;Resize=(412,232))
ಪಟನಾ: ಬಿಹಾರದ ಸರಣ್ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಸ್ಪರ್ಧೆ ಮಾಡುತ್ತಿದ್ದಾರೆ.
ವಿಚಿತ್ರವೆಂದರೆ ಅವರ ಪ್ರತಿಸ್ಪರ್ಧಿಯಾಗಿ ಆರ್‌ಜೆಪಿ ಪಕ್ಷದಿಂದ ಕಣಕ್ಕೆ ಇಳಿದಿರುವ ಅಭ್ಯರ್ಥಿ ಹೆಸರು ಕೂಡಾ ಲಾಲು ಪ್ರಸಾದ್ ಯಾದವ್. ಇದು ಮತದಾರರಿಗೆ ಮತ ಹಾಕುವ ವೇಳೆ ಗೊಂದಲ ಮೂಡಿಸುವ ಸಾಧ್ಯತೆಯೂ ಇಲ್ಲದಿಲ್ಲ. ಮೂಲತಃ ರೈತನಾಗಿರುವ ರೈತ ಲಾಲು, ಈ ಹಿಂದೆ 2017, 2022ರಲ್ಲಿನ ರಾಷ್ಟ್ರಪತಿ ಚುನಾವಣೆಗೂ ನಾಮಪತ್ರ ಸಲ್ಲಿಸಿದ್ದರು.
ಆದರೆ ನಾಮಪತ್ರ ಅಂಗೀಕಾರ ಆಗಿರಲಿಲ್ಲ.