2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್

Published : Nov 03, 2025, 11:53 AM IST
Siddaramaiah Zameer Ahmed Khan

ಸಾರಾಂಶ

ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. 2028ರ ವರೆಗೂ ಸಿದ್ದರಾಮಯ್ಯ ಅವರೇ ಸಿಎಂ. ಪಕ್ಷಕ್ಕಾಗಿ ದುಡಿದಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಸಹ ಮುಂದಿನ ದಿನದಲ್ಲಿ ಸಿಎಂ ಆಗಲಿ ಎನ್ನುವ ಆಸೆ ನನ್ನದು ಎಂದು ಸಚಿವ ಜಮೀರ್‌ ಅಹ್ಮದ್ ಹೇಳಿದರು.

 ಕೊಪ್ಪಳ : ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. 2028ರ ವರೆಗೂ ಸಿದ್ದರಾಮಯ್ಯ ಅವರೇ ಸಿಎಂ. ಪಕ್ಷಕ್ಕಾಗಿ ದುಡಿದಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಸಹ ಮುಂದಿನ ದಿನದಲ್ಲಿ ಸಿಎಂ ಆಗಲಿ ಎನ್ನುವ ಆಸೆ ನನ್ನದು ಎಂದು ಸಚಿವ ಜಮೀರ್‌ ಅಹ್ಮದ್ ಹೇಳಿದರು.

ವೈಯಕ್ತಿಕ ಕಾರಣಕ್ಕೆ ದೆಹಲಿಗೆ ಹೋಗುತ್ತಾರೆ

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸತೀಶ್‌ ಜಾರಕಿಹೊಳಿ ಆಗಾಗ ದೆಹಲಿಗೆ ಹೋಗುತ್ತಾರೆ. ಅವರು ಇಲಾಖೆ ಹಾಗೂ ವೈಯಕ್ತಿಕ ಕಾರಣಕ್ಕೆ ದೆಹಲಿಗೆ ಹೋಗುತ್ತಾರೆ. ದಲಿತ ಸಿಎಂ ಕೂಗಿನ ಮಧ್ಯೆ ಜಾರಕಿಹೊಳಿ ದೆಹಲಿ ಭೇಟಿ ಎನ್ನುವುದು ವದಂತಿ ಮಾತ್ರ. ಈಗ ಸಿಎಂ ಹುದ್ದೆ ಖಾಲಿ ಇಲ್ಲ. ನಮ್ಮದು ಹೈಕಮಾಂಡ್‌ ತೀರ್ಮಾನದ ಪಕ್ಷ. ಇದೇ ತಿಂಗಳು ಡಿ.ಕೆ.ಶಿವಕುಮಾರ್ ಸಿಎಂ ಅನ್ನೋದು ಬಿಜೆಪಿಯವರ ಅಭಿಪ್ರಾಯವಷ್ಟೇ. ಸಿಎಂ ಖುರ್ಚಿ ಖಾಲಿ ಇಲ್ಲ, ಹಾಗೇ ಕೆಪಿಸಿಸಿ ಅಧ್ಯಕ್ಷರ ಹುದ್ದೆಯೂ ಖಾಲಿ ಇಲ್ಲ ಎಂದರು.

ಹೈಕಮಾಂಡ್‌ ನಿರ್ಧಾರವೇ ಅಂತಿಮ

ಮುಂದಿನ ಚುನಾವಣೆಗೂ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಹೋಗುತ್ತೇವೆ ಎಂಬ ಡಿ.ಕೆ.ಸುರೇಶ್‌ ಹೇಳಿಕೆಗೆ, ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎಂಬುದರ ಬಗ್ಗೆ ಗೊತ್ತಿಲ್ಲ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್‌ ನಿರ್ಧಾರವೇ ಅಂತಿಮ ಎಂದರು. ನನಗೆ ಸಿಎಂ ಆಗುವ ಆಸೆ ಇಲ್ಲ. ಸಚಿವ ಸ್ಥಾನ ಬೇಡ, ಪಕ್ಷದ ಕೆಲಸ ಮಾಡಿ ಎಂದು ಹೈಕಮಾಂಡ್‌ ಹೇಳಿದರೆ ಅದಕ್ಕೂ ಒಪ್ಪಿಕೊಳ್ಳುತ್ತೇನೆ ಎಂದರು.

 

PREV
Read more Articles on

Recommended Stories

ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ
ಆರ್‌ಎಸ್‌ಎಸ್‌ ಪಥಸಂಚಲನ : ಚಿತ್ತಾಪುರದ ಬಳಿಕ ಕೆಂಭಾವಿ ದಂಗಲ್‌