ನವದೆಹಲಿ: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ರಘುಬರ್ ದಾಸ್ ಹಾಗೂ ತೆಲಂಗಾಣ ಬಿಜೆಪಿ ನಾಯಕ ಇಂದ್ರ ಸೇನಾ ರೆಡ್ಡಿ ನಲ್ಲು ಅವರನ್ನು ಕ್ರಮವಾಗಿ ಒಡಿಶಾ ಹಾಗೂ ತ್ರಿಪುರಾ ರಾಜ್ಯಗಳಿಗೆ ರಾಜ್ಯಪಾಲರನ್ನಾಗಿ ನೇಮಿಸಿ ರಾಷ್ಟ್ರಪತಿಗಳು ಆದೇಶಿಸಿದ್ದಾರೆ. ದಾಸ್ ಸದ್ಯ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದು 2014-19ರ ಅವಧಿಗೆ ಜಾರ್ಖಂಡ್ ಸಿಎಂ ಆಗಿದ್ದರು. ಮತ್ತೊಂದೆಡೆ ಚುನಾವಣೆಗೆ ಸಜ್ಜಾಗಿರುವ ತೆಲಂಗಾಣದ ಇಂದ್ರ ಸೇನಾಗೆ ಮಹತ್ವದ ಹುದ್ದೆ ನೀಡಲಾಗಿದೆ.