ರಾಜಣ್ಣ ಪುತ್ರನ ಹತ್ಯೆ ಸುಪಾರಿ ಆಡಿಯೋ ಬಹಿರಂಗ: ಸಂಚಲನ! - 18 ನಿಮಿಷದ ಆಡಿಯೋದಲ್ಲಿದೆ ಹತ್ಯೆ ಸಂಚಿನ ವಿವರ

ಸಾರಾಂಶ

  ರಾಜೇಂದ್ರ ಅವರ ಹತ್ಯೆ ಸುಪಾರಿ ಪ್ರಕರಣದ ತನಿಖೆ ಚುರುಕುಗೊಂಡಿದೆ. ರಾಜೇಂದ್ರ ಹತ್ಯೆಗೆ ರೌಡಿ ಶೀಟರ್‌ ಸೋಮು ಎಂಬಾತ ಸಂಚು ನಡೆಸಿದ್ದ ಬಗ್ಗೆ ಪ್ರಕರಣದ ಇತರ ಆರೋಪಿಗಳಾದ ರಾಕಿ ಹಾಗೂ ಪುಷ್ಪಾ ಎಂಬುವರು ಮಾತುಕತೆ ನಡೆಸಿದ್ದ 18 ನಿಮಿಷದ ಸ್ಫೋಟಕ ಆಡಿಯೋ ಬಹಿರಂಗವಾಗಿದೆ.

 ತುಮಕೂರು : ಸಚಿವ ಕೆ.ಎನ್‌. ರಾಜಣ್ಣ ಅವರ ಪುತ್ರನಾದ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರ ಹತ್ಯೆ ಸುಪಾರಿ ಪ್ರಕರಣದ ತನಿಖೆ ಚುರುಕುಗೊಂಡಿದೆ. ರಾಜೇಂದ್ರ ಹತ್ಯೆಗೆ ರೌಡಿ ಶೀಟರ್‌ ಸೋಮು ಎಂಬಾತ ಸಂಚು ನಡೆಸಿದ್ದ ಬಗ್ಗೆ ಪ್ರಕರಣದ ಇತರ ಆರೋಪಿಗಳಾದ ರಾಕಿ ಹಾಗೂ ಪುಷ್ಪಾ ಎಂಬುವರು ಮಾತುಕತೆ ನಡೆಸಿದ್ದ 18 ನಿಮಿಷದ ಸ್ಫೋಟಕ ಆಡಿಯೋ ಬಹಿರಂಗವಾಗಿದೆ.

 ಇದರ ಬೆನ್ನಲ್ಲೇ ಪ್ರಕರಣದ ಆರೋಪಿ ನಂ.1 ಸೋಮು, ಪುಷ್ಪಾ ಸೇರಿ 4 ಮಂದಿಯನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ. ದೂರು ಕೊಟ್ಟ ನಂತರ ಪರಾರಿಯಾಗಿ ಫೋನ್ ಸ್ವಿಚ್‌ ಆಫ್‌ ಮಾಡಿಕೊಂಡಿದ್ದ ರೌಡಿ ಶೀಟರ್‌ ಸೋಮುನನ್ನು ನೆಲಮಂಗಲ ಬಳಿ ವಶಕ್ಕೆ ಪಡೆದಿರುವ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಜತೆಗೆ ಪುಷ್ಪಾಳನ್ನೂ ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡುತ್ತಿದ್ದಾರೆ.

ತುಮಕೂರಿನ ಉಪ್ಪಾರಹಳ್ಳಿಯಲ್ಲಿ ಹೋಟೆಲ್ ನಡೆಸುತ್ತಿದ್ದ ಪುಷ್ಪಾ ಮತ್ತು ಮತ್ತು ರಾಕಿ ಎಂಬುವರ ಮಧ್ಯೆ ಡಿಸೆಂಬರ್ ತಿಂಗಳಿನಲ್ಲಿ ಶಾಸಕ ರಾಜೇಂದ್ರ ಹತ್ಯೆ ಸುಪಾರಿ ಕುರಿತಂತೆ ಸಂಭಾಷಣೆ ನಡೆದಿತ್ತು. ರಾಜೇಂದ್ರ ಹತ್ಯೆಗೆ ತುಮಕೂರು ಬಳಿಯ ಜೈಪುರದ ಸೋಮು ಎಂಬಾತ ಸುಪಾರಿ ಪಡೆದಿದ್ದ ಎನ್ನಲಾಗಿದೆ. ಆಡಿಯೋ ಸಂಭಾಷಣೆಯಲ್ಲಿ, ಸೋಮುನ ಆಪ್ತೆಯಾಗಿರುವ ಪುಷ್ಪಾ, ಸೋಮುನ ಪ್ಲಾನ್ ಅನ್ನು ರಾಜೇಂದ್ರ ಅವರ ಬೆಂಬಲಿಗ ರಾಕಿಗೆ ಫೋನ್‌ನಲ್ಲಿ ತಿಳಿಸಿದ್ದಳು. ಅದನ್ನು ರೆಕಾರ್ಡ್‌ ಮಾಡಿಕೊಂಡಿದ್ದ ರಾಕಿ, ಈ ಸಂಭಾಷಣೆ ಆಡಿಯೋವನ್ನು ರಾಜೇಂದ್ರಗೆ ನೀಡಿದ್ದ. ಇದೇ ಆಡಿಯೋದ ಪೆನ್‌ಡ್ರೈವ್ನು ದೂರಿನ ವೇಳೆ ಪೊಲೀಸರಿಗೆ ರಾಜೇಂದ್ರ ನೀಡಿದ್ದರು. ಆಡಿಯೋದಲ್ಲಿ ಏನಿದೆ?:

ಎಂಎಲ್ಸಿ ರಾಜೇಂದ್ರ ಬೆಂಬಲಿಗ ರಾಕಿ ಹಾಗೂ ಪುಷ್ಪಾ ನಡುವಿನ 18 ನಿಮಿಷದ ಆಡಿಯೋ ಸಂಭಾಷಣೆ ಬಹಿರಂಗ ಗೊಂಡಿದೆ. ಅದರಲ್ಲಿ ಪುಷ್ಪಾ ಎಂಬಾಕೆ ಮಾತನಾಡಿ, ‘ರಾಜೇಂದ್ರ ಅವರ ಕೊಲೆ ಸುಪಾರಿಗೆ ಸೋಮು ಎಂಬಾತನಿಗೆ 5 ಲಕ್ಷ ರು. ಹಣ ಬಂದಿದ್ದು ನಿಜ. ಬೇಕಾದರೆ ಸೋಮನನ್ನು ಪೊಲೀಸರು ವಿಚಾರಿಸಿದರೆ ಎಲ್ಲಾ ಹೊರಬರುತ್ತದೆ. ಈ ವಿಚಾರವನ್ನು ಬೇಕಾದರೆ ರಾಜೇಂದ್ರಗೆ ನಾನು ಹೇಳುತ್ತೇನೆ. ಅವರ ಬಳಿ ನನ್ನ ಕರೆದುಕೊಂಡು ಹೋಗು’ ಎಂದು ರಾಕಿ ಜತೆ ಫೋನಿನಲ್ಲಿ ಮಾತನಾಡಿದ ವೇಳೆ ತಿಳಿಸಿದ್ದಾಳೆ. ‘ಕಳೆದ ನವೆಂಬರ್ ತಿಂಗಳಿನಲ್ಲಿ ರಾಜೇಂದ್ರ ಅವರ ಪುತ್ರಿಯ ಹುಟ್ಟು ಹಬ್ಬ ಸಮಾರಂಭದಲ್ಲಿ ಜೈಪುರದ ಇಬ್ಬರು ಹುಡುಗರು ಬಂದಿದ್ದರು. ಆ ಇಬ್ಬರು ಹುಡುಗರನ್ನು ಕಳುಹಿಸಿದ್ದು ಕೂಡ ಸೋಮು’ ಎಂದು ಪುಷ್ಪಾ ಹೇಳಿದ್ದಾಳೆ.

‘ಇದಲ್ಲದೆ ಜೈಪುರದ ಇನ್ನೊಬ್ಬ ರೌಡಿ ಶೀಟರ್ ನನ್ನು ಕೊಲ್ಲುವುದಾಗಿ ಸೋಮು ಹೇಳಿದ್ದಾನೆ. ಇದಕ್ಕಾಗಿಯೇ ಬೆಂಗಳೂರಿನ ಕಲಾಸಿಪಾಳ್ಯದಲ್ಲಿರುವ ಇಬ್ಬರು ತಮಿಳು ಹುಡುಗರನ್ನು ಕೂಡ ಕರೆಸಿಕೊಂಡಿದ್ದಾನೆ’ ಎಂದು ಆಡಿಯೋ ಸಂಭಾಷಣೆಯಲ್ಲಿದೆ. ‘ಸೋಮುಗೆ ₹5 ಲಕ್ಷ ದುಡ್ಡು ಬಂದಿರುವುದು ದೇವರ ಸಾಕ್ಷಿಯಾಗಿಯೂ ನಿಜ. ಮನು ಎಂಬಾತನ ಅಕೌಂಟ್ ಗೆ ಫೋನ್ ಪೇ ಮೂಲಕ ಹಣ ಹಾಕಲಾಗಿದೆ’ ಎಂದು ಪುಷ್ಪಾ ತಿಳಿಸಿದ್ದಾಳೆ.

ಆಡಿಯೋದಲ್ಲೇನಿದೆ? - ರಾಜೇಂದ್ರ ಆಪ್ತ ರಾಕಿ ಹಾಗೂ ರೌಡಿ ಶೀಟರ್ ಆಪ್ತೆ ಪುಷ್ಪಾ ನಡುವಿನ ಫೋನ್‌ ಸಂಭಾಷಣೆ ಇದು

- ರೌಡಿ ಶೀಟರ್‌ ಸೋಮು 5 ಲಕ್ಷ ರು.ಗೆ ರಾಜೇಂದ್ರ ಹತ್ಯೆಗೆ ಸುಪಾರಿ ಪಡೆದಿದ್ದ ಎನ್ನುವ ಪುಷ್ಪಾ - ಈ ಹಣವನ್ನು ಮನು ಎಂಬಾತನ ಅಕೌಂಟ್ ಗೆ ಫೋನ್ ಪೇ ಮೂಲಕ ಜಮೆ ಆಗಿತ್ತಂತೆ

- ರಾಜೇಂದ್ರ ಹತ್ಯೆಗೆ ಅವರ ಮಗಳ ಹುಟ್ಟುಹಬ್ಬಕ್ಕೆ ಸೋಮು 2 ಹುಡುಗರ ಕಳಿಸಿದ್ದ ಎನ್ನುವ ಪುಷ್ಪಾ - ಈ ಫೋನ್‌ ಸಂಭಾಷಣೆಯನ್ನು ರೆಕಾರ್ಡ್‌ ಮಾಡಿಕೊಂಡು ರಾಜೇಂದ್ರಗೆ ಕಳಿಸಿದ್ದ ರಾಕಿ

Share this article