಂದ್ರ ಮೋದಿ ಒಪ್ಪಿಗೆ ಸೂಚಿಸಿದ್ದಾರೆ,ಈ ಬಗ್ಗೆ ಅಧಿಕೃತ ದಿನ ಇನ್ನೂ ನಿಗದಿಯಾಗಬೇಕಿದೆ. ಆದರೆ. ಎಲ್ಲಾ ಅಂದುಕೊಂಡಂತೆ ಆದರೆ, ನವೆಂಬರ್ 15ಕ್ಕೆ ಮೋದಿ ಚಾಲನೆ ನೀಡುವುದು ಬಹುತೇಕ ಖಚಿತ ಎನ್ನಲಾಗಿದೆ.

ಬೆಂಗಳೂರು : ಬೆಣಗಳೂರು ನಮ್ಮ ಮೆಟ್ರೋ ರೈಲಿನ ಹೊಸ ಮಾರ್ಗ ಪಿಂಕ್ ಲೈನ್ ಉದ್ಘಾಟನೆಗೆ ಆಗಮಿಸಲು ಪ್ರಧಾನಿ ನರೇಂದ್ರ ಮೋದಿ ಒಪ್ಪಿಗೆ ಸೂಚಿಸಿದ್ದಾರೆ,

ಈ ಬಗ್ಗೆ ಅಧಿಕೃತ ದಿನ ಇನ್ನೂ ನಿಗದಿಯಾಗಬೇಕಿದೆ. ಆದರೆ. ಎಲ್ಲಾ ಅಂದುಕೊಂಡಂತೆ ಆದರೆ, ನವೆಂಬರ್ 15ಕ್ಕೆ ಮೋದಿ ಚಾಲನೆ ನೀಡುವುದು ಬಹುತೇಕ ಖಚಿತ ಎನ್ನಲಾಗಿದೆ. ಈ ಸಂಬಂಧ ಪ್ರಧಾನ ಮಂತ್ರಿಗಳ ಸಚಿವಾಲಯದಿಂದ ಅಧಿಕೃತ ಸೂಚನೆ ಹೊರಬೀಳಬೇಕಾಗಿದ್ದು, ಸೂಚನೆಗಾಗಿ ಮೆಟ್ರೋ ಅಧಿಕಾರಿಗಳು ಕಾಯುತ್ತಿದ್ದಾರೆ.

ಪ್ರಧಾನಿ ಸಚಿವಾಲಯದಿಂದ ಮಂಗಳವಾರ ಮೆಟ್ರೋ ಮುಖ್ಯಸ್ಥರಿಗೆ ಈ ಸಂಬಂಧ ದೂರವಾಣಿ ಮೂಲಕ ಪಿಂಕ್ ಲೈನ್ ಉದ್ಘಾಟನೆಗೆ ಎಲ್ಲಾ ಸಿದ್ಧವಿದೆಯೇ, ಪರಿಸ್ಥಿತಿ ಹೇಗೆ ಎಂಬುದನ್ನು ವಿಚಾರಿಸಲಾಗಿದೆ. ಈ ಸಂಬಂಧ ಮೆಟ್ರೋ ಮುಖ್ಯಸ್ಥರು ನಾಳೆಯಿಂದ ಯಾವುದೇ ದಿನವಾದರೂ ತಾವು ಸಿದ್ಧವಿರುವುದಾಗಿ ಪ್ರಧಾನಿ ಸಚಿವಾಲಯದ ಅಧಿಕಾರಿಗಳಿಗೆ ವಿವರ ನೀಡಿದ್ದಾರೆ. ದೀಪಾವಳಿ ಹಬ್ಬದ ನಂತರ ಆಗಬಹುದೇ ಎಂದು ತಿಳಿಸಿದ್ದು, ಇದಕ್ಕೆ ಮೆಟ್ರೋ ಮುಖ್ಯಸ್ಥರು ತಾವು ಸಿದ್ಧ ಎಂದು ತಿಳಿಸಿದ್ದಾರೆ.

ಸುರಕ್ಷತಾ ಅನುಮತಿ:

ಬುಧವಾರ ಸಂಜೆ ಕಮಿಷನರ್ ಆಫ್ ಮೆಟ್ರೋ ರೈಲ್ವೆ ಸೇಫ್ಟಿ (ಸಿಎಂಆರ್ ಎಸ್ ) ಕಾಳೇನಅಗ್ರಹಾರ-ತಾವರೆಕೆರೆ ಪಿಂಕ್ ಲೈನ್ ನ ಮೇಲ್ಸೇತುವೆ (ಎಲಿವೇಟೆಡ್)ಮಾರ್ಗದ ಸುರಕ್ಷತಾ ಅನುಮತಿ ದೊರೆತಿದೆ.

ಈ ಸಂಬಂಧ ಸಚಿವ ಕೃಷ್ಣಬೈರೇಗೌಡ ಅವರು ಮಾಹಿತಿ ನೀಡಿದ್ದು, ಸುದೀರ್ಘ ಪ್ರಯತ್ನದ ನಂತರ, ಪಿಂಕ್ ಲೈನ್ ಗೆ ಈಗ ಸುರಕ್ಷತಾ ಮಂಜೂರಾತಿ ದೊರೆತಿದೆ. ಭಾರತ ಸರ್ಕಾರವು ಉದ್ಘಾಟನೆಯ ದಿನಾಂಕವನ್ನು ನೀಡಿದ ತಕ್ಷಣವೇ ಸಾರ್ವಜನಿಕ ಸೇವೆಯನ್ನು ಪ್ರಾರಂಭಿಸಲು ತಾವು ಸಿದ್ಧರಾಗಿದ್ದೇವೆ. ದಿನಾಂಕಕ್ಕಾಗಿ ಕೋರಿ ಈಗಾಗಲೇ ಅವರಿಗೆ ಪತ್ರ ಬರೆದಿದ್ದೇವೆ. ನಮ್ಮ ಮೆಟ್ರೋ ಜಾಲವನ್ನು ವಿಸ್ತರಿಸುವ ಮೂಲಕ ಜನರಿಗೆ ಮತ್ತಷ್ಟು ಉತ್ತಮ ಸೇವೆ ನೀಡುವತ್ತ ಇನ್ನೊಂದು ಹೆಜ್ಜೆಯಿಡಲು ಹಾಗೂ ಎಲಿವೇಟೆಡ್ ಪಿಂಕ್ ಲೈನ್ ಉದ್ಘಾಟಿಸಲು ಕಾತರದಿಂದ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಪಿ.ಸಿ.ಜಾಫರ್ ಕನ್ನಡಪ್ರಭಕ್ಕೆ ಮಾಹಿತಿ ನೀಡಿ, ಪ್ರಧಾನ ಮಂತ್ರಿಗಳ ಸಚಿವಾಲಯದಿಂದ ಮಂಗಳವಾರ ಕರೆ ಮಾಡಿ ಪಿಂಕ್ ಮಾರ್ಗದ ಉದ್ಘಾಟನೆ ಹಾಗೂ ಸಿದ್ಧತೆ ಬಗ್ಗೆ ವಿಚಾರಿಸಿದ್ದು, ಎಲ್ಲಾ ವಿವರಗಳನ್ನು ನೀಡಲಾಗಿದೆ. ಅಲ್ಲದೆ, ದೀಪಾವಳಿ ನಂತರ ನ.15ಕ್ಕೆ ಸೂಕ್ತವೇ ಎಂದು ಕೇಳಿದ್ದು, ತಾವು ಸಿದ್ಧವಿರುವುದಾಗಿ ಅವರಿಗೆ ತಿಳಿಸಿದ್ದೇನೆ. ಅಲ್ಲದೆ, ಪಿಂಕ್ ಲೈನ್ ಸಂಚಾರಕ್ಕೆ ಸಿಎಂಆರ್ ಎಸ್ ನಿಂದ ಬುಧವಾರ ಸಂಜೆ ಅನುಮತಿ ದೊರೆತಿದೆ. ಈ ವಿಷಯವನ್ನೂ ಪ್ರಧಾನಮಂತ್ರಿಗಳ ಸಚಿವಾಲಯಕ್ಕೆ ತಾನು ಸಂಜೆಯೇ ತಿಳಿಸಿದ್ದೇನೆ. ಪಿಎಂ ಕಚೇರಿಯಿಂದ ಬರುವ ಸೂಚನೆಗಾಗಿ ಕಾಯುತ್ತಿರುವುದಾಗಿ ತಿಳಿಸಿದರು.

ಬೆಂಗ್ಳೂರಿಗೆ ಮೋದಿ ಬಂದಾಗ ಸರ್ವಪಕ್ಷ

ತಂಡದ ಭೇಟಿ: ಸಿಎಂಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನ.15 ರಂದು ಮೆಟ್ರೋ ಪಿಂಕ್‌ ಲೈನ್‌ ಉದ್ಘಾಟನೆಗಾಗಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಬರ ಪರಿಹಾರಕ್ಕೆ ಸಂಬಂಧಿಸಿ ಸರ್ವಪಕ್ಷ ನಿಯೋಗ ಭೇಟಿಗೆ ಸಮಯ ನಿಗದಿ ಮಾಡಲು ಕೋರುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಮೋದಿ ಮೈಸೂರಿಗೆ ಬರಬೇಕಿತ್ತು. ಆದರೆ ದಸರಾ ಪ್ರಯುಕ್ತ ಅದನ್ನು ಮುಂದೂಡಲಾಗಿದೆ. ಅಲ್ಲಿ ಕೇಳಲು ಸಾಧ್ಯವಾಗದಿದ್ದರೆ ಬೆಂಗಳೂರಿಗೆ ಭೇಟಿ ನೀಡಿದಾಗ ಇಲ್ಲಿಯೇ ಸರ್ವ ಪಕ್ಷ ನಿಯೋಗ ಭೇಟಿ ಮಾಡಲು ಸಮಯ ನಿಗದಿ ಮಾಡುವಂತೆ ಕೇಳುತ್ತೇನೆ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸೋರಿಯಾಸಿಸ್ ಸಾಂಕ್ರಾಮಿಕವಲ್ಲ: ತಪ್ಪು ಕಲ್ಪನೆಗಳಿಂದ ದೂರವಿರಿ
ರಾಜ್ಯದಲ್ಲಿ ವೋಟರ್‌ ಐಡಿ ಹಗರಣ : ಅಶೋಕ್‌