ಸೋನಿಯಾ ರಹಸ್ಯಗಳು - ಆತ್ಮಕತೆ ‘ಬಿಲಾಂಗಿಂಗ್‌: ಎ ಜರ್ನಿ ಆಫ್‌ ಲವ್’

Published : Nov 12, 2026, 06:45 AM IST
Sonia Gandhi

ಸಾರಾಂಶ

ಮಂಗವಾರ ಬಿಡುಗಡೆಯಾದ ತಮ್ಮ ಆತ್ಮಕತೆ ‘ಬಿಲಾಂಗಿಂಗ್‌: ಎ ಜರ್ನಿ ಆಫ್‌ ಲವ್’ನಲ್ಲಿ ಸೋನಿಯಾ ಅವರು ತಮ್ಮ ಜೀವನದ ಅನೇಕ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಆರೋಗ್ಯ, ಕುಟುಂಬದ ವಿಚಾರಗಳನ್ನು ಇಲ್ಲಿ ತಿಳಿಸಿದ್ದಾರೆ.

ಮಂಗವಾರ ಬಿಡುಗಡೆಯಾದ ತಮ್ಮ ಆತ್ಮಕತೆ ‘ಬಿಲಾಂಗಿಂಗ್‌: ಎ ಜರ್ನಿ ಆಫ್‌ ಲವ್’ನಲ್ಲಿ ಸೋನಿಯಾ ಅವರು ತಮ್ಮ ಜೀವನದ ಅನೇಕ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಆರೋಗ್ಯ, ಕುಟುಂಬದ ವಿಚಾರಗಳನ್ನು ಇಲ್ಲಿ ತಿಳಿಸಿದ್ದಾರೆ.

2 ಸಲ ಕ್ಯಾನ್ಸರ್‌ ಗೆದ್ದೆ

ನನಗೆ ಎರಡು ಬಾರಿ ಕ್ಯಾನ್ಸರ್‌ ಬಂದಿತ್ತು. 2010ರಲ್ಲಿ ಸ್ತನ ಕ್ಯಾನ್ಸರ್‌, 2011ರಲ್ಲಿ ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ಗೆ ವಿದೇಶದಲ್ಲಿ ಸರ್ಜರಿ ಮಾಡಿಸಿಕೊಂಡೆ

ರಾಹುಲ್‌ಗೆ ಅಣ್ಣ ಇದ್ದ

1969ರಲ್ಲಿ ಗಂಡು ಮಗು ಹೆತ್ತಿದ್ದೆ. 2ನೇ ದಿನವೇ ತೀರಿಹೋಯಿತು. ಆಗೆಲ್ಲಾ ನವಜಾತ ಶಿಶುಗಳನ್ನು ನದಿಗೆ ಬಿಡುತ್ತಿದ್ದರು. ಅದಕ್ಕೆ ನಾನು ಒಪ್ಪಲಿಲ್ಲ. ಗಿಡದ ಬುಡದಲ್ಲಿ ಹೂಳಲಾಯಿತು.

ರಾಜೀವ್‌ ಸಾವಿನ ಬಗ್ಗೆ ತಿಳಿಸಿದ್ದು ಪ್ರಿಯಾಂಕಾ

1991ರ ಮೇ 21ರಂದು ರಾಜೀವ್‌ ಅವರ ಮಂಚ ಪಕ್ಕದಲ್ಲಿ ಕುಳಿತಿದ್ದೆ. ಸ್ನೇಹಿತೆಯ ಹುಟ್ಟುಹಬ್ಬಕ್ಕೆ ತೆರಳಲು ತಯಾರಾಗುತ್ತಿದ್ದ ಪ್ರಿಯಾಂಕಾ ಓಡಿ ಬಂದು ರಾಜೀವ್ ಸಾವಿನ ಸುದ್ದಿ ತಿಳಿಸಿದಳು. ಕುಸಿದು ಬಿದ್ದುಬಿಟ್ಟೆ.

ಪ್ರಧಾನಿಯಾಗ್ತೀರಾ ಅಂದ್ರೆ ಒಲ್ಲೆ ಎಂದಿದ್ದರು ಡಾ। ಸಿಂಗ್‌

ನಿಷ್ಕಳಂಕ, ಆಡಳಿತದ ಬಗ್ಗೆ ತಿಳುವಳಿಕೆ ಹೊಂದಿದ್ದಲ್ಲದೆ ಯಾವುದೇ ಬಣದಲ್ಲೂ ಇಲ್ಲದ ಮನಮೋಹನ ಸಿಂಗ್‌ ಅವರನ್ನು 2004ರಲ್ಲಿ ಪ್ರಧಾನಿ ಮಾಡಲು ನಿರ್ಧರಿಸಿದೆ. ಆ ಬಗ್ಗೆ ಅವರನ್ನು ಕೇಳಿದಾಗ ಹಿಂಜರಿದರು. ಬಳಿಕ ಮನವೊಲಿಸಲಾಗಿತ್ತು

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಅಂತೂ 428 ಮಂದಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ನಿಗಮ ಹುದ್ದೆ
ರಾಜ್ಯದ ಎಲ್ಲ ರೈತರಿಗೂ 5000 ರು. ಬರ ಪರಿಹಾರ