ವಿಪಕ್ಷ ನಾಯಕ ಸ್ಥಾನಕ್ಕೇ ರಾಗಾ ಅಪಮಾನ: ಕೇಂದ್ರ

KannadaprabhaNewsNetwork |  
Published : Jul 02, 2024, 01:40 AM ISTUpdated : Jul 02, 2024, 04:16 AM IST
ಅಶ್ವಿನಿ ವೈಷ್ಣವ್‌ | Kannada Prabha

ಸಾರಾಂಶ

‘ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಹಿಂದೂಗಳ ವಿರುದ್ಧ ಹೇಳಿಕೆ ನೀಡಿದ್ದಾರೆ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಸದನದಲ್ಲೇ ಸುಳ್ಳು ಹೇಳಿದ್ದಾರೆ. ಈ ಬೇಜವಾಬ್ದಾರಿ ಭಾಷಣದ ಮೂಲಕ ತಮ್ಮ ಜವಾಬ್ದಾರಿಯುತ ಸ್ಥಾನವನ್ನು ಅವಮಾನಿಸಿದ್ದಾರೆ’  - ಶ್ವಿನಿ ವೈಷ್ಣವ್ ಹಾಗೂ ಕಿರಣ್ ರಿಜಿಜು

ನವದೆಹಲಿ: ‘ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಹಿಂದೂಗಳ ವಿರುದ್ಧ ಹೇಳಿಕೆ ನೀಡಿದ್ದಾರೆ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಸದನದಲ್ಲೇ ಸುಳ್ಳು ಹೇಳಿದ್ದಾರೆ. ಈ ಬೇಜವಾಬ್ದಾರಿ ಭಾಷಣದ ಮೂಲಕ ತಮ್ಮ ಜವಾಬ್ದಾರಿಯುತ ಸ್ಥಾನವನ್ನು ಅವಮಾನಿಸಿದ್ದಾರೆ’ ಎಂದು ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ಕಿರಣ್ ರಿಜಿಜು ಆರೋಪಿಸಿದ್ದಾರೆ.

ರಾಹುಲ್‌ ಅವರ ಕೆಲ ಹೇಳಿಕೆಗಳನ್ನು ಪ್ರಶ್ನಿಸಿ ಕ್ರಮ ಕೈಗೊಳ್ಳುವಂತೆ ಬಿಜೆಪಿಯು ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈಷ್ಣವ್‌, ‘ಅಗ್ನಿಪಥ್ (ಅಗ್ನಿವೀರ) ಯೋಜನೆ ಕುರಿತ ಹೇಳಿಕೆ ಹಾಗೂ ಅಯೋಧ್ಯೆಯ ಜನರಿಗೆ ಪರಿಹಾರ ನೀಡಿಲ್ಲ ಎಂಬ ಹೇಳಿಕೆಗಳಿಗೆ ರಾಹುಲ್ ಕ್ಷಮೆ ಯಾಚಿಸಬೇಕು. ಅಯೋಧ್ಯೆಯ ಸ್ಥಳೀಯ ವ್ಯಾಪಾರಿಗಳಿಗೆ 1,253 ಕೋಟಿ ರು. ಪರಿಹಾರ ನೀಡಿ ಸ್ಥಳಾಂತರಕ್ಕೆ ಸಹಾಯ ಮಾಡಲಾಗಿದೆ’ ಎಂದರು.

‘ಅಲ್ಲದೆ, ಅಗ್ನಿವೀರ ಹಾಗೂ ರೈತರ ಕುರಿತ ಸರ್ಕಾರದ ನೀತಿಯ ಬಗ್ಗೆಯೂ ರಾಹುಲ್‌ ಸುಳ್ಳು ಆರೋಪ ಮಾಡಿದ್ದಾರೆ. ಅಗ್ನಿವೀರರಿಗೆ ನಿವೃತ್ತಿ ವೇಳೆ ನಿಧಿ ನೀಡಲಾಗುತ್ತದೆ ಹಾಗೂ ರೈತರ ಬೆಳೆಗೆ ಬೆಂಬಲ ಬೆಲೆಯನ್ನು ಸರ್ಕಾರ ನೀಡುತ್ತಿದೆ’ ಎಂದು ಅವರು ಕಿಡಿಕಾರಿದರು.‘ಈ ರೀತಿ ಸುಳ್ಳು ಆರೋಪಗಳನ್ನು ಮಾಡಿ ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಸುಷ್ಮಾ ಸ್ವರಾಜ್‌ರಂಥ ಮೇರು ವ್ಯಕ್ತಿಗಳು ಅಲಂಕರಿಸಿದ್ದ ಲೋಕಸಭೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ರಾಹುಲ್‌ ಅವಮಾನ ಮಾಡುತ್ತಿದ್ದಾರೆ’ ಎಂದು ವೈಷ್ಣವ್‌ ದೂರಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

''ದ್ವೇಷ ಭಾಷಣ ಕಾಯ್ದೆ : ಜಾತಿ ನಿಂದನೆಯ ರೀತಿ ದುರ್ಬಳಕೆ ಆಗಬಹುದು''
ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!