ಎಸ್‌ಐಆರ್‌: ಫಾರಂ 7 ಬಳಿಕ ಈಗ ಫಾರಂ 6 ವಿವಾದ

Published : Oct 19, 2026, 07:24 AM IST
SIR

ಸಾರಾಂಶ

ಮತಾದರರ ಪಟ್ಟಿ ಪರಿಷ್ಕರಣೆ ವೇಳೆ ಅಕ್ರಮವಾಗಿ ಮತದಾರರ ಹೆಸರು ರದ್ದತಿಗೆ ಫಾರಂ 7 ಬಳಸಲಾಗಿದೆ ಎಂಬ ವ್ಯಾಪಕ ದೂರಿನ ಬೆನ್ನಲ್ಲೇ ಇದೀಗ ಫಾರಂ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ. ವಿಶೇಷವೆಂದರೆ ಈ ಬಾರಿ ಫಾರಂ 6 ಬಗ್ಗೆ ಮಹಾರಾಷ್ಟ್ರ ಚುನಾವಣಾ ಆಯೋಗವೇ ಆಕ್ಷೇಪ ವ್ಯಕ್ತಪಡಿಸಿದೆ.

ಮುಂಬೈ: ಮತಾದರರ ಪಟ್ಟಿ ಪರಿಷ್ಕರಣೆ ವೇಳೆ ಅಕ್ರಮವಾಗಿ ಮತದಾರರ ಹೆಸರು ರದ್ದತಿಗೆ ಫಾರಂ 7 ಬಳಸಲಾಗಿದೆ ಎಂಬ ವ್ಯಾಪಕ ದೂರಿನ ಬೆನ್ನಲ್ಲೇ ಇದೀಗ ಫಾರಂ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ. ವಿಶೇಷವೆಂದರೆ ಈ ಬಾರಿ ಫಾರಂ 6 ಬಗ್ಗೆ ಮಹಾರಾಷ್ಟ್ರ ಚುನಾವಣಾ ಆಯೋಗವೇ ಆಕ್ಷೇಪ ವ್ಯಕ್ತಪಡಿಸಿದೆ. ‘ಡಿಲೀಟ್‌ ಆದ ಮತದಾರನಿಗೆ ಮರುಸೇರ್ಪಡೆ ವೇಳೆ ‘ಹೊಸ ಮತದಾರ’ ಎಂಬ ಪಟ್ಟ ನೀಡಬಾರದು. ಇದು ಸೇರಿದಂತೆ ಫಾರಂ-6ರಲ್ಲಿ 3 ಪ್ರಮುಖ ಬದಲಾವಣೆ ಮಾಡಬೇಕು’ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರಿಗೆ ಮಹಾರಾಷ್ಟ್ರ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪತ್ರ ಬರೆದಿದೆ.

ಇತ್ತೀಚೆಗೆ ಎಸ್ಐಆರ್ ಕುರಿತು ಇದೇ ಮಹಾರಾಷ್ಟ್ರ ಮುಖ್ಯ ಚುನಾವಣಾಧಿಕಾರಿ ಎಸ್‌. ಚೊಕ್ಕಲಿಂಗಂ ಹಲವು ಆಕ್ಷೇಪ ಎತ್ತಿದ್ದರು. ಅದರ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ.

ಸೇರ್ಪಡೆಯಾಗಬೇಕಿದ್ದರೆ ಫಾರಂ 6 ಸಲ್ಲಿಸಬೇಕು

‘ಹೊಸದಾಗಿ ಮತದಾರರ ಪಟ್ಟಿ ಸೇರ್ಪಡೆಯಾಗಬೇಕಿದ್ದರೆ ಫಾರಂ 6 ಸಲ್ಲಿಸಬೇಕು. ಆ ವೇಳೆ ತಮ್ಮನ್ನು ತಾವು ಮೊದಲ ಬಾರಿಯ ಮತದಾರ ಎಂದು ಘೋಷಿಸುವುದು ಅನಿವಾರ್ಯ. ಆದರೆ ಈಗ ಎಸ್ಐಆರ್‌ ವೇಳೆ ಹೆಸರು ಡಿಲೀಟ್‌ ಆದ ಮತದಾರರು ತಮ್ಮನ್ನು ತಾವು ಮೊದಲ ಬಾರಿಯ ಮತದಾರ ಎಂದು ಘೋಷಿಸಿಕೊಳ್ಳುವುದು ತಪ್ಪು ಮಾಹಿತಿ ನೀಡಿದಂತಾಗುತ್ತದೆ. ಈ ರೀತಿ ಮಾಡುವುದು ಜನಪ್ರತಿನಿಧಿಗಳ ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧ ಎಂಬುದು ಈ ಹಿಂದೆ ಮತದಾರರ ಪಟ್ಟಿಯಲ್ಲಿದ್ದವರ ವಾದ’ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ಹೇಳಿದೆ.

3 ತಿದ್ದುಪಡಿ ಪ್ರಸ್ತಾಪಿಸಿದೆ

ಹೀಗಾಗಿ ಅದು 3 ತಿದ್ದುಪಡಿ ಪ್ರಸ್ತಾಪಿಸಿದೆ. ಅದರಂತೆ ಫಾರ್ಮ್‌ 6ನಲ್ಲಿ ‘ಹೊಸ ಮತದಾರರು’ ಎಂಬ ತಲೆಬರಹ ತೆಗೆದುಹಾಕಬೇಕು. ಈ ಹಿಂದೆ ಅಸೆಂಬ್ಲಿ ಕ್ಷೇತ್ರದಲ್ಲಿ ನೋಂದಾಯಿತರಾಗಿದ್ದು, ಈಗ ಯಾವ ಮತದಾರರ ಪಟ್ಟಿಯಲ್ಲೂ ಹೆಸರಿಲ್ಲದವರು ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಬೇಕಿದ್ದರೆ ಪ್ರತ್ಯೇಕ ಘೋಷಣಾ ಪತ್ರ ಸಲ್ಲಿಸಬೇಕು. ಇದರ ಜತೆಗೆ ಹಿಂದಿನ ಮತದಾರರ ಗುರುತಿನ ಚೀಟಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಲಾಗಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ವಿಜಯದಶಮಿ ಬಳಿಕ ಹೋರಾಟ ತೀವ್ರ : ಎಚ್ಡಿಕೆ
ನಿಮ್ಮ ಪಾದಕ್ಕೆ ಬಿಳ್ತೀನಿ ಪಾದಯಾತ್ರೆ ನಿಲ್ಲಿಸಿ : ರೈತರಿಗೆ ಸ್ವತಃ ಡಿಕೆ ಮನವಿ