ಡಿಕೆಶಿ ಸರ್ಕಾರದ ವಿರುದ್ಧ ಸಿದ್ದು ಮೊದಲ ಅತೃಪ್ತಿ!

Published : Oct 24, 2026, 07:59 AM IST
siddaramaiah and dk shivakumar

ಸಾರಾಂಶ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರ್ಕಾರದ ವಿರುದ್ಧ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದು, ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಮೈಸೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರ್ಕಾರದ ವಿರುದ್ಧ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದು, ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಇದೇ ವೇಳೆ, ದಸರಾ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿರುವ ಕುರಿತು ಯತೀಂದ್ರ ಸಿದ್ದರಾಮಯ್ಯ ಕೂಡ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಒಂದೇ ದಿನ ತಂದೆ ಹಾಗೂ ಪುತ್ರ, ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಮಾತನಾಡಿರುವುದು ಕುತೂಹಲ ಮೂಡಿಸಿದೆ.

ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಶುಕ್ರವಾರ ಮಧ್ಯಾಹ್ನ ಸಿದ್ದರಾಮಯ್ಯ ಅವರು ತಮ್ಮ ಪುತ್ರ ಯತೀಂದ್ರ ಜೊತೆ ದಿಢೀರ್ ಭೇಟಿ ನೀಡಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ದಸರಾ ಉಸ್ತುವಾರಿಗೆ ಮೂವರು ಮೇಲುಸ್ತುವಾರಿ ಸಚಿವರನ್ನು ನೇಮಕ ಮಾಡಿರುವ ಕುರಿತು ಪ್ರತಿಕ್ರಿಯಿಸಿ, ದಸರಾ ಉಸ್ತುವಾರಿಗೆ ಒಂದು ದಿನಕ್ಕೆ ಮೂವರು ಮೇಲುಸ್ತುವಾರಿ ಸಚಿವರನ್ನು ನೇಮಿಸುವ ಅಗತ್ಯ ಇರಲಿಲ್ಲ. ಮೇಲುಸ್ತುವಾರಿ ವಹಿಸಿದ್ದ ಯಾರೊಬ್ಬರು ಕೂಡ ಬರಲಿಲ್ಲ. ಆದರೂ, ಸರ್ಕಾರ ಮೇಲುಸ್ತುವಾರಿಯನ್ನು ನೇಮಿಸಿತ್ತು. ಯಾಕೆ ನೇಮಿಸಿದರು ಎಂಬುದು ನನಗೆ ಗೊತ್ತಿಲ್ಲ. ಇದು ನನ್ನ ಸರ್ಕಾರ ಅಲ್ಲ. ಇದು ಬೇರೆ ಸರ್ಕಾರ. ಇವೆಲ್ಲಾ ಮುಖ್ಯಮಂತ್ರಿಗಳ ನಿರ್ಧಾರ, ನಾನೇನು ಮಾಡಲಿ ಎಂದು ಅಸಮಾಧಾನ ಹೊರಹಾಕಿದರು.

ಯತೀಂದ್ರ ಅಸಮಾಧಾನ:

ಇದೇ ವೇಳೆ, ಸಿದ್ದರಾಮಯ್ಯನವರ ಪುತ್ರ, ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಕೂಡ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ದಸರಾ ವೇಳೆ ಶಿಷ್ಟಾಚಾರ ಉಲ್ಲಂಘನೆ

ದಸರಾ ವೇಳೆ ಶಿಷ್ಟಾಚಾರ ಉಲ್ಲಂಘನೆಯಾಗಿರುವ ಕುರಿತು ಪ್ರತಿಕ್ರಿಯಿಸಿರುವ ಯತೀಂದ್ರ, ಶಿಷ್ಟಾಚಾರದಲ್ಲಿ ಸಿಎಂ ಪತ್ನಿ ಹಾಗೂ ಕೇರಳ ಮತ್ತು ತೆಲಂಗಾಣ ಸಿಎಂಗಳ ಹೆಸರು ಇರಲಿಲ್ಲ. ಆದರೂ, ಸಿಎಂ ಪತ್ನಿ ಪುಷ್ಪಾರ್ಚನೆ ಮಾಡಿದರು. ಅವರು ದೇವಿಗೆ ಪುಷ್ಪಾರ್ಚನೆ ಮಾಡಿದ್ದಾರೆ ಅಷ್ಟೇ, ಸರ್ಕಾರದ ಕೆಲಸವನ್ನೇನೂ ಮಾಡಿಲ್ಲ. ಹೀಗಾಗಿ, ಶಿಷ್ಟಾಚಾರ ಉಲ್ಲಂಘನೆಯಾದರೂ ತಪ್ಪೇನಿಲ್ಲ ಎಂದರು.

ಇನ್ನು, ದಸರಾ ನಂದಿಕಂಬ ಪೂಜೆ ವೇಳೆ ಸಚಿವರನ್ನು ತಡೆದ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ವಿಚಾರದಲ್ಲಿ ಪ್ರೋಟೋಕಾಲ್‌ ಉಲ್ಲಂಘನೆ ಆಗಿದೆ. ಶಿಷ್ಟಾಚಾರದ ಪ್ರಕಾರ ನಂದಿಕಂಬ ಪೂಜೆ ವೇಳೆ ಸಚಿವರನ್ನು ತಡೆಯಬಾರದಿತ್ತು. ಐಜಿಪಿ ದರ್ಜೆಯ ಅಧಿಕಾರಿ ಯಾಕೆ ಈ ರೀತಿ ಮಾಡಿದರು ಎಂಬುದು ಗೊತ್ತಿಲ್ಲ. ತನಿಖೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ನನ್ನ ಬ್ಲ್ಯಾಕ್‌ಮೇಲ್‌ ಮಾಡಲು ಸ್ಟಿಂಗ್‌ : ಸಿದ್ದು ನೇರ ಆರೋಪ-ಹಿಂದಿರೋರ್ಯಾರು ?
ನಮ್ಮ ಪಕ್ಷದವರೇ ಸ್ಟಿಂಗ್‌ ಹಿಂದೆ ಇದ್ದಾರೆ : ಯತೀಂದ್ರ