ಕೋಲಾರ : ಕಾಂಗ್ರೆಸ್ ರಾಜ್ಯ ಸರ್ಕಾರ ಸಮಾಜವನ್ನ ವಿಭಜನೆ ಮಾಡುವ ಉದ್ದೇಶ ಹೊಂದಿದೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ, ಕೊಲೆ, ಸುಲಿಗೆ, ಕ್ರಿಮಿನಿಲ್ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗಿದೆ ಎಂದು ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದರು.ನಗರದ ನಾರಾಯಣಿ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಬಿಜೆಪಿ-ಜೆಡಿಎಸ್ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಳ
ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ, ಪೊಲೀಸ್ ವರ್ಗಾವಣೆ ದಂಧೆಯಾಗಿದೆ ಇದರ ಬಗ್ಗೆ ಸಿಎಂ, ಗೃಹ ಸಚಿವರು ಮಾತನಾಡುತ್ತಿಲ್ಲ ಎಂದು ಟಾಂಗ್ ನೀಡಿದ ಅವರು, ಈ ಸಂಬಂಧ ನಾಳೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಮಾಡುತಿದ್ದೇವೆ ಎಂದು ಹೇಳಿದರು.ಬೆಂಗಳೂರಿನಲ್ಲಿ ಮಳೆ ಸೇರಿದಂತೆ ರಾಜ್ಯದಲ್ಲಾಗಿರುವ ಮಳೆ ಅನಾಹುತ ಸೇರಿ ಸರ್ಕಾರ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ, ರಾಜ್ಯದಲ್ಲಿ ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಪತನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರಲ್ಲಿರುವ ಒಳ ಜಗಳ, ಸಿಎಂ ಸ್ಥಾನ, ಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ಅವರ ಸರ್ಕಾರ ಪತನವಾಗಲಿದೆ. ನಾವು ಯಾವುದೆ ಆಪರೇಷನ್ ಮಾಡಲ್ಲ, ಅವರೆ ಹೇಳುತ್ತಿದ್ದಾರೆ ಸರ್ಕಾರ ಬೀಳಲಿದೆ ಎಂದರು.
ಡಾ.ಮಂಡುನಾಥ್ ಆಯ್ಕೆ ಖಚಿತ
ಈ ಸರ್ಕಾರಕ್ಕೆ ಕಿವಿ ಹಿಂಡುವ ಕೆಲಸ ಮಾಡುತ್ತಾ ಇರುವುದೆ ನಮ್ಮ ಆಪರೇಷನ್, ಬೆಂಗಳೂರು ಗ್ರಾಮಾಂತರದಲ್ಲಿ ನೂರಕ್ಕೆ ಸಾವಿರ ಪರ್ಸೆಂಟ್ ಸಂಸದರಾಗಿ ಡಾ.ಮಂಜುನಾಥ್ ಆಯ್ಕೆಯಾಗಲಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಎಲ್ಲರಿಗೂ ಸಿಬಿಎಸ್‌ಇ ಪಠ್ಯ ಬೇಕು ಎನ್ನುವುದಿದೆ ಬಡವರ ವಿರೋಧಿ, ಶಿಕ್ಷಣ ವಿರೋಧಿ ಮುಖ್ಯ ಮಂತ್ರಿಯಾಗಿದ್ದಾರೆ ಎಂದು ಶಿಕ್ಷಣದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ದ ಬೇಸರ ಹೊರ ಹಾಕಿದರು.
ಸಚಿವರು, ರಾಜಕಾರಣಿಗಳ ಶಾಲೆಗಳೆಲ್ಲಾ ಸಿಬಿಎಸ್‌ಇ ಶಾಲೆಗಳಿವೆ, ಅದಕ್ಕಾಗಿ ಎಲ್ಲರಿಗೂ ಉತ್ತಮ ಶಿಕ್ಷಣ ಸಿಗಬೇಕು ಅನ್ನೋದೆ ನಮ್ಮ ಉದ್ದೇಶ, ಇವರದ್ದು ಕೆಟ್ಟ ಆಡಳಿತ, ಡೊಂಗಿ ಸರ್ಕಾರ ತಲುಗಲಿ ಅನ್ನೋದೆ ನಮ್ಮ ಉದ್ದೇಶ, ಬಿಜೆಪಿ ಎಲ್ಲಾ ಜಾತಿ ಜನಾಂಗಕ್ಕೆ ಸೇರಿದೆ, ನಮ್ಮಲ್ಲಿ ಯಾವುದೇ ತಾರತಮ್ಯ ಇಲ್ಲ, ಈಶ್ವರಪ್ಪ ಅವರು ಸಹ ಮೋದಿ ಫೋಟೊ ಹಾಕಿಕೊಂಡೆ ಚುನಾವಣೆ ಮಾಡಿದ್ದಾರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ ಅಷ್ಟೆ ಎಂದು ಸ್ಪಷ್ಟನೆ ನೀಡಿದರು.ಮಹಾನ್ ನಾಯಕರನ್ನೆ ಕೇಳಿ
ಪೆನ್ ಡ್ರೈವ್ ಹಂಚಿರುವ ಮಹಾನ್ ನಾಯಕರನ್ನೆ ನೀವು ಕೇಳಿ ರಾಜ್ಯದಿಂದ ಹೊರ ಹೋಗಲು ಅನುವು ಮಾಡಿಕೊಟ್ಟಿದ್ದು ಯಾರು ಸಿಎಂ ಆಗಿ ಹೇಗೆ ನಡೆದುಕೊಳ್ಳಬೇಕು ಅನ್ನೋದೆ ಅವರಿಗೆ ಗೊತ್ತಿಲ್ಲ. ಅಮಾಯಕ ಹೆಣ್ಣು ಮಕ್ಕಳ ಮರ್ಯಾದೆಯನ್ನ ಬೀದಿಗೆ ತಂದಿದ್ದು ಈ ಸರ್ಕಾರ, ಕಾನೂನು ಪಾಲನೆ ಮಾಡುವಲ್ಲಿ ಇವರ ವಿಫಲರಾಗಿದ್ದಾರೆ, ಕಾನೂನು ಸುವ್ಯವಸ್ಥೆ ಹಾಳು ಮಾಡಿದ್ದು ಕಾಂಗ್ರೆಸ್, ಹಾಸನ ಜಿಲ್ಲಾಡಳಿತವನ್ನ ಬಳಸಿಕೊಂಡು ಹೀಗೆ ಮಾಡಲಾಗಿದೆ ಎಂದು ಹೇಳಿದರು.