ಅಂಬೇಡ್ಕರ್‌ರ ಪಿಒಪಿ ಪುತ್ಥಳಿ ಇಟ್ಟು ಅಪಮಾನ : ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

KannadaprabhaNewsNetwork |  
Published : Jan 03, 2025, 12:30 AM ISTUpdated : Jan 03, 2025, 04:27 AM IST
ಅಂಬೇಡ್ಕರ್  | Kannada Prabha

ಸಾರಾಂಶ

  ಅಂಬೇಡ್ಕರ್‌ರ ಪಿಒಪಿ ಪುತ್ಥಳಿ ಇಟ್ಟು ಅಪಮಾನ ಮಾಡಿ ಅಶಾಂತಿ ವಾತಾವರಣವನ್ನುಂಟು ಮಾಡುತ್ತಿರುವವರನ್ನೂ ಕೂಡಲೇ ಬಂಧಿಸಿ, ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಕಾಂಗ್ರೆಸ್‌ ಕಾರ್ಯಕರ್ತರು, ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸುದರ್ಶನ್ ಯಾದವ್‌ಗೆ ಮನವಿ ಸಲ್ಲಿಸಿದರು.

 ಚಿಂತಾಮಣಿ : ನಗರದಲ್ಲಿ ರಾತ್ರೋ ರಾತ್ರಿ ಅಂಬೇಡ್ಕರ್‌ರ ಪಿಒಪಿ ಪುತ್ಥಳಿ ಇಟ್ಟು ಅಪಮಾನ ಮಾಡಿ ಅಶಾಂತಿ ವಾತಾವರಣವನ್ನುಂಟು ಮಾಡುತ್ತಿರುವವರನ್ನೂ ಕೂಡಲೇ ಬಂಧಿಸಿ, ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಕಾಂಗ್ರೆಸ್‌ ಕಾರ್ಯಕರ್ತರು, ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸುದರ್ಶನ್ ಯಾದವ್‌ಗೆ ಮನವಿ ಸಲ್ಲಿಸಿದರು.

ನಗರದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆವರಣದಲ್ಲಿ ಪುತ್ಥಳಿಯನ್ನು ಇಟ್ಟು, ಅಂಬೇಡ್ಕರ್ ರವರಿಗೆ ಅಪಮಾನ ಮಾಡಿರುವುದಲ್ಲದೇ ನಗರದಲ್ಲಿ ಅಶಾಂತಿ ವಾತಾವರಣವನ್ನು ಸೃಷ್ಟಿ ಮಾಡಿ ಅನ್ಯೋನ್ಯವಾಗಿ ಬಾಳುತ್ತಿರುವ ದಲಿತರ ಮಧ್ಯೆ ಬೆಂಕಿ ಹಚ್ಚುತ್ತಿರುವವರನ್ನು ಕೂಡಲೇ ಬಂಧಿಸಿ ಶಿಕ್ಷೆಗೊಳಪಡಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಹಲವು ದಲಿತ ಪರ ಸಂಘಟನೆಗಳ ಮುಖಂಡರು ನಗರದ ಅಂಬೇಡ್ಕರ್ ಭವನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಶನಿವಾರದಿಂದ ತಾಲೂಕು ಕಚೇರಿ ಬಳಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳುವುದಾಗಿ ತಹಸಿಲ್ದಾರ್ ಸುದರ್ಶನ್ ಯಾದವ್‌ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.

11ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

ಒಂದು ಕಡೆ ಕಾಂಗ್ರೆಸ್‌ ಹಾಗೂ ಹಲವು ದಲಿತ ಮುಖಂಡರು ಅಂಬೇಡ್ಕರ್ ಪುತ್ಥಳಿ ಇಟ್ಟು ಅಶಾಂತಿ ವಾತಾವರವನ್ನುಂಟು ಮಾಡುತ್ತಿರುವವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರೆ, ಮತ್ತೊಂದು ಕಡೆ ಅಂಬೇಡ್ಕರ್ ಪುತ್ಥಳಿಗೆ ಸುತ್ತಿರುವ ಕೊಳಕು ಬಟ್ಟೆಯನ್ನು ತೆರುವುಗೊಳಿಸಬೇಕೆಂದು ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆ 11ನೇ ದಿನಕ್ಕೆ ಕಾಲಿಟ್ಟದೆ. ಇದರಿಂದಾಗಿ ತಾಲೂಕು ಕಚೇರಿ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸಿ ಹಾಗೂ ಡಿವೈಎಸ್ಪಿ ಮುರಳಿಧರ್ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಫೋಟೋ......ಚಿಂತಾಮಣಿಯಲ್ಲಿ ಅಂಬೇಡ್ಕರ್‌ರವರ ಪಿಒಪಿ ಪುತ್ಥಳಿ ವಿರುದ್ಧ ಪ್ರತಿಭಟನೆ. ಫೋಟೋ.......ಅಂಬೇಡ್ಕರ್‌ ಪುತ್ಥಳಿಗೆ ಸುತ್ತಿರುವ ಬಟ್ಟೆ ತೆಗೆಯುವಂತೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಠಾವಧಿ ಪ್ರತಿಭಟನೆ.

PREV

Recommended Stories

ಡಿಕೆಶಿ ಅವರು ಬಿಜೆಪಿಗೆ ಹೋಗುತ್ತಾರೆ ಎಂಬ ಸಂಶಯ ಸರಿಯಲ್ಲ : ಸತೀಶ್‌
ಆರ್‌ಎಸ್‌ಎಸ್ ಗೀತೆ ಹಾಡಿದ ಕೈ ಶಾಸಕ ಡಾ। ರಂಗನಾಥ್‌