ಶ್ರೀರಾಮ ರಜೆ ಕೇಳಿಲ್ಲ ಎಂದ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ

KannadaprabhaNewsNetwork |  
Published : Jan 22, 2024, 02:17 AM ISTUpdated : Jan 22, 2024, 12:43 PM IST
N. Chaluvarayaswamy

ಸಾರಾಂಶ

ಶ್ರೀರಾಮ, ಈಶ್ವರ, ವೆಂಕಟೇಶ್ವರ ಇವರ್ಯಾರು ರಜೆ ಕೇಳಿಲ್ಲ. ಕಷ್ಟಪಟ್ಟು ದುಡಿಮೆ ಮಾಡಿ ಒಳ್ಳೆಯದಾಗುತ್ತೆ ಎಂದಿದ್ದಾರೆ. ಬಹುಶಃ ಅಶೋಕ್ ಅವರಿಗೆ ರಜೆ ಬೇಕಿತ್ತು ಅಂತ ಕಾಣಿಸುತ್ತೆ ಅದಕ್ಕಾಗಿ ಹೇಳಿದ್ದಾರೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಲೇವಡಿ ಮಾಡಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಶ್ರೀರಾಮ, ಈಶ್ವರ, ವೆಂಕಟೇಶ್ವರ ಇವರ್ಯಾರು ರಜೆ ಕೇಳಿಲ್ಲ. ಕಷ್ಟಪಟ್ಟು ದುಡಿಮೆ ಮಾಡಿ ಒಳ್ಳೆಯದಾಗುತ್ತೆ ಎಂದಿದ್ದಾರೆ. ಬಹುಶಃ ಅಶೋಕ್ ಅವರಿಗೆ ರಜೆ ಬೇಕಿತ್ತು ಅಂತ ಕಾಣಿಸುತ್ತೆ ಅದಕ್ಕಾಗಿ ಹೇಳಿದ್ದಾರೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಲೇವಡಿ ಮಾಡಿದರು.

ಶ್ರೀರಾಮ ಮಂದಿರ ಉದ್ಘಾಟನೆಗೆ ಕೇಂದ್ರ ಸರ್ಕಾರ ಅರ್ಧ ದಿನ ರಜಾ ಕೊಟ್ಟಿದೆ. ಪೂರ್ಣ ದಿನ ರಜಾ ಕೊಡಬಹುದಿತ್ತಲ್ಲವೇ. ಏಕೆ ಕೊಡಲಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ಶ್ರೀರಾಮ ಭಕ್ತರೆ, ರಜೆ ಕೊಟ್ಟರೆ ಮಾತ್ರ ರಾಮನ ಭಕ್ತರು ಇಲ್ಲದಿದ್ದರೆ ಇಲ್ಲ ಎನ್ನುವುದು ಸರಿಯಲ್ಲ. ರಜೆ ಕೊಡುವುದು ಬಿಡುವುದು ಮುಖ್ಯಮಂತ್ರಿಗಳ ತೀರ್ಮಾನ ಎಂದು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.

ಬಿಜೆಪಿ ನಾಯಕತ್ವವೇ ದುರ್ಬಲ: ಚಲುವರಾಯಸ್ವಾಮಿ

ರಾಜ್ಯದಲ್ಲಿ ಕಾಂಗ್ರೆಸ್ ನಾಯಕತ್ವ ಗಟ್ಟಿಯಾಗಿರುವುದಕ್ಕೆ ಅಧಿಕಾರಕ್ಕೆ ಬಂದಿರುವುದು. ಬಿಜೆಪಿ ನಾಯಕತ್ವ ದುರ್ಬಲವಾಗಿರುವುದರಿಂದ ಕಳೆದ ಚುನಾವಣೆಯಲ್ಲಿ ೬೮ ಸ್ಥಾನಗಳಿಗೆ ಕುಸಿದಿರೋದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದುಕೊಂಡು ರಾಜ್ಯದಲ್ಲಿ ನಾಲ್ಕು ವರ್ಷ ಆಡಳಿತ ನಡೆಸಿ ೬೮ ಸ್ಥಾನಗಳಿಗೆ ಕುಸಿದಿದೆ ಎಂದರೆ ಯಾರ ನಾಯಕತ್ವ ದುರ್ಬಲವಾಗಿ ಕಾಣಿಸುತ್ತದೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಮರ್ಥ ನಾಯಕತ್ವವಿದೆ. 

ವಿಧಾನಸಭಾ ಚುನಾವಣೆಯಲ್ಲಿ ೮೦ ರಿಂದ ೬೮ಕ್ಕೆ ಬಂದಿದ್ದಾರೆ. ಅದೇ ರೀತಿ ಲೋಕಸಭಾ ಚುನಾವಣೆಯಲ್ಲಿ ೨೬ ರಿಂದ ಎಷ್ಟಕ್ಕೆ ಬರುತ್ತಾರೆ ಎಂಬುದನ್ನು ಕಾದುನೋಡಿ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ವ್ಯಂಗ್ಯವಾಡಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ತ.ನಾಡು ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಕೆಶಿ
ಕೋವಿಡ್‌ ವೇಳೆ ಸಿಎಂ ಆಗಿದ್ದರೆ ಸ್ಟಾಲಿನ್‌ ಸಾಯ್ತಿದ್ರು : ಪಳನಿಸ್ವಾಮಿ ವಿವಾದ