ನ.28ಕ್ಕೆ ಉಡುಪಿಯ ಕೃಷ್ಣ ಮಠಕ್ಕೆ ಮೋದಿ

Published : Oct 30, 2025, 05:36 AM IST
PM Narendra Modi

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ನ.28ರಂದು ಶ್ರೀಕೃಷ್ಣ ಕ್ಷೇತ್ರ ಉಡುಪಿಗೆ ಭೇಟಿ ನೀಡಲಿದ್ದಾರೆ. ಅಂದು ಅವರು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಪರ್ಯಾಯೋತ್ಸವದ ಆರಂಭದಲ್ಲಿ ಸಂಕಲ್ಪಿಸಿದ್ದ ಕೋಟಿ ಗೀತಾ ಲೇಖನ ಯಜ್ಞ ಮಂಗಲೋತ್ಸವ ಹಾಗೂ ಬೃಹತ್ ಗೀತೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

  ಉಡುಪಿ :  ಪ್ರಧಾನಿ ನರೇಂದ್ರ ಮೋದಿ ನ.28ರಂದು ಶ್ರೀಕೃಷ್ಣ ಕ್ಷೇತ್ರ ಉಡುಪಿಗೆ ಭೇಟಿ ನೀಡಲಿದ್ದಾರೆ. ಅಂದು ಅವರು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಪರ್ಯಾಯೋತ್ಸವದ ಆರಂಭದಲ್ಲಿ ಸಂಕಲ್ಪಿಸಿದ್ದ ಕೋಟಿ ಗೀತಾ ಲೇಖನ ಯಜ್ಞ ಮಂಗಲೋತ್ಸವ ಹಾಗೂ ಬೃಹತ್ ಗೀತೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ರೀಕೃಷ್ಣನ ದರ್ಶನವನನ್ನೂ ಮಾಡಲಿದ್ದಾರೆ.

ಕೋಟಿ ಗೀತಾ ಯಜ್ಞ ಮಹಾಕಾರ್ಯಪ್ರಶಂಸಿರುವ ಪ್ರಧಾನಿ

ತಮ್ಮ ಈ ಕೋಟಿ ಗೀತಾ ಯಜ್ಞ ಮಹಾಕಾರ್ಯವನ್ನು ಪತ್ರ ಬರೆದು ಪ್ರಶಂಸಿರುವ ಪ್ರಧಾನಿ ಮೋದಿ ಅವರನ್ನು ಶ್ರೀಗಳು ಕೃಷ್ಣಮಠಕ್ಕೆ ಆಹ್ವಾನಿಸಿದ್ದರು. ಅದರಂತೆ ಈಗ ಗೀತೋತ್ಸವದಲ್ಲಿ ಭಾಗವಹಿಸಲು ಮೋದಿ ಅವರು ಒಪ್ಪಿದ್ದು, ನ.28ರಂದು ಅವರು ಮಧ್ಯಾಹ್ನ 12ರಿಂದ 2 ಗಂಟೆಯ ನಡುವೆ ಆಗಮಿಸಿ ಗೀತೋತ್ಸವದಲ್ಲಿ ಭಾಗವಹಿಸಲಿದ್ದಾರೆ.

ಉಡುಪಿ ಕೃಷ್ಣಮಠಕ್ಕೆ ಮೋದಿ ಅವರ ಇದು 2ನೇ ಭೇಟಿ

ಉಡುಪಿ ಕೃಷ್ಣಮಠಕ್ಕೆ ಮೋದಿ ಅವರ ಇದು 2ನೇ ಭೇಟಿಯಾಗಿದೆ. 2009ರಲ್ಲಿ ಇದೇ ಪುತ್ತಿಗೆ ಶ್ರೀಪಾದರ ತೃತೀಯ ಪರ್ಯಾಯೋತ್ಸವದಲ್ಲಿ ಮೋದಿ ಅವರು ಕೃಷ್ಣಮಠಕ್ಕೆ ಭೇಟಿ ನೀಡಿದ್ದರು. ಆಗ ಅವರು ಗುಜರಾತಿನ ಮುಖ್ಯಮಂತ್ರಿ ಆಗಿದ್ದರು.

 

PREV
Read more Articles on

Recommended Stories

ಮೋದಿ ಸಾಮ್ರಾಟನಲ್ಲ, ಎಲ್ಲ ರಾಜ್ಯಗಳಲ್ಲಿ ಗೆದ್ದಿಲ್ಲ: ಎಐಸಿಸಿ ಅಧ್ಯಕ್ಷ ಖರ್ಗೆ
ಆರೆಸ್ಸೆಸ್‌ ನಿಷೇಧಕ್ಕೆ ಈಗ ಸೀನಿಯರ್‌ ಖರ್ಗೆ ಆಗ್ರಹ